________________
III, ಭಗವತ್ಸಂದೇಶ ೨೯ ಎಷ್ಟು ಕಷ್ಟಗಳು ಬಂದರೂ ಬರಲೆಂಬುದಾಗಿ ಕಲ್ಲು ಮನಸ್ಸಿನಿಂದ ನಿಂತಿದ್ದ ಮಹಮ್ಮದನ ಮೇಲೆ ಅವರ ಪ್ರಯತ್ನ ಗಳು ಯಾವುವೂ ನಡೆಯದೆ ಹೋದುವು. ಅಷ್ಟೇ ಅಲ್ಲ ; ಶತ್ರು ಪಕ್ಷದವರಲ್ಲಿ ಅಗ್ರ ಗಣ್ಯನಾದ ಓಮರನೆಂಬವನೇ ಮಹಮ್ಮದನ ಶಿಷ್ಯನಾದನು. ಮಹಮ್ಮ ದನನ್ನು ಕೇವಲ ದ್ವೇಷಿಸುತ್ತಿದ್ದವನು ಹೀಗಾಗಲು ಒಂದು ಸಂದರ್ಭ ವೊದಗಿತು : ಒಮ್ಮೆ ಓಮರನು ತನ್ನ ತಂಗಿಯ ಮನೆಗೆ ಹೋಗಿ ದ್ಯಾಗ ಅಲ್ಲಿ ಒಂದು ಪುಸ್ತಕವನ್ನು ಓದುತ್ತಿದ್ದರು ; ಅದರಲ್ಲಿಯ ವಿಷಯಗಳು ಓಮರನ ಮನಸ್ಸಿಗೆ ಬಹಳ ಅಚ್ಚು ಮೆಚ್ಚಾದುವ. ಒಂದು ಅಧ್ಯಾಯವು ಮುಗಿಯುವ ವರೆಗೂ ಅವನು ಅದನ್ನು ಮನ ಸ್ಪಿಟ್ಟು ಕೇಳಿ ಅದರಲ್ಲಿದ್ದ ಉಪದೇಶ ವಾಕ್ಯಗಳ ಸ್ವಾರಸ್ಯವನ್ನರಿತು ತಲೆದೂಗಿ, ಅದು ಯಾವ ಪುಸ್ತಕವೆಂದು ಕೇಳಿದನು. ಅದು ಮಹ ಮೃದನು ರಚಿಸಿದ್ದ ಖುರಾನೆಂದು ಹೇಳಲು, ಅವನಿಗೆ ಬ ಹ ಳ ಅಚ್ಚರಿಯಾಯಿತು. ವಿಚಾರ ಶೂನ್ಯನಾಗಿ ತಾನು ಮಹಮ್ಮದನನ್ನು ಕಾಡಿದುದಕ್ಕೆ ಅವನಿಗೆ ಬಹಳ ವ್ಯಥೆಯುಂಟಾಗಿ, ಪಶ್ಚಾತ್ತಾಪದಿಂದ ಅವನ ಮನಸ್ಸು ಖಿನ್ನವಾಯಿತು. ಕೂಡಲೆ ಅವನು ಮಹಮ್ಮದನ ಬಳಿಗೆ ಓಡಿಬಂದು ತನ್ನ ನ್ಯೂ ಶಿಷ್ಯವರ್ಗಕ್ಕೆ ಸೇರಿಸಿಕೊಂಡು ಉದ್ದರಿಸ ಬೇಕೆಂದು ಮಹಮ್ಮದನನ್ನು ಭಕ್ತಿಯಿಂದ ಬೇಡಿಕೊಂಡನು. ವೀರ ಶ್ರೇಷ್ಟನಾದ ಓಮರನು ತನ್ನ ಪಕ್ಷಕ್ಕೆ ಸೇರಿದುದರಿಂದ ಮಹಮ್ಮದನಿಗೆ ಒಂದು ಆನೆಯ ಬಲವು ದೊರೆತಂತಾಯಿತು. ವಿವೇಕಿಗಳಾದ ಅಬ್ದುಲ್ಲಾ, ಹಂಜ, ಅಲೀ ಮುಂತಾದವರ ಜೊತೆಗೆ ಓಮರನೂ ಶಿಷ್ಯ ನಾಗಿ ಸೇರಿದುದು ಮಹಮ್ಮದನ ಮತಕ್ಕೆ ಶಕ್ತಿಯುಂಟಾಯಿತು. ಮಹಮ್ಮದನಿಗೆ ಹೊಸ ಹೊಸ ಶಿಷ್ಯರು ದೊರೆತುದನ್ನೂ , ಅತ್ರ ಅಬಿಸಿನಿ ಯಾಕ್ಕೆ ಹೋಗಿದ್ದ ತಮ್ಮ ಪಕ್ಷದವರು ನಾಚಿಕೆಯಿಂದ ಹಿಂದಿರುಗಿ ದುದನ್ನೂ ಕಂಡು ಶತ್ತು ಪಕ್ಷದವರಿಗೆ ರೋಷವುಂಟಾಯಿತು. ಹಾಗಾ ದರೂ ಮಹಮ್ಮದನ ಶತ್ರುಗಳು ತಮ್ಮ ಮೂರ್ಖತನವನ್ನು ಬಿಡಲಿಲ್ಲ ; ಮಹಮ್ಮದನನ್ನೂ ಅವನ ಮನೆತನದವರನ್ನೂ ಅವನ ಶಿಷ್ಯರನ್ನೂ ಧ್ವಂಸಮಾಡಬೇಕೆಂದು ನಿರ್ಧರಮಾಡಿದರು. ಇದು ನಡೆದುದು