ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಒಬ್ಬಿಬ್ಬರಿಗೆ ಮರಣ ದಂಡನೆಯನ್ನೂ ಕೊಟ್ಟನು. ನಗರ ನಿವಾಸಿಗಳ ಒಟ್ಟು ಯೋಗಕ್ಷೇಮದ ದೃಷ್ಟಿಯಿಂದ ಮಹಮ್ಮದನು, ತನಗೆ ಇಷ್ಟವಿಲ್ಲ ದಿದ್ದರೂ, ಈ ರೀತಿಯಾಗಿ ಶಿಕ್ಷೆಯನ್ನು ವಿಧಿಸಬೇಕಾಯಿತು. ಅವನು ತನ್ನ ಕಡೆಯವರನ್ನು ಸೇರಿಸಿ ಯುದ್ದದಲ್ಲಿ ಶಿಕ್ಷಣವನ್ನು ಕೊಡುವ ವೇಳೆಗೆ ಸರಿಯಾಗಿ ಕೋರೈಸ್ ಮನೆತನದವರು ಮಕ್ಕಾ ನಗರದಿಂದ ಬಂದು ಮದೀನಾ ನಗರವನ್ನು ಮುತ್ತಿದರು. ಮಹಮ್ಮದನು ಗತ್ಯಂ ತರವನ್ನು ಕಾಣದೆ, ಅವರೊಡನೆ ಯುದ್ಧಕ್ಕೆ ನಿಲ್ಲಬೇಕಾಯಿತು. ಶತ್ರು ಸೈನ್ಯದಲ್ಲಿದ್ದಂತೆ ಮಹಮ್ಮದನ ಸೈನ್ಯದಲ್ಲಿ ಸರ್ವ ಸಮೃದ್ಧವಾದ ಆನು ಕೂಲ್ಯತೆಯಿರಲಿಲ್ಲ. ಆದರೂ, ಭಗವಂತನ ಮೇಲೆ ಭಾರವನ್ನು ಹಾಕಿ ಮಹಮ್ಮದನೂ ಅವನ ಅನುಯಾಯಿಗಳೂ ಬಹಳವಾಗಿ ಹೆಣಗಿ ಯುದ್ಧ ಮಾಡಿ, ಕೊನೆಗೆ ಬದರ್ ಎಂಬ ಯುದ್ಧರಂಗದಲ್ಲಿ ಜಯಶೀಲರಾದರು. ತನಗೆ ಸೆರೆಸಿಕ್ಕಿದವರಲ್ಲಿ ದಯೆ ತೋರಿಸಿದುದೊಂದು, ಶತ್ರುಪಕ್ಷದವರಿಂದ ದೊರೆತ ಕೊಳ್ಳೆಯಲ್ಲಿ ದೀನಾನಾಥರ ಸಹಾಯಕ್ಕಾಗಿ ಒಂದು ಭಾಗವನ್ನು ತೆಗೆದಿಟ್ಟುದೊಂದು-ಇವೆರಡೂ ಮಹಮ್ಮದನ ಉದಾತ್ತ ವರ್ತನೆಗಳು, ಅರಬ್ಬಿಯವರಲ್ಲಿ ವಿಜೇತರು ಆ ರೀತಿ ಕರುಣೆ ತೋರಿಸಿದುದನ್ನು ಅವರು ಹಿಂದೆ ಎಂದೂ ಕಂಡು ಕೇಳಿದುದೇ ಇಲ್ಲ. ಮಹಮ್ಮದನ ಉದಾತ್ತ ಪ್ರಕೃತಿಯು ಅವರಿಗೆ ವಿಸ್ಮಯವನ್ನುಂಟುಮಾಡಿತು. ಇಸ್ಲಾಂ ಮತದ ಚರಿತ್ರೆಯಲ್ಲಿ ಬದರ್ ಕದನವು ಅತ್ಯಂತ ಪ್ರಾಮುಖ್ಯವಾದುದು. ಅದರಲ್ಲಿ ಮಹಮ್ಮದನು ಜಯಶೀಲನಾಗದೆ ಹೋಗಿದ್ದ ಪಕ್ಷದಲ್ಲಿ ಅವನಾಗಲಿ, ಅವನು ಬೋಧಿಸಿದ ಮತವಾಗಲಿ ಅಭ್ಯುದಯವನ್ನೆ೦ದಿಗೂ ಕಾಣು ತಿರಲಿಲ್ಲ; ಇಷ್ಟೇ ಅಲ್ಲದೆ, ಮಹಮ್ಮದನೂ ಅವನ ಅನುಯಾಯಿಗಳೂ ಜೀವಿಸಿರುವುದೇ ಆಗೈ ದುರ್ಘಟವಾಗುತ್ತಿದ್ದಿತು. ಜಗನ್ನಿಯಾಮಕನು ಸೂತ್ರಧಾರಿಯಾಗಿರುವಲ್ಲಿ ಸಾಧುಗಳಿಗೆ ಭಯವೆಲ್ಲಿಯದು ? ಬದರ್ ಕದನದಲ್ಲಿ ತಮಗೆ ವಿಜಯ ಪ್ರಾಪ್ತಿಯಾದುದನ್ನು ಕಂಡು, ಮಹಮ್ಮದನ ಅನುಯಾಯಿಗಳು ಉತ್ಸಾಹದಿಂದ ದೈವ ನಿಯಂ ಹುರಿದುಂಬಿದರು ; ತಮಗೆ ದೆವ ಸಹಾಯವೂಂಟೆಂಬ ಭರವಸೆಯಿಂದ ಅವರ ದೈರ್ಯೊತ್ಸಾಹಗಳು ಮೊದಲಿಗಿಮ್ಮಡಿಯಾ