________________
VIII. ವಿಜಯೋತ್ಸಾಹ ೭೧ ವಾದ ಕೊಲೆಗಳು ನರ ಹತ್ಯೆಯನ್ನು ನಡೆಸಲು ಮಹಮ್ಮದನಿಗೆ ಲೇಶ ಮಾತ್ರವೂ ಇಷ್ಟ ವಿಲ್ಲದಿದ್ದರೂ ದೇಹ ರಕ್ಷಣೆಗಾಗಿ ರಾಷ್ಟ್ರ ರಕ್ಷಣೆಗಾಗಿಯ ಅವನು ಯುದ್ದಕ್ಕೆ ಕೈಹಾಕದೆ ಹೋದರೆ ನಿರ್ವಾಹವಿಲ್ಲದಂತಾಯಿತು. ಮಹಮ್ಮದನು ಕೇವಲ ಚಾಗರೂಕನಾಗಿದ್ದುಕೊಂಡು, ಶತ್ರುಗಳ ಹಾವಳಿಯು ಮೊದಲಾಗುವ ಸೂಚನೆ ತಲೆದೋರಿದೊಡನೆಯೇ, ವಿಷದ ಅಂಕುರವನ್ನು ಅಲ್ಲಿಯೇ ಮುರಿಯುತ್ತಬಂದನು. ಅಬಬರಾ ಎಂಬೊಬ್ಬ ಶತ್ರುಪಕ್ಷದ ನಾಯಕರು ಇದನ್ನರಿತು, ಮೋಸದ ಬಲೆಯನ್ನೊಡ್ಡಿ ಮಹ ಮೃದನ ಮಗು ಮುರಿಯುವ ಯೋಚನೆಯನ್ನು ಮಾಡಿದನು : ತನ್ನ ಕಡೆಯವರು ಮಹಮ್ಮದೀಯರಾಗಲು ಇಷ್ಟ ಪಡು ತಿರುವರೆಂದೂ, ಮುಹಮ್ಮದನು ಕೆಲವು ಮಂದಿ ಬೋಧಕರನ್ನು ತನ್ನ ನಾಡಿಗೆ ಕಳುಹಿಸಿಕೊಟ್ಟರೆ, ಅನೇಕರು ಇಸ್ಲಾಂ ಮತಕ್ಕೆ ಸೇರುವ ರೆಂದೂ ಆ ಪಾಪಿಯು ಮಹಮ್ಮದನಿಗೆ ತಿಳಿಸಿದನು. ಸರಳ ಹೃದಯ ನಾದ ಮಹಮ್ಮದನು ಈ ಮೋಸವನ್ನರಿಯದೆ, ಒಡನೆಯೇ ಎಪ್ಪತ್ತು, ಮಂದಿ ಪಂಡಿತರಾದ ಬೋಧಕರನ್ನು ಕಳುಹಿಸಿಕೊಟ್ಟನು. ಶತ್ರು ಪಕ್ಷದ ನಾಯಕನು ಮಹಮ್ಮದನಿಗೆ ಅನರ್ಘ ವಸ್ತುಗಳನ್ನು ಕಾಣಿಕೆ ಯಾಗಿ ಕಳುಹಿಸಿದುದರಿಂದ, ಮಹಮ್ಮದನು ಅವನ ಕಾಪಟ್ಯವನ್ನರಿಯದೆ ಮೋಸಹೋಗಲು ಅದೂ ಸಹಕಾರಿಯಾಯಿತು. ತಾನು ಆ ಕಾಣಿಕೆ ಯನ್ನು ಸ್ವೀಕರಿಸುವುದಿಲ್ಲವೆಂದು ತಿಳಿಸಿ ಮಹಮ್ಮದನು ಅವುಗಳನ್ನು ಹಿಂದಕ್ಕೆ ಕಳುಹಿಸಿ, ತನ್ನ ಬೋಧಕರ ಕೆಲಸವು ಮುಗಿದ ಬಳಿಕ ಅವರನ್ನು ಸುರಕ್ಷಿತವಾಗಿ ಮಕ್ಕಾ ನಗರಕ್ಕೆ ಕರೆತರುವಂತೆ ಶತ್ರುಪಕ್ಷದ ನಾಯಕ ನಿಂದ ವಾಗ್ದಾನವನ್ನು ಪಡೆದನು. ಆದರೇನು ? ಬೋಧಕರು ತನ್ನ ರಾಷ್ಟ್ರ) ವನ್ನು ಸೇರಿದೊಡನೆಯೇ ಆ ನರ ಘಾತುಕನು ಅವರನ್ನು ಒಂದು ಹೊಳೆಯ ಸವಿಾಪಕ್ಕೆ ಕರೆದೊಯ್ದು ಅವರಲ್ಲಿ ಅರವತ್ತೊಂಬತ್ತು ಮಂದಿ ಯನ್ನು ತನ್ನ ಕತ್ತಿಗೆ ಬಲಿಗೊಟ್ಟನು. ಉಳಿದವನೊಬ್ಬನಾದ ಅಮ ಉಮಯನೆಂಬವನು ಹೇಗೋ ತಪ್ಪಿಸಿಕೊಂಡು ಮೆದೀನಾ ನಗರದ ಕಡೆಗೆ ಓಡಿಬರುತ್ತ ದಾರಿಯಲ್ಲಿ ಇಬ್ಬರನ್ನು ಕಂಡು, “ ಸಾಯುವವನ