ಪುಟ:ಪ್ರತಾಪರುದ್ರದೇವ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಪೀಠಿ ಆ . ಅದಕ್ಕೆ ಇಂಗ್ಲೀಷಿನ ಮಹಾಗ್ರಂಥಗಳನ್ನು ಭಾಷಾಂತರಿಸತಕ್ಕ ಪ್ರಮೇಯ ಬಿಳಬಹುದೆಂಬದಾಗಿ ಗೊತ್ತಿರಲಾರದು. ಅಂತಹ ಕಾಲ ಈಗ ಒದಗಿರು ವದರಿಂದ ಈ ಸಂದರ್ಭದಲ್ಲಾದರು ಅದು ರೂಢಿಗೆ ಬಂದದ್ದು ಸಾರ್ಥಕವಾ ಗಿರುವದೊ ? ಇಂಗ್ಲೀಷು ಗ್ರಂಥವನ್ನು ಕನ್ನಡಿಸುವಲ್ಲಿ ಪ್ರತಿಬಂಧಕಗಳೇ ನಾದರು ಉಂಟೆ ? ಇದನ್ನು ಭಾಷಾಂತರಿಸೇ ತಿಳಿಯೋಣ... “ The summer sun, whose early power Was wont to gild Matilda's bower, And rouse her with his matin ray Her dutious orisons to pay, That morning sun has three times seen The flowers unfold on Rokeby green, But sees no more the slumbers fly From fair Matilda's hazel eye. ” • • • • • • • • • • • • • • • • ಸಂಸ್ಕೃತಗ್ರಂಥಗಳನ್ನು ಕನ್ನಡಿಸುವಲ್ಲಿ ಕನ್ನಡಕ್ಕೆ ಸಂಸ್ಕೃತ ಸಹಾಯ ವಿರುವಂತೆ ಇದನ್ನು ಇಂಗ್ಲೀಷು ಸಹಾಯದಿಂದ ಕನ್ನಡಿಸಿದರೆ ಆ ಸಾಮತಿಗೆ ಇಲ್ಲ ಅವಕಾಶವಿರುವದಿಲ್ಲ. ಆದರೆ ಆ ರೀತಿ ಕನ್ನಡಿಸುವದಕ್ಕಾಗುವದಿಲ್ಲ ವೆನ್ನಬಹುದು. ಯಾತಕ್ಕಾಗುವದಿಲ್ಲ ? ಸಮ್ಮರಸನ್ನಿನಲ್ಲಿ ಸವರುಂ | ಯಜ್ಞಾಗಿ ಮೆಟಲೈಬವರಂ || ಅಂಡಿ ರಜೆ ಹರ ತನ್ನಾ ಮ್ಯಾರ್ಟರೇಟೋ | ಹರೆಡ್ಯೂಟರಸ ಆರಿಜರ್ನ್ನಪೇಯಿ | • • • • • • • • • • . . . . . ಎಲೈ ಮಿತ್ರರಾದ ವಾಚಕರೆ ! ಇದನ್ನು ನೋಡಿ ನೀವು ನಗದಿರಿ. ಮೊದಲು ಉದಾಹರಿಸಿದ ವೃತವಚನಗಳಲ್ಲಿರುವ ಕನ್ನಡಕ್ಕಿಂತಲು ಇದರಲ್ಲಿ ಕನ್ನಡ ಕಡಮೆಯಾಗಿಲ್ಲ. ಅವುಗಳಲ್ಲಿ ಸಂಸ್ಕೃತವೂ ಸಂಸ್ಕೃತಕಾವ್ಯ