ವಿಷಯಕ್ಕೆ ಹೋಗು

ಪುಟ:ಪೈಗಂಬರ ಮಹಮ್ಮದನು.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

VIII. ವಿಜಯೋತ್ಸಾಹ ತೋರಿಸಿದಷ್ಟೂ ಅವರು ತಮ್ಮ ಉಚ್ಚಂಗಲ ವೃತ್ತಿಯನ್ನು ಹೆಚ್ಚು ಹೆಚ್ಚಾಗಿ ಮೆರೆಯಿಸತೊಡಗಿದರು. ಅವರಿಂದ ಘೋರವಾದ ಪ್ರಚಾ ಪೀಡೆಗೆ ಆರಂಭವಾಯಿತು. ರಾಷ್ಟ ದಿಂದ ಕೆಲವು ಮಂದಿ ಯೆಹೂದ್ಯರ ನೀತಿ ಬಾಹಿರರಾಗಿದ್ದ ಆ ವಿಷಯ ಲಂಪಟರ ಹಾವ ಉಚಾ ಟಸೆ ಳಿಯನ್ನು ತಡೆಯಲಾರದೆ ಮಹಮ್ಮದೀಯರು ಅವರ ಮೇಲೆ ಆಗಾಗ ಕೈವಾಡುತ್ತಿದ್ದರು. ಒಂದು ಸಂದರ್ಭದಲ್ಲಿ ದೊಡ್ಡ ಗಲಭೆಯಾಗಿ, ಉಭಯ ಪಕ್ಷಗಳಲ್ಲಿಯೂ ಹಲವರು ಮೃತಪಟ್ಟರು; ರಕ್ತದ ಕೋಡಿಯು ಹರಿಯಿತು. ಅಷ್ಟರಲ್ಲಿ ಮಹ ಮೃದನು ಅಲ್ಲಿಗೆ ಬಂದು, ತನ್ನ ವರಿಗೆ ಸಮಾಧಾನ ಹೇಳಿ, ಹೊಡೆದಾಟ ವನ್ನು ನಿಲ್ಲಿಸುವಂತೆ ಅಪ್ಪಣೆ ಮಾಡಿ, ಅಂದಿನ ವಿದ್ಯಮಾನಗಳನ್ನು ಕೂಲಂ ಕಷವಾಗಿ ವಿಚಾರಣೆ ಮಾಡಿದನು. ದಂಗೆಕೋರರಾದ ಯೆಹೂಂ ರೆಲ್ಲರೂ ಮಹಮ್ಮದೀಯ ಮತ ಸ್ವೀಕಾರ ಮಾಡಿದರೆ ಮೆದೀನಾ ನಗರ ದಲ್ಲಿರಬಹುದೆಂದೂ ಅದಕ್ಕೆ ಸಮ್ಮತಿಸದ ಪಕ್ಷಕ್ಕೆ ಅವರೆಲ್ಲರೂ ತನ್ನ ರಾಷ್ಟ್ರದಿಂದ ಮತ್ತೆಲ್ಲಿಗಾದರೂ ಹೊರಟುಹೋಗಬೇಕೆಂದೂ ಮಹ ಮೃದನು ಅಸ್ಕಣೆ ಮಾಡಿದನು ; ಮೊದಮೊದಲು ಅವರು ಇದಕ್ಕೆ ಅಕ್ಷ ಗೊಡದೆ ಹಾವಳಿ ಮಾಡುತ್ತಿದ್ದರೂ, ಮಹಮ್ಮದನ ಉಪಟಳವನ್ನು ತಾಳಲಾರದೆ, ಕೊನೆಗೆ ಅವನ ರಾಷ್ಟ್ರವನ್ನು ಬಿಟ್ಟು ಹೋಗಬೇಕಾ ಯಿತು. ಅವರಲ್ಲಿ ಕೆಲವರು ಖೈಬರ” ಪ್ರಾಂತಕ್ಕೆ ವಲಸೆ ಹೋಗಿ, ಮಹಮ್ಮದನ ಮೇಲೆ ದ್ವೇಷವನ್ನು ತೀರಿಸಿಕೊಳ್ಳುವ ಉಪಾಯವು ಯಾವುದೆಂಬ ಆಲೋಚನೆಯಲ್ಲಿ ಮಗ್ನರಾದರು. ಊಹುದ್ ಕದನವಾದ ಬಳಿಕ ಅರಬ್ಬಿ ದೇಶದ ಎಲ್ಲ ಬುಡಕಟ್ಟಿ ನವರೂ ಇಸ್ಲಾಂ ಮತಕ್ಕೆ ವಿರೋಧಿಗಳಾಗಿ ಪ್ರತಿಭಟಿಸಿ ನಿಂತರು. ಕೇವಲ ಪ್ರಬಲರಾಗಿದ್ದ ಕೊರೈಷ್ ಮನೆತನದವರೂ ನಾನಾ ಮುಖವಾದ ಯೆಹೂದ್ಯರೂ ಇದನ್ನು ಕಂಡು ಉತ್ಸಾಹಿತ ತೊಂದರೆ ರಾದರು. ಮೊದಲಿನಿಂದಲೂ ಹೊಗೆಯಾಡುತ್ತಿದ್ದ ಅವರ ದ್ವೇಷಾಸೂಯೆಗಳು ಥಟ್ಟನೆ ಪ್ರಜ್ವಲಿತ ವಾದುವು. ಈ ಮಧ್ಯೆ ಕೆಲವರು ಕಪಟಿಗಳು ಮಹಮ್ಮದನಿಗೆ ಏುತ್ರ