ಪುಟ:ಪೈಗಂಬರ ಮಹಮ್ಮದನು.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

III, ಭಗವತ್ಸಂದೇಶ ಅವರು ನಿನ್ನನ್ನು ಸುಳ್ಳುಗಾರನೆನ್ನು ವರು, ಹಿಂಸೆಮಾಡುವರು, ನಿನ್ನೆ ಡನೆ ಯುದ್ಧಕ್ಕೆ ಬರುವರು, ನಿನ್ನನ್ನು ದೇಶ ಭ್ರಷ್ಟನನ್ನಾಗಿ ಮಾಡು ವರು. ನಾನು ಅಂದಿನ ವರೆಗೂ ಬದುಕಿರಬಾರದೆ ! ನಿನ್ನ ಕಡೆಯವನಾಗಿ ಆಗ್ಗೆ ಹೋರಾಡಬೇಕೆಂಬ ಆಸೆಯು ನನಗಿದೆ ; ನ ಆಸೆಯು ನೆರ ನೇರಿದರೆ ಸಾಕು ” ಎಂದನು. ಮಹಮ್ಮದನು ಅಲ್ಲಿಗೇ ಸುಮ್ಮನಾಗಲಿಲ್ಲ. ಸಕ್ಕರೆಯ ಸವಿ ಯನ್ನು ಕಂಡ ಮನುಷ್ಯನು ಮತ್ತೆ ಸಕ್ಕರೆಯನ್ನು ಪಡೆಯಲು ಯತ್ನಿ ಸದೆ ಸುಮ್ಮನಿರಬಲ್ಲನೆ ? ಅತಿಮಾನುಷವಾದ ಭವ್ಯ ಸಾಕ್ಷಾತ್ಕಾರ ವಾಣಿಯನ್ನು ಮತ್ತೊಮ್ಮೆ ಕೇಳಲು ಪ್ರಯತ್ನಿಸಿ ಅವನು ಭಗವಂತನನ್ನು ಧ್ಯಾನಮಾಡಿದನು; ಅದರಿಂದ ಫಲವಾಗದೆ ಹೋಗಲು, ಪರಿತಾಪಪಟ್ಟು ತೊಳಲಿದನು ; ವಾಣಿಯು ಕೇಳಿಸಲಿಲ್ಲ: ಶೋಕ ಗ್ರಸ್ತನಾಗಿ ಕಾತರ ಸ್ವರದಿಂದ ದೀನನಾಗಿ ಒರ ಲಿದನು, ಅವನ ರೋದನ ಧ್ವನಿಗೆ ಹೀರಾ ಪರ್ವತದ ಬಂಡೆಗಳ ಹೊರತು ಮತ್ತಾರೂ ಮಾರ್ದನಿ ಕೊಡಲಿಲ್ಲ. ತನ್ನ ಆಸೆಯು ಈಡೇರದೆ ಹೋದು ದನ್ನು ಕಂಡು, ಅವನ ಮನೋವ್ಯಥೆಗೆ ಪಾರವೇ ಇಲ್ಲದಂತಾಗಿ ಜೀವನ ದಲ್ಲಿಯೇ ಜುಗುಪ್ಪೆಯುಂಟಾಯಿತು. ತೊಳಲಿ ಬಳಲಿ ಸಾಕಾಗಿ ಅವನು ಆತ್ಮ ಹತ್ಯದ ಪ್ರಯತ್ನ ಮಾಡಿದನು. ಕರುಣಾ ಸಿಂಧುವಾದ ಭಗವಂತನು ಆಗ ತನ್ನ ದೇವ ದೂತನನ್ನು ಮತ್ತೊಮ್ಮೆ ಕಳುಹಿಸಿ, ಮಹಮ್ಮದನಿಗೆ ಕರ್ತವ್ಯ ಬೋಧೆ ಮಾಡಿಸಿದನಂತೆ : ಇದು ಮಹಮ್ಮದೀಯರ ನಂಬಿಕೆ. ಹಿಂದೂಗಳಲ್ಲಿಯ ಎಷ್ಟೋ ಮಂದಿ ಭಗವದ್ಭಕ್ತರ ಅನುಭವವೂ ಇದೇ ರೀತಿಯಾಗಿದ್ದಿತೆಂದು ನಾವೆಲ್ಲರೂ ಕೇಳಿದ್ದೇವೆ. ಊಹಾಪೋಹ ಜ್ಞಾನ ವಿಲ್ಲದೆ ಪ್ರತ್ಯಕ್ಷ ಪ್ರಮಾಣ ಪಟುಗಳಾದ ನಾಸ್ತಿಕರ ಹೊರತು ಉಳಿದವರು ಇಂತಹದನ್ನು ಸಾಮಾನ್ಯವಾಗಿ ನಂಬುತ್ತಾರೆ. ನಾಸ್ತಿಕರಲ್ಲಿ ನಾಸ್ತಿಕ ರೆನಿಸಿದವರೂ ಸಹ ಈ ಪ್ರಪಂಚವು ತನಗೆ ತಾನೇ ಸೃಷ್ಟಿಯಾಯಿತೆನ್ನುವ ಹಾಗಿಲ್ಲ; ಅವರು ಹಾಗೆ ಹೇಳುವುದೂ ಇಲ್ಲ. ಆದುದರಿಂದ ಅವರ ಅರೆವಾಸಿ ಆಸ್ತಿಕರಾದಂತೆಯೇ ಆಯಿತು. ಅವರ ನಾಸ್ತಿಕತೆಯ ಮುಖವಾಡವು ಈ ಜನ್ಮದಲ್ಲಿಯಾಗಲಿ, ತಪ್ಪಿದರೆ ಮುಂದಣ ಜನ್ಮ