ಪುಟ:ಪೈಗಂಬರ ಮಹಮ್ಮದನು.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫) ಪೈಗಂಬರ ಮಹಮ್ಮದನು ಸೆರೆಸಿಕ್ಕಿದವರನ್ನು ಬಿಡುಗಡೆ ಮಾಡಲು ಹಣವನ್ನು ತೆಗೆದುಕೊಳ್ಳುವುದು ಆ ಕಾಲದ ಪದ್ಧತಿಯಾಗಿದ್ದಿತು. ಹಾಗೆ ಹಣವನ್ನು ಕೊಡಲು ನಿರ್ಗತಿಕ ರಾಗಿದ್ದವರಿಗೆ ಅವನು ದಯೆ ತೋರಿಸಿ ಅವರನ್ನು ಉಚಿತವಾಗಿಯೇ ಬಿಡುಗಡೆ ಮಾಡಿದನು. ಸೆರೆಯಾಳುಗಳಲ್ಲಿ ಓದು ಬರೆಹಗಳನ್ನು ಬಲ್ಲ ಪ್ರತಿಯೊಬ್ಬನೂ ಹತ್ತು ಮಂದಿ ಬಾಲಕರಿಗೆ ಪಾಠ ಹೇಳಬೇಕೆಂಬ ನಿಯ ಮದ ಮೇಲೆ ಮಹಮ್ಮದನು ಅವರಿಗೆ ಸ್ವಾತಂತ್ರವನ್ನು ಕರುಣಿಸಿದನು. ಅವರು ತಲೆಯೊಂದಕ್ಕೆ ನಾಲ್ಕು ಸಾವಿರ ' ದರ್ಹಂ' ನಾಣ್ಯಗಳನ್ನು ಕೊಡ ಬೇಕಾಗಿದ್ದಿತು. ಅಷ್ಟು ಹಣವನ್ನು ಕೊಡಲು ಶಕ್ಯರಾಗಿದ್ದವರಿಂದಲೂ ಹಣ ತೆಗೆದುಕೊಳ್ಳದೆ ಮಹಮ್ಮದನು ಈ ನಿಯಮವನ್ನು ವಿಧಿಸಿ ದುದನ್ನು ನೋಡಿದರೆ ಬಾಲಕರ ವಿದ್ಯಾಭ್ಯಾಸವು ಅತ್ಯಂತ ಬೆಲೆಯುಳ್ಳು ದೆಂಬುದು ಮಹಮ್ಮದನ ಅಭಿಪ್ರಾಯವೆಂಬುದಕ್ಕೆ ಸಂಶಯವುಂಟೆ ? ಸೈನಿಕನ ಕತ್ತಿಗಿಂತಲೂ ಪಂಡಿತನ ಲೇಖನಿಯು ನೂರುಮಡಿ ಮಹತ್ವ ವುಳ್ಳುದೆಂದು ವಿದ್ಯಾಭಿಮಾನಿಯಾದ ಮಹಮ್ಮದನು ಹೇಳುತ್ತಿದ್ದನು. ಸೆರೆಯಾಳುಗಳಲ್ಲಿ ಮಹಮ್ಮದನು ತೋರಿಸಿದ ಕರುಣೆಗೆ ಅತ್ಯುತ್ತಮ ವಾದ ಮತ್ತೊಂದು ನಿದರ್ಶನವುಂಟು : ಮಕ್ಕಾ ನಗರ ನಿವಾಸಿಯಾದ ಸೆರೆಯಾಳೊಬ್ಬನು ಶಕ್ತನಾದ ವಾಗಿಯೆನಿಸಿ ಪ್ರಸಿದ್ಧನಾಗಿದ್ದನು. ಇಸ್ಲಾಂ ಮತವು ಹೇಯವಾದುದೆಂದು ಬೋಧಿಸಿ ಅದರ ವಿಷಯದಲ್ಲಿ ಜನರಿಗೆ ಅಸಹ್ಯತೆಯುಂಟಾಗುವಂತೆ ಮಾಡುವುದೇ ಅವನ ವತವಾ ಗಿದ್ದಿತು. ಅಂಥವನು ಬದರ್‌ ಕದನದಲ್ಲಿ ಮಹಮ್ಮದನ ಸೈನಿಕರಿಗೆ ಸೆರೆ ಸಿಕ್ಕಲು, ಅವನ ಹಲ್ಲುಗಳನ್ನು ದುರಿಸಿ ಅವನು ಮುಂದೆ ಸುರಸವಾಗಿ ಭಾಷಣ ಮಾಡುವುದನ್ನು ತಪ್ಪಿಸಬೇಕೆಂದು ಸೈನಿಕರೆಲ್ಲರೂ ಮಹಮ್ಮದ ನಿಗೆ ಸಲಹೆ ಕೊಟ್ಟರು. ಮಹಮ್ಮದನು ಅವರ ಮಾತಿಗೆ ಕಿವಿಗೊಡದೆ, ( ಅವನನ್ನು ಅ೦ಗ ಹೀ ನ ನ ನ್ನಾಗಿ ಮಾಡಿದರೆ ದೇವರು ನನ್ನ ನ್ಯೂ ಅಂಗಹೀನನನ್ನಾಗಿ ಮಾಡಿ ನನ್ನ ಅಪರಾಧಕ್ಕೆ ಶಿಕ್ಷೆಯನ್ನು ವಿಧಿ ಸುವನು ಎಂದು ಉತ್ತರ ಹೇಳಿದನು. ಹೀಗೆ, ಶತ್ರುಗಳಿಗೂ ಕರುಣೆ ಯನ್ನು ತೋರಿಸಿದುದರಿಂದ, ಮಹಮ್ಮದನ ಯಶಸ್ಸು ಎಲ್ಲೆಲ್ಲಿಯ ಹರಡಿತು.