________________
ಪೈಗಂಬರ ಮಹಮ್ಮದನು ನಿಂದ ಅಧಿಷ್ಠಾತೃವಾಗಿ ನಿಂತು, ಶಾಂತಿ ಸಮಾಧಾನಗಳನ್ನು ಸ್ಥಾಪಿಸಿದುದ ಕ್ಯಾಮಹಮ್ಮದನನ್ನು ಎಷ್ಟು ಕೊಂಡಾಡಿದರೂ ಸಾಲದು. ಮೆದೀನಾ ನಗರ ನಿವಾಸಿಗಳಿಗೆ ಮಹಮ್ಮದನು ಸ್ವಾತಂತ್ರವನ್ನು ಕೊಟ್ಟು, ಭಗವಂತನ ಎದುರಿನಲ್ಲಿ ಎಲ್ಲರೂ ಸಮಾನರೆಂದೂ, ಎಲ್ಲರೂ ಒಂದೇ ಜನಾಂಗಕ್ಕೆ ಸೇರಿದವರೆಂದೂ ಉದ್ಯೋಷಿಸಿ, ಅವರೆಲ್ಲರಿಗೂ ಸಮಾನ ವಾಗಿ ವ್ಯಕ್ತಿ ಸ್ವಾತಂತ್ರ್ಯವನ್ನು ಕರುಣಿಸಿದನು. ಅಲ್ಲದೆ, ಇಸ್ಲಾಂ ಮತದವರು ಇತರರನ್ನು ಹಿಂಸಿಸುವ ಆಲೋಚನೆಯನ್ನು ಮಾಡುವುದಕ್ಕೆ ಅವಕಾಶವನ್ನೆ ತಪ್ಪಿಸಬೇಕೆಂಬ ಅಭಿಪ್ರಾಯದಿಂದ, ಮಹಮ್ಮದನು ತನ್ನ ಅಪ್ಪಣೆಯಿಲ್ಲದೆ ಯಾರೊಡನೆಯ ಮಹಮ್ಮದೀಯರು ಕಾದಾಡಕೂಡ ದೆಂದು ಕಟ್ಟಾಜ್ಞೆ ಮಾಡಿದನು ; ತನ್ನ ಅನುಯಾಯಿಗಳು ಇತರರೊಡ ನೆಯೇ ಆಗಲಿ, ತಮ್ಮಲ್ಲಿಯೇ ಆಗಲಿ ವಿವಾದ ಮಾಡಬೇಕಾಗಿ ಬಂದರೆ, ಅಂತಹ ವಿವಾದದಲ್ಲಿ ಅವರು ತನ್ನ ತೀರ್ಮಾನವನ್ನೆ ಅಂಗೀಕರಿಸ ಬೇಕೆಂದೂ ಅಪ್ಪಣೆಮಾಡಿದನು; ಇಷ್ಟೆ ಅಲ್ಲ; ಯೆಹೂದ್ಯರೇ ಮುಂತಾದ ಅನ್ಯ ಮತೀಯರು ಕೂಡ ತಮ್ಮ ಇಷ್ಟ ಬಂದಂತೆ ದೇವತಾ ರಾಧನೆಯನ್ನು ನಡೆಯಿಸಿಕೊಳ್ಳಬಹುದೆಂದೂ, ಇಸ್ಲಾಂ ಮತಕ್ಕೆ ಸೇರಿ ದೃವರಂತೆಯೇ ಅವರಿಗೂ ಸಮಾನವಾದ ಹಕ್ಕು ಬಾಧ್ಯತೆಗಳಿರತಕ್ಕು ದೆಂದೂ, ಮದೀನಾ ನಗರದ ಯೋಗಕ್ಷೇಮದಲ್ಲಿ ಆದರವನ್ನು ವಹಿಸಿ ಜನಪದ ಭಾವವನ್ನವಲಂಬಿಸಿ ವರ್ತಿಸತಕ್ಕವರೆಲ್ಲರೂ ತನ್ನ ಪ್ರೀತಿ ವಿಶ್ವಾಸಗಳಿಗೆ ಪಾತ್ರರೆಂದೂ ಶಾಸನ ಪತ್ರಿಕೆಯನ್ನು ಹೊರಡಿಸಿದನು ; ಮೆದೀನಾ ನಗರ ನಿವಾಸಿಗಳು ಯಾವ ರೀತಿಯಲ್ಲಿ ವರ್ತಿಸಬೇಕೆಂಬ ವಿಷಯವಾಸಖಾಚೀನವಾದ ನಿಬಂಧನೆಗಳನ್ನು ರಚಿಸಿದನು. ಆದರೆ ಗೂಬೆಯು ಸೂರ್ಯನ ತೇಜಸ್ಸನ್ನು ಗ್ರಹಿಸಬಲ್ಲುದೆ ? ಮಹಮ್ಮದನ ಎ ಫಿಗಳು ಅವನ ಸದ್ದುಣಗಳಿಗೆ ಬೆಲೆಕೊಡದೆ ಸರ್ವ ಪ್ರಯತ್ನ ದಿಂದ ಅವನನ್ನು ನೆಗ್ಯ ಬೇಕೆಂದು ದೃಢ ಸಂಕಲ್ಪ ಮಾಡಿದರು. ಮಹ ಮದನಿಗೆ ಬಲವದ್ವಿರೋಧವು ಕೈಗಟ್ಟಿದಂತಾಯಿತು. ವಿರೋಧ ಪಕ್ಷದವರು ಮಹಮ್ಮದನನ್ನು ಬಹು ವಿಧವಾಗಿ ಪೀಡಿಸ ತೊಡಗಿದರು. ಅವರೆಲ್ಲರೂ ಸಂಸ್ಕಾರ ವಿಹೀನರಾದ ಕಾರಣ, ಹೇಯವಾದ