ಪುಟ:ಪೈಗಂಬರ ಮಹಮ್ಮದನು.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೨ ಪೈಗಂಬರ ಮಹಮ್ಮದನು ಕಣ್ಣಿಗೆ ಸುಳಿದವನೇ ಜವರಾಯ' ಎಂಬಂತೆ, ಅವರು ಶತ್ರು ಪಕ್ಷದವ ರೆಂದೂಹಿಸಿ, ತನ್ನನ್ನು ಎಲ್ಲಿ ಕೊಲ್ಲುವರೋ ಎಂಬ ಶಂಕೆಯಿಂದ, ಥಟ್ಟನೆ ಅವರ ಮೇಲೆ ಬಿದ್ದು ಇಬ್ಬರನ್ನೂ ಕೊಂದುಬಿಟ್ಟನು. ಅವರಿಬ್ಬರೂ ನಿರಪರಾಧಿಗಳಾದ ಸಭ್ಯರು. ಅವರ ಮರಣ ವಾರ್ತೆಯನ್ನೂ ತನ್ನ ಬೋಧಕರ ಮರಣ ವಾರ್ತೆಯನ್ನೂ ಕೇಳಿ ಮಹಮ್ಮದನು ಅತ್ಯಂತ ವ್ಯಸನಪಟ್ಟು, ಮರಣಹೊಂದಿದವರ ಬಂಧುಗಳಿಗೆ ಧನ ಸಹಾಯ ಮಾಡಲು ಇತರರಿಂದ ಹಣವನ್ನೆ ತಿದನು. ಇತರ ಪ್ರಾಂತಗಳಿಗೆ ಕಳುಹಿಸಿದ್ದ ಬೋಧಕರ ಗತಿಯೂ ಇದೇ ರೀತಿಯಾಯಿತು. ಅವರಲ್ಲಿ ಖಬೈಬ್ ಮತ್ತು ಜೈವ್ ಎಂಬಿಬ್ಬರು, ಶತ್ರುಗಳು ಕೊಟ್ಟ ಪ್ರಾಣ ದಾನದ ವಾಗ್ದಾನವನ್ನು ನಂಬಿ ಅವರಿಗೆ ಶರಣಾಗತರಾಗಲು, ಶತ್ರುಗಳು ತಮ್ಮ ಮಾತಿನಂತೆ ಅವರನ್ನು ಬಿಡುಗಡೆ ಮಾಡದೆ ಮಕ್ಕಾ ನಗರದವರಿಗೆ ಗುಲಾಮರನ್ನಾಗಿ ಮಾರಿಬಿಟ್ಟರು. ಮಹಮ್ಮದನ ಶತ್ರುಗಳಾದ ಆ ನಗರದ ಕೊಲೆಪಾತಕರು ಅವರನ್ನು ಕೊಲ್ಲುವ ಸಂದರ್ಭದಲ್ಲಿ, ಇಬ್ಬರೂ ತಮ್ಮ ಗುರುಭಕ್ತಿಯನ್ನು ತೋರಿಸಿ, ಲೇಶವೂ ಹೆದರದೆ ತಮ್ಮ ಪ್ರಾಣವನ್ನು ತೆತ್ತರು. ಅಲ್ಲಿಂದ ಮುಂದೆ ಸಣ್ಣ ಪುಟ್ಟ ಕಾಳೆಗಗಳಿಗೆ ಮೊದಲಾಯಿತು. ಇಸ್ಲಾಂ ಮತವನ್ನು ಧ್ವಂಸಮಾಡಲು ಶತ್ತು ಪಕ್ಷದವರೆಲ್ಲರೂ ಬದ್ಧ ಕಂಕಣರಾಗಿ ನಿಂತರು. ದೀರ್ಘಾಲೋಚನೆ ಸಣ್ಣ ಪುಟ್ಟ ಯಿಂದಲೂ ದೂರ ದೃಷ್ಟಿಯಿಂದಲೂ ಮಹಮ್ಮದನು ಕದನಗಳು ಕೆಲಸ ನಡೆಯಿಸದೆ ಹೋಗಿದ್ದ ಪಕ್ಷಕ್ಕೆ ಮೆದೀನಾ ನಗರದಲ್ಲಿ ಮಹಮ್ಮದೀಯರು ಒಂದು ದಿನವಾದರೂ ಇರಲಾಗುತ್ತಿರಲಿಲ್ಲ. ಈ ಕದನಗಳಲ್ಲಿ ಮುರೈನೀ ಕದನವೆಂಬುದು ಸ್ವಲ್ಪ ಮಟ್ಟಿಗೆ ಪ್ರಾಮುಖ್ಯವಾದುದು. ಮುರೈಸಿಯ ಪಾಳೆಯಗಾರನಾದ ಹರೀಸನನ್ನು ಕೋರೈಸ್ ಮನೆತನದವರು ಮಹಮ್ಮದನ ಮೇಲೆ ಎತ್ತಿ ಕಟ್ಟಿ: ಮೆದೀನಾ ನಗರವನ್ನು ಮುತ್ತುವಂತೆ ಅವನನ್ನು ಪ್ರೇರಿಸಿದರು. ಈ ಸುದ್ದಿಯು ಮಹಮ್ಮದನ ಕಿವಿಗೆ ಬಿದ್ದೊಡನೆಯೇ, ಶತ್ರುವು ಮದೀನಾ ನಗರಕ್ಕೆ ಬರುವುದಕ್ಕೆ ಮೊದಲು ತಾನೇ ಅವನನ್ನು ಎದುರಿಸಬೇಕೆಂಬ