ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

VI, ಮಹಮ್ಮದನ ಅಧಿನಾಯಕತ್ವದ ಒಳಗುಟ್ಟು ೫೫ ಬದರ್ ಕದನದಲ್ಲಿ ಮಹಮ್ಮದನಿಗೆ ಜಯವಾದುದರಿಂದ ಕೊರೈಮ್ ಮನೆತನದವರು (ರಗುಂದಿದರೂ ದ್ವೇಷ ಸಾಧನೆಯನ್ನೇನೂ ಬಿಡಲಿಲ್ಲ. ಶತ್ರು ಪಕ್ಷದ ಯೋಧರ ಸಂಖ್ಯೆಯು ಮಹಮ್ಮದನ ಕಡೆಯಲ್ಲಿದ್ದವರಿ ಗಿಂತಲೂ ಅಧಿಕವಾಗಿದ್ದರೂ ಮಹಮ್ಮದನೇ ಜಯಶೀಲನಾದುದನ್ನು ಕಂಡು ಯೆಹೂದ್ಯರೂ ಇತರರೂ ವಿಸ್ಮಿತರಾಗಿ ಮಹಮ್ಮದನಿಗೆ ದೈವ ಸಹಾಯವೂಂಟೆಂದು ಅನೇಕರು ನಿರ್ಧರ ಮಾಡಿದರು. ಇದರ ಫಲಿತಾಂಶವಾಗಿ ಬಹಳ ಮಂದಿಗೆ ಮಹಮ್ಮದನಲ್ಲಿ ಆದರವೂ ಗೌರವವೂ ಉಂಟಾದುವು. ಆದರೆ ವಿಜಯಪ್ರಾಪ್ತಿಯೊಂದೇ ಅದಕ್ಕೆ ಕಾರಣವಲ್ಲ; ಮಹಮ್ಮದನಲ್ಲಿದ್ದ ಅಧಿನಾಯಕತ್ವ ಲಕ್ಷಣಗಳೇ ಅದಕ್ಕೆ ಬಹು ಮಟ್ಟಿಗೆ ಕಾರಣವೆಂಬುದನ್ನು ಸಂಕ್ಷೇಪವಾಗಿ ವಿವರಿಸುವೆವು. ಅನಾಥ ಬಾಲಕನಾಗಿದ್ದುದು ಮೊದಲಾಗಿ ಪ್ರಭು ಸ್ನಾನವನ್ನು ಪಡೆಯುವ ವರೆಗೂ ಮಹಮ್ಮದನು ನಾನಾ ಸನ್ನಿವೇಶಗಳಲ್ಲಿಯೂ ನಾನಾ ಸ್ಥಿತಿ ಗತಿಗಳಲ್ಲಿಯೂ ಚೆನ್ನಾಗಿ ನುರಿತು ಮಹಮ ದನ ಲೋಕಾನುಭವವನ್ನು ಪಡೆದಿದ್ದನು. ಆದಕಾರಣ, ಅಧಿನಾಯಕತ್ವದ ದೇವಾಯತ್ತವಾಗಿ ಅವನಲ್ಲಿ ನೆಲೆಗೊಂಡಿದ್ದ ಸದ್ಗುಣ ಗಳು ಉತ್ತಮ ರೀತಿಯಲ್ಲಿ ಪರಿಸ್ಪುಟಗೊಂಡಿದ್ದು ವು. ಜನರಿಗೆ ಅಧಿನಾಯಕನಾಗಿ ನಿಂತು ಅವರನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಲು ಅವನಿಗೆ ತಕ್ಕ ಸಾಮರ್ಥ್ಯವಿದ್ದಿತು. ತಾನು ವಿಧಿಸಿದ ನಿಯಮಗಳನ್ನು ಇತರರಂತೆಯೇ ತಾನೂ ಅನುಷ್ಠಾನದಲ್ಲಿ ತರುತ್ತಿದ್ದನು ; ಖುರಾನಿನಲ್ಲಿ ಹೇಳಿರುವ ಸದ್ವರ್ತನೆಯ ನಿಯಮಗಳನ್ನು ತಾನು ಸ್ವತಃ ಪರಿಪಾಲಿಸುತ್ತ, ಇತರ ರೆಲ್ಲರಿಗೂ ಆದರ್ಶಪ್ರಾಯನಾಗಿದ್ದನು. ಖುರಾನಿನ ಯಾವುದಾದರೂ ಪದ್ಯಗಳಿಗೆ ಸರಿಯಾಗಿ ಅರ್ಥ ಸಮನ್ವಯಮಾಡಿ ವಿವರಿಸಬೇಕೆಂದು ಶಿಷ್ಯರು ತನ್ನ ನ್ನು ಕೇಳಿದಾಗ ಮಹಮ್ಮದನ ಪತ್ನಿಯಾದ ಅಯೇಷೆಯು ಮಹಮ್ಮದನ ಜೀವನ ಕ್ರಮದಲ್ಲಿ ಅದಕ್ಕೆ ಸಂಬಂಧಪಟ್ಟ ಸಂಗತಿಗಳನ್ನೇ ಉದಾಹರಣೆಯಾಗಿ ತಿಳಿಸಿ, ಅವುಗಳನ್ನು ವಿವರಿಸುತ್ತಿದ್ದಳಂತೆ. ಇದಲ್ಲದೆ, ಕೆಲವು ನಿರ್ದಿಷ್ಟ ಸನ್ನಿವೇಶಗಳನ್ನು ಸೂಚಿಸಿ, ಅಂತಹ ವೇಳೆಗಳಲ್ಲಿ ಮಹ ಒಳಗುಟ್ಟು