________________
V. ಉನ್ನತಿಯ ಅಂಕುರ ೪೭ ಹೋಗಿದ್ದವನು, ತನಗೊಂದು ಸದ್ವರ್ತನೆಯನ್ನು ಪದೇಶಿಸಬೇಕೆಂದು ಬೇಡಿಕೊಳ್ಳಲು ಮಹಮ್ಮದನು, ಯಾರನ್ನೂ ದೂಷಿಸದೆ ಎಚ್ಚರದಿಂದಿರು ವುದೇ ಮೇಲಾದ ಸದ್ವರ್ತನೆಯೆಂದು ತಿಳಿಸಿದನು. ಮಹಮ್ಮದನ ಈ ಗಂಭೀರ ವಾಣಿಯು ಆಗಂತುಕನ ಹೃದಯದಲ್ಲಿ ನಾಟಿಹೋಯಿತು. ಅಂದಿನಿಂದ ಅವನು ಸರ ದೂಷಣೆಯೆಂಬ ವ್ಯಾಧಿಗೆ ದೂರವಾದನಂತೆ. ಬೋಧಕನಲ್ಲಿ ತಾಣವೂ ಸಾತ್ವಿಕತೆಯ ಇದ್ದರೆ ಇಂತಹ ಸತ್ಪಲವು ದೊರೆಯುವುದರಲ್ಲಿ ಆಶ್ಚರ್ಯವೇನು ?
- ಶೀಲವಂತರಿಗೆ ಶಿಲೆಯ ಒಲಿಯುವುದು' ಎಂಬಂತೆ ಮೆದೀನಾ ನಗರದಲ್ಲಿ ದಿನ ದಿನವೂ ಮಹಮ್ಮದನ ಪ್ರಾಬಲ್ಯವು ಹೆಚ್ಚುತ್ತ ಬಂದಿತು.
ಅದರೊಡನೆ ಆ ಪ್ರಾಂತದ ಅದರಲ್ಲಿಯ ಮುಖ್ಯ ವಿರೋಧ ಪ್ರಾಪ್ತಿ ವಾಗಿ ಆ ನಗರದ-ಯೆಹೂದ್ಯರ ಈರ್ಷೆಯ ವೃದ್ಧಿಯಾಯಿತು. ಮಹಮ್ಮದನಿಗೆ ತೊಂದರೆಯ ನ್ನುಂಟುಮಾಡಿ, ಅವನು ಮಕ್ಕಾ ನಗರದಿಂದ ಓಡಿಹೋಗಲು ಕಾರಣ ಭೂತರಾಗಿದ್ದ ಕೊರೈಷ್ ಪಂಗಡದವರೊಡನೆ ಯೆಹೂದ್ಯರು ವ್ಯಾಪಾರ ವನ್ನು ನಡೆಯಿಸುತ್ತ ಎಲ್ಲರೂ ಮೈತ್ರಿಯಿಂದಿದ್ದರು. ಉರಿಯುವ ಬೆಂಕಿಗೆ ಬಿರುಗಾಳಿಯ ಸಹಾಯವಾದರೆ ಮುಂದೆ ಹೇಳಬೇಕಾದು ದೇನು ? ಇವರೆಲ್ಲರೂ ಮಹಮ್ಮದನ ಮೇಲೆ ಮಾತೃಶ್ಯವನ್ನು ಸಾಧಿಸಲು ಉಪಕ್ರಮಿಸಿದರು. ಈ ಮಧ್ಯೆ ಮಹಮ್ಮದನು ತನ್ನ ಶಕ್ತಿ ಸಾಮರ್ಥ್ಯ ಗಳಿಂದ ಮೆದೀನಾ ನಗರದ ಮುಖ್ಯ ದಂಡಾಧಿಕಾರಿಯಂತೆ ಅಧಿಕಾರವನ್ನು ನಡೆಯಿಸತೊಡಗಿದನು. ದೊರೆಯೆಂಬ ಹೆಸರನ್ನು ಪಡೆಯದಿದ್ದರೂ, ರಾಜ ಧರ್ಮವನ್ನು ಪರಿಪಾಲಿಸುತ್ತ ವಾಸ್ತವಿಕವಾಗಿ ಪ್ರಭು ಪದವಿ ಯನ್ನು ಅನುಭವಿಸುತ್ತಿದ್ದ ಮಹಮ್ಮದನ ಕಡೆಯಿಂದ, ಆ ನಗರದ ಪ್ರಭುತ್ವವನ್ನು ಪಡೆಯಬೇಕೆಂದು ಹೊಂಚುಹಾಕುತ್ತಿದ್ದ ಯೆಹೂದ್ಯ ನಲ್ಲದ ಮುಖ್ಯಸ್ಥನೊಬ್ಬನ ಉದ್ದೇಶಕ್ಕೆ ಭಂಗವುಂಟಾಯಿತು. ಆತನೂ ಅವನ ಅನುಯಾಯಿಗಳೂ ಮಹಮ್ಮದನ ವಿರೋಧಿಗಳಾದರು. ಕಕ್ಷಿ ಪ್ರತಿ ಕಕ್ಷಿಗಳಿಂದ ಕೂಡಿ ಛಿದ್ರ ಛಿದ್ರವಾಗಿ, ಕೊಲೆಪಾತಕರಿಂದ ತುಂಬಿದ್ದ ಮದೀನಾ ನಗರದ ಅಂದಿನ ಸಮಾಜದಲ್ಲಿ ತನ್ನ ಉಜ್ಜಲ ತೇಜಸ್ಸಿ