ಪುಟ:ಪೈಗಂಬರ ಮಹಮ್ಮದನು.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

III, ಭಗವತ್ಸಂದೇಶ ೨/ ಈ ಕೆಲಸಗಳನ್ನು ನಿನ್ನಿಂದ ನಡೆಯಿಸುತ್ತಿದ್ದರೆ, ನಾವು ಭೂತ ವೈದ್ಯರಿಗೆ ಯಥೇಷ್ಟವಾಗಿ ಹಣವನ್ನು ಕೊಟ್ಟು, ಅದನ್ನು ಓಡಿಸುವೆವು ಎಂದು ಮೊರೆಯಿಟ್ಟರು. ಮಹಮ್ಮದನು ಅಣು ಮಾತ್ರವೂ ತನ್ನ ಮನಸ್ಸನ್ನು ಬದಲಾಯಿಸದೆ ಹಿಂದಿನಂತೆಯೇ ಖುರಾನಿನ ಮೇರೆಗೆ ಧರ್ಮ ಬೋಧೆ ಮಾಡತೊಡಗಿದನು. ಅಲ್ಲದೆ, ಅವನು ಅವರೆಲ್ಲರಿಗೂ ಖುರಾನನ್ನು ತೋರಿಸಿ, ಅದರಲ್ಲಿ ತಾನು ತಿಳಿಸಿದ್ದ ದೈನಿಕ ಸಂದೇಶಕ್ಕನುಸಾರವಾಗಿ ವರ್ತಿಸುವುದರಿಂದಲೇ ಅವರೆಲ್ಲರೂ ಉದ್ಧಾರವಾಗಿ, ಪಾಪದಿಂದ ಪಾರಾಗ. ಬೇಕೆಂದು ತಿಳಿಸಿದನು. ಅವರೆಲ್ಲರೂ ಇದನ್ನು ಕೇಳಿ ಸುಮ್ಮನಾಗಲಿಲ್ಲ. ಮಹಮ್ಮದನು ಭಗವಂತನ ಸಂದೇಶವನ್ನು ಸಾರುತ್ತಿದ್ದುದು ನಿಜವಾಗಿದ್ದ ಪಕ್ಷಕ್ಕೆ, ಆತನು ತನಗೆ ಅತಿಮಾನುಷವಾದ ಕೌತುಕವನ್ನು ಕೌತುಕ ಪ್ರದರ್ಶನ ಮಾಡಲು ಬಿನ್ನಹ ಪ್ರದರ್ಶಿಸುವುದಾದರೆ, ಆತನ ಸಂದೇಶವನ್ನು ತಾವು ನಂಬುವುದಾಗಿ ಬಿನ್ನವಿಸಿದರು. ಇದನ್ನು ಕೇಳಿ ಮಹಮ್ಮದನು ಅವರೆಲ್ಲರಿಗೂ ನಿಸ್ಸಂಶಯವಾದ ಪ್ರತ್ಯುತ್ತರವನ್ನು ಹೀಗೆ ಹೇಳಿದನು:- ಭಗವಂತನು ಅತಿಮಾನುಷವಾದ ಕೌತುಕಗಳನ್ನು ಪ್ರದರ್ಶಿಸುವುದಕ್ಕಾಗಿ ನನ್ನನ್ನು ಕಳುಹಿಸಿಲ್ಲ; ನಿಮ್ಮೆಲ್ಲರಿಗೂ ಧರ್ಮ ಬೋಧೆ ಮಾಡುವುದಕ್ಕಾಗಿಯೇ ನನ್ನನ್ನು ಕಳುಹಿಸಿದ್ದಾನೆ. ಮನುಷ್ಯರ ಮಧ್ಯದಲ್ಲಿದ್ದುಕೊಂಡು ಮನುಷ್ಯರಿಗೆ ಕರ್ತವ್ಯವನ್ನು ಬೋಧಿಸುವದ ಕ್ಯಾಗಿ ಮನುಷ್ಯ ರೂಪದಲ್ಲಿಯೇ ನನ್ನನ್ನು ಕಳುಹಿಸಿರುವನು. ದೇವ ದೂತರು ಇಲ್ಲಿಗೆ ಬರುವಹಾಗಿದ್ದರೆ, ಆತನು ತನ್ನ ದೂತನನ್ನೇ ನೇರವಾಗಿ ಇಲ್ಲಿಗೆ ಕಳುಹಿಸಿ ಅವನಿಂದ ನಿಮಗೆ ತತ್ತ್ವಬೋಧೆ ಮಾಡಿಸು ತಿದ್ದನು. ಭಗವಂತನ ಗುಟ್ಟು ನನಗೆ ತಿಳಿದಿದೆಯೆಂದಾಗಲಿ, ಭಗವಂತನ ಸಂಪದವು ನನಗೆ ಅನುಗ್ರಹಿಸಲ್ಪಟ್ಟಿದೆಯೆಂದಾಗಲಿ, ನಾನು ದೇವ ಲೋಕದವನೆಂದಾಗಲಿ ನಾನು ಎಂದೂ ಹೇಳಿದವನಲ್ಲ. ಭಗವಂತನ ದಯೆಯಿಲ್ಲದೆ ನನ್ನ ದೇಹವನ್ನೆ ನನ್ನ ಸ್ವಾಧೀನದಲ್ಲಿಟ್ಟುಕೊಳ್ಳಲಾರದ ನಾನು ಎಷ್ಟರವನು ? ಭಗವಂತನ ಸಂದೇಶವನ್ನು ಮನುಷ್ಯರಿಗೆ ಸಾರಿ ಹೇಳುವ ಸಾಮಾನ್ಯನು ನಾನು, ಕರುಣಾಮಯನೂ ಸರ್ವ ಶಕ್ತನೂ