ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

V, ಉನ್ನತಿಯ ಅಂಕುರ ५८ ಕಾರ್ಯಗಳನ್ನು ಮಾಡಲು ಮಾತ್ರ ಲೇಶ ಮಾತ್ರವೂ ಅಳುಕುತ್ತಿರಲಿಲ್ಲ. ಇಸ್ಲಾಂ ಮತಕ್ಕೆ ಸೇರಿದ ಸ್ತ್ರೀಯರ ಮೇಲೆ ಅಪವಾದ ವಿಷಮ ಸಂಕಟ ಗಳನ್ನು ಹೊರಿಸಿ ಅವರಿಗೆ ಅವಮಾನ ಮಾಡುವುದು, ಖುರಾನಿನ ವಾಕ್ಯಗಳಿಗೆ ಅಪಾರ್ಥವಾಗುವಂತೆ ಪದ ಪಲ್ಲಟ ಮಾಡಿ ವ್ಯಂಗ್ಯವಾಗಿ ಅವುಗಳನ್ನು ಹೇಳಿ ಅಪಹಾಸ್ಯ ಮಾಡು ವುದು. ಮಹಮ್ಮದನಲ್ಲಿ ಅಲಕ್ಷ್ಯ ಭಾವವನ್ನು ತೋರ್ಪಡಿಸು ವದುಇವೇ ಮುಂತಾದವುಗಳು ಅವರು ನಡೆಸುತ್ತಿದ್ದ ಅಕೃತ್ಯಗಳು. ಇಷ್ಟೇ ಅಲ್ಲ; ತಾವು ತಾತ್ಕಾಲಿಕವಾಗಿ ಮಾತ್ರವೇ ಮಹಮ್ಮದನ ಅಧಿ ಕಾರಕ್ಕೆ ತಲೆ ತಗ್ಗಿಸಿರುವುದಾಗಿಯೂ, ಸಮಯವೂ ಸಿಕ್ಕಿದೊಡನೆಯೇ ಎಲ್ಲರೂ ಅವನಿಗೆ ಪ್ರತಿಭಟಿಸಿ ನಿಲ್ಲಲು ದೃಢ ಸಂಕಲ್ಪ ಮಾಡಿರುವು ದಾಗಿಯ, ಕೋರೈಸ್ ಮನೆತನದವರೇ ಮುಂತಾದ ಮಹಮ್ಮದನ ಶತ್ರುಗಳಿಗೆ ಅವರು ವಾರ್ತೆಯನ್ನು ಮುಟ್ಟಿಸಿದರು. ಮದೀನಾ ನಗರ ದಲ್ಲಿ ಮಹಮ್ಮದನ ವಿಷಯವಾಗಿ ದ್ರೋಹ ಚಿಂತನೆ ಮಾಡುತ್ತಿದ್ದವರ ಸಂಖ್ಯೆಯು ದಿನ ದಿನಕ್ಕೆ ಹೆಚ್ಚಿತು. ಅವರೆಲ್ಲರೂ ಒಟ್ಟಿಗೆ ಸರಿ ಯಾವ ಸಮಯದಲ್ಲಿ ದಂಗೆಯೇಳುವರೋ ಎಂದು ಅವರು ಕಳವಳಸಡು ತಿದ್ದನು. ಅದರ ಜೊತೆಗೆ ಹೊರಗಿನ ಪ್ರಾಂತಗಳಿಂದ ಯಾವ ಸಮಯ ದಲ್ಲಿ ಶತ್ರುಗಳು ಬಂದು ಮೆದೀನಾ ನಗರಕ್ಕೆ ಮುತ್ತಿಗೆ ಹಾಕುವರೋ ಎಂಬ ಆತಂಕವು ಬೇರೆ ಅವನನ್ನು ಬಾಧಿಸತೊಡಗಿತು. ಇಂತಹ ವಿಷಮ ಸಂಕಟವು ಒದಗಿದರೂ, ಮಹಮ್ಮದನು ಲೇಶ ಮಾತ್ರವೂ ಧೈರಗುಂದ ಅಲ್ಲ ; ಭಗವಂತನ ಸಹಾಯವನ್ನೇ ನೆರೆ ನಂಬಿ, ಆ ಮಹಾ ಪುರುಷನು ಕಾರ್ಯಕ್ಷೇತ್ರಕ್ಕೆ ನುಗ್ಗಿದನು. - ನಗರದ ನೆಮ್ಮದಿಗೆ ಭಂಗ ಬರುವ ಸೂಚನೆಗಳು ತಲೆದೋರಿದುದ ರಿಂದ ತಾನು ಇನ್ನು ತಟಸ್ಸನಾಗಿದ್ದರೆ ಕಾರ್ಯವು ಹದಗೆಡುವುದೆಂದು ಮಹಮ್ಮದನಿಗೆ ತೋರಿತು. ಅವನು ನಿರ್ವಾಹವಿಲ್ಲದೆ ಯುದ್ಯೋದ್ಯಮ ಅಂಕೆ ತಪ್ಪಿದವರ ಸೊಕ್ಕನ್ನು ಮುರಿಯಬೇಕಾಯಿತು: ಕೆಲವರನ್ನು ಮದೀನಾ ನಗರದಿಂದ ಉಚ್ಚಾಟನೆ ಮಾಡಿದನು ; ಮತ್ತೆ ಕೆಲವರಿಗೆ ಕಾರಾಗೃಹವಾಸವನ್ನು ವಿಧಿಸಿದನು ;