________________
IX. ಮಕ್ಕಾ ನಗರಕ್ಕೆ ಪ್ರಯಾಣ ಎಂಬ ಸತ್ವ ಪರೀಕ್ಷೆಯ ಸಮಯವು ಈಗ ಒದಗಿದೆ. ಅಬೂ ಜಂಡಲನ ದುರವಸ್ಥೆಯನ್ನು ನೋಡಿ ನಮ್ಮೆಲ್ಲರಿಗೂ ಸಂಕಟವೂ ಅನುತಾಪವೂ ಉಂಟಾಗಿರುವುದೇನೋ ನಿಜ. ಆದರೂ, ನಾವು ವಚನ ಭ್ರಷ್ಟರಾಗು ವುದು ಮಾತ್ರ ಸರಿಯಲ್ಲ' ಎಂದು ತಾಳ್ಮೆಯಿಂದ ಉತ್ತರ ಹೇಳಿದನು. ಮಹಮ್ಮದನೂ ಅವನ ಶಿಷ್ಯರೂ ಮೆದೀನಾ ನಗರವನ್ನು ಸೇರಿದ ಸ್ವಲ್ಪ ಕಾಲದಲ್ಲಿಯೇ ಇದೇ ವಿಧದ ಮತ್ತೊಂದು ಧರ್ಮ ಸಂಕಟವು ಬಂದೊದಗಿತು : ಹೊಸದಾಗಿ ಇಸ್ಲಾಂ ಮತಕ್ಕೆ ಸೇರಿದ್ದ ಉತ್ಸನೆಂಬೊಬ್ಬ ನನ್ನು ಕೊರೆಸ್' ಮನೆತನದವರು ಅಬೂ ಜಂಡಲದಂತೆಯೇ ಹಿಂಸಿಸ ತೊಡಗಲು, ಅವನು ಮಕ್ಕಾ ನಗರವನ್ನು ಬಿಟ್ಟು ಮೆದೀನಾ ನಗರಕ್ಕೆ ಬಂದು ಮಹಮ್ಮದನ ಶರಣುಹೊಕ್ಕನು. ಶತ್ರುಪಕ್ಷದವರಿಬ್ಬರು ಅವನ ಬೆನ್ನ ಹತ್ತಿ ಬಂದು, ಅವನನ್ನು ಮಕ್ಕಾ ನಗರಕ್ಕೆ ಕಳುಹಿಸಿಕೊಟ್ಟು ಒಪ್ಪಂದದ ಷರತ್ತನ್ನು ಉಳಿಸಿಕೊಳ್ಳಬೇಕೆಂದು ಮಹಮ್ಮದನೊಡನೆ ಹೇಳಿದರು. ಮಹಮ್ಮದನು ಆಲೋಚಿಸುತ್ತ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದು, ಉತ್ಪನನ್ನು ಹಿಂದಕ್ಕೆ ಹೊರಟುಹೋಗುವಂತೆ ಅಪ್ಪಣೆ ಮಾಡಿದನು. ಉತ್ಸನು, ನಾನು ಪವಿತ್ರವಾದ ಇಸ್ಲಾಂ ಮತವನ್ನು ಅವಲಂಬಿಸಿದ್ರೂ, ಹಿಂಸಕರಾದ ಎಧರ್ಮಿಗಳ ವಶಕ್ಕೆ ತಾವೇ ನನ್ನನ್ನು ಒಪ್ಪಿಸಿಬಿಡುವಿರಾ ? ಎಂದು ಗೋಳಿಡಲು, ಮಹಮ್ಮದನಿಗೆ ಬಹಳ ದುಃಖವಾಯಿತು. ಆದರೂ, ಮಹಮ್ಮದನು ಚಿತ್ರ ಸಂಯಮ ಮಾಡಿ ತಾನೆಂದಿಗೂ ವಚನ ಭ್ರಷ್ಟನಾಗಕೂಡದೆಂದು ಸ್ಪಿರ ಮನಸ್ಕನಾದನು. ಮಹಮ್ಮದನು ಮನಸ್ಸು ಮಾಡಿದರೆ ಮಕ್ಕಾ ನಗರದಿಂದ ಬಂದಿದ್ದ ಶತ್ತು ಪಕ್ಷದವರನ್ನು ಕಾರಾಗೃಹದಲ್ಲಿ ಬಂಧಿಸಿ, ಆಗಂತುಕನಿಗೆ ಆಶ್ರಯ ಕೊಡಬಹುದಾಗಿದ್ದಿತು. ಶರಣಾಗತನಾಗಿ ಬಂದವನಿಗೆ ಆಶ್ರಯ ಕೊಡು ವುದಕ್ಕಿಲ್ಲದ ವಿಷಮ ಸಂಕಟದಲ್ಲಿ ಅವನ ಮನಸ್ಸು ತಲ್ಲಣಿಸಿಹೋದರೂ ಮಹಮ್ಮದನು ಆಗಂತುಕನೊಡನೆ, ( ಉತ್ಸ ! ನಿನಗೆ ಆಶ್ರಯವನ್ನು ಕೊಡುವುದಕ್ಕಾಗಿ ನಾನು ಒಪ್ಪಂದದ ಷರತ್ತನ್ನು ಮೀರಿ ವಚನ ಭ್ರಷ್ಟ ನಾಗಲಾರೆ; ಯತ್ನವಿಲ್ಲದೆ ನಿನ್ನನ್ನು ಹಿಂದಕ್ಕೆ ಕಳುಹಿಸಬೇಕಾಗಿದೆ ಎಂದು ಹೇಳಿದನು. ಉತ್ಪನೂ ಸಚ್ಚಿಷ್ಯನಲ್ಲದೆ ಹೊರಗಿನ ವೇಷದಿಂದ