ಪುಟ:ಪೈಗಂಬರ ಮಹಮ್ಮದನು.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಆಗಿರುವ ಭಗವಂತನನ್ನು ಒಟ್ಟು ಸೃಷ್ಟಿಯೇ ಕೊಂಡಾಡುತ್ತಲಿದೆ. ಅವನು ಪವಿತ್ರನೂ ವಿವೇಕಿಯ ಆಗಿದ್ದಾನೆ. ಕೌತುಕಗಳು ಬೇಕೆ ? ನಿಮ್ಮ ಸುತ್ತಲೂ ಇರುವ ಸಾವಿರಾರು ಕೌತುಕಗಳನ್ನು ಕಣ್ಣು ತುಂಬ ನೋಡಿರಿ : ಸೂರ್ಯ ಚಂದ್ರರೂ, ಲೆಕ್ಕವಿಲ್ಲದಷ್ಟು ನಕ್ಷತ್ರಗಳೂ ಕ್ರಮ ನಾ ಉದಯಾಸ್ತಮಯವಾಗುತ್ತ ನೀಲಾಕಾಶದಲ್ಲಿ ಬೆಳಗುತ್ತಿರುವ ಸೊಬಗನ್ನು ನೋಡಿರಿ. ಮಳೆಯ ಹನಿಗಳು ಕೋಟ್ಯಂತರವಾಗಿ ಭೂಮಿಯ ಮೇಲೆ ಬಿದ್ದು ಪೈರು ಪಚ್ಚೆಗಳಿಗೆ ಜೀವ ಕಳೆ ತುಂಬುವುದನ್ನು ನೋಡಿರಿ, ಸುವರ್ಣ ಕಾಂತಿಯಿಂದ ಕಂಗೊಳಿಸುವ ಖರ್ಜೂರ ಫಲ ಗಳನ್ನು ನೋಡಿರಿ. ಇವೆಲ್ಲವೂ ಕೌತುಕಗಳೇ ಅಲ್ಲವೆ ? ಭಗವಂತನಿರು ವುದಕ್ಕೆ ನಿಮಗೆ ಕುರುಹುಗಳು ಬೇಕೆ ? ದಡ್ಡರೆಂದರೆ ನೀವೇ ಸರಿ ; ಏಕೆಂದರೆ, ಒಟ್ಟು ಸೃಷ್ಟಿಯೇ ಈ ಕುರುಹುಗಳಿಂದ ತುಂಬಿದೆ. ನಿಮ್ಮ ನಿಮ್ಮ ದೇಹ ರಚನೆಯನ್ನೇ ನೋಡಿಕೊಳ್ಳಿರಿ; ಅದು ಎಷ್ಟು ಅದ್ಭುತ ವಾಗಿದೆ ! ದೇಹದ ನಾನಾ ಅಂಗಗಳೂ ಎಷ್ಟು ಕ್ರಮವಾಗಿ ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತವೆ ! ಹಗಲು ಇರುಳುಗಳು, ಜನನ ಮರಣ ಗಳು, ಸ್ವಪ್ನ ಸುಷುಪ್ತಿಗಳು, ಮಳೆ ಗಾಳಿಗಳು, ಕತ್ತಲೆ ಬೆಳಕುಗಳು, ಫಲ ಪುಷ್ಟಗಳು, ಈ ಪ್ರಪಂಚ ವ್ಯಾಪಾರದ ವೈವಿಧ್ಯತೆಯ ಮಧ್ಯದಲ್ಲಿ ಕಂಡುಬರುವ ಸಾಮರಸ್ಯತೆಯಿಂದ ತುಂಬಿದ ಏಕೀ ಭಾವವ, ಮನುಷ್ಯ ತಕ್ಕೆ ಸೇರಿ ಬಗೆ ಬಗೆಯಾಗಿರುವ ಜನಗಳ ಪರಸ್ಪರ ಸಂಬಂಧವು ಇವೆಲ್ಲವನ್ನೂ ನೋಡಿದರೆ ಸೃಷ್ಟಿ ಕಲಾ ಕೋವಿದನಾದ ಭಗವಂತನೊಬ್ಬ ನಿರುವನೆಂಬುದು ಮನಸ್ಸಿಗೆ ಗೊತ್ತಾಗುವುದಿಲ್ಲವೆ? ಇವಕ್ಕಿಂತಲೂ ಹೆಚ್ಚಿನ ಕುರುಹುಗಳು ಬೇಕೆ ? ಇವಕ್ಕಿಂತಲೂ ಹೆಚ್ಚಿನ ಕೌತುಕ ಗಳೇಕೆ ??? ಮರ್ಖರಾದ ಶತ್ತು ಪಕ್ಷದವರು ಇದೊಂದನ್ನೂ ಗ್ರಹಿಸಲಿಲ್ಲ. ಗೋರ್ಕಲ್ಲ ಮೇಲೆ ಸುರಿದ ಮಳೆಯಂತೆ, ಮಹಮ್ಮದನ ಉಪದೇಶವು ಅವರ ಮನಸ್ಸಿಗೆ ಹಿಡಿಯಲಿಲ್ಲ; ಮತ್ತೊಮ್ಮೆ ಮಹ ಮೈದನಿಗೆ ಅವನ ಚಿಕ್ಕಪ್ಪನಿಂದ ಬುದ್ದಿವಾದವನ್ನು ಹೇಳಿಸಲು ಮಾಡಿದ ಪ್ರಯತ್ನ ವೂ ವ್ಯರ್ಥವಾಯಿತು. ಮೂರ್ಖತನ