ಪುಟ:ಪೈಗಂಬರ ಮಹಮ್ಮದನು.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಎಂಟನೆಯ ಅಧ್ಯಾಯ ವಿಜಯೋತ್ಸಾಹ ಊಹುದೆ ಕದನವಾದ ಬಳಿಕ ಯೆಹೂದ್ಯರಿಗೂ ಮಹಮ್ಮದೀ ಯರಿಗೂ ದ್ವೇಷವ ಹೆಚ್ಚಿತು. ದೆಹೂದರು ಮಹಮ್ಮದನಲ್ಲಿ ಈರ್ಷೆ ಯುಳ್ಳವರಾಗಿದ್ದರೆಂಬುದನ್ನೂ ಅವರು ಮಹಮ್ಮದೀ ದ್ರೋಹಿಗಳಿಗೆ ಶಿಕ್ಷೆ ಯರಿಗೆ ನಾನಾ ವಿಧಗಳಲ್ಲಿ ಕಿರುಕುಳವನ್ನು ಕೊಡು ತ್ರಿದ್ದರೆಂಬುದನ್ನೂ ಹಿಂದೆಯೇ ಹೇಳಿದೆ. ಅವರು ಮಹಮ್ಮದನೊಡನೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಲಕ್ಷ ಕೊಡದೆ, ಖುರಾನಿನ ವಿಷಯದಲ್ಲಿಯ ಕುಲ ಸ್ತ್ರೀಯರ ವಿಷಯದಲ್ಲಿಯ ಕುಹಕವನ್ನು ಹೆಚ್ಚಿಸಿದರು. ಅವರಲ್ಲಿದ್ದ ಕಾಬನೆಂಬ ಕವಿಯೊಬ್ಬನು ಇಸ್ಲಾಂ ಮತವನ್ನು ಅಪಹಾಸ್ಯಕ್ಕೀಡುಮಾಡುವ ಉದ್ದೇಶದಿಂದ ಅನೇಕ ಕವನಗಳನ್ನು ಹೊಸೆದು ಸೈನಿಕರ ಮುಂದೆ ಅವನ್ನು ರಾಗದಿಂದ ಹಾಡಿ ಅವರಿಗೆ ಜುಗುಪ್ಪೆಯನ್ನು ಂಟುಮಾಡಲು ಯತ್ನಿಸಿದನು ; ಮಹ ಮ್ಮದನ ಆಧಿಪತ್ಯಕ್ಕೆ ಸೇರಿದ್ದ ರಾಷ್ಟ್ರ ದಲ್ಲಿ ದೊರಕರವಾದ ಘೋರ ಕೃತ್ಯಗಳನ್ನು ಮಾಡುವುದಕ್ಕೂ ಅವನ ಕೈಹಾಕಿದನು. ಅತ್ಯ, ಮೆದೀನಾ ನಗರಕ್ಕೆ ಸ್ವಲ್ಪ ದೂರದಲ್ಲಿದ್ದ ಬೈಬರ್ ಪ್ರಾಂತದಲ್ಲಿ ಅಬೂರಫ್-ಎ. ಸಲ್ಲಾ ಎಂಬೊಬ್ಬ ಯೆಹೂದ್ಯ ಘಾತುಕನು ತನ್ನ ವರೊಡನೆ ನೆಲೆಗೊಂಡು ಮಹಮ್ಮದನನ್ನು ತೊಂದರೆಪಡಿಸತೊಡಗಿದನು. ಮಹ ಮ್ಮದೀಯರಲ್ಲಿಯೂ ಅವರ ಗುರುವಿನಲ್ಲಿಯೂ ಅವನಿಗಿದ್ದ ಕಾರಣ ವಾದ ದ್ವೇಷದಿಂದ ಅವನು "ಸುಲೇಂ,' ' ಘಟಫಾನ್ ' ಮುಂತಾದ ಅರಬ್ಬಿ ಪಡೆಗಳನ್ನು ಮಹಮ್ಮದನಿಗೆ ವಿರೋಧವಾಗಿ ಎತ್ತಿ ಕಟ್ಟಿದನು. ಈ ಘಾತುಕರಿಬ್ಬರನ್ನೂ ದಂಡಿಸಿದಲ್ಲದೆ ರಾಷ್ಟ್ರ ದ ಯೋಗಕ್ಷೇಮವನ್ನು ಕಾಪಾಡುವುದು ಅಸಾಧ್ಯವಾಗಿ ತೋರಿ, ನಿರ್ವಾಹವಿಲ್ಲದೆ ಮಹಮ್ಮದನು ಅವರಿಗೆ ಮರಣ ದಂಡನೆಯನ್ನು ವಿಧಿಸಿದನು. ಮೃತರಾದ ಆ ಇಬ್ಬರು ದ್ರೋಹಿಗಳ ವಿತರು ಮಹಮ್ಮದನ ಕಡೆಯವರನ್ನು ಕಾಡತೊಡಗಿದರು. ಮಹಮ್ಮದನು ಕ್ಷಮೆಯನ್ನು