ಪುಟ:ಪ್ರಬಂಧಮಂಜರಿ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹೂಗಳು ೮೭ (ಶಾಮಂತಿಬಿಲ್ಲೆ,” « ರೋಜಾಹೂ' ಮೊದಲಾದ ಬಂಗಾರದ ಒಡವೆಗಳೂ ಪ್ರಸಿದ್ದವಾದ ಹೂಗಳ ಮಾಟದಲ್ಲಿಯೇ ಮಾಡಲ್ಪಡುತ್ತವೆ, ಹೂಗಳಲ್ಲಿ ನಾನಾ ಜಾತಿಗಳುಂಟು, ಬಣ್ಣವೊಂದರಲ್ಲಿಯೇ ಎಷ್ಟೋ ಭೇದಗಳಿವೆ. ಕೆಲವು ಬಿಳಿಯವು, ಕೆಲವು ಹಳದಿ; ಕೆಲವಕ್ಕೆ ಕೆಂಪು, ಇನ್ನು ಕೆಲವಕ್ಕೆ ಬಗೆಬಗೆಯ ಬಣ್ಣಗಳು ಬೆರೆದಿರುವುವು. ಕೆಲವು ಪುಷ್ಪಗಳು ಸುವಾಸನೆಯುಳ್ಳವು, ಇನ್ನು ಕೆಲವು ನಿರ್ಗಂಧಗಳು, ಮತ್ತೆ ಕೆಲವು ತಲೆನೋವು ಬರುವಷ್ಟು ಒಲು ವಾಸನೆಯುಳ್ಳವು. ಹೂಗಳು ಹೆಸರುಬೇಳೆಯ ಅಗಲದಿಂದ ಒಂದು ಕೈಯ ಅಗಲದ ವರೆಗೆ ಇರುತ್ತವೆ. ಕೆಲವು ಹೂಗಳು ಮಿಕ್ಕ ವನ್ನು ಚೆಲುವಿನಲ್ಲಿ ಮಾರುತ್ತವೆ. ಒಬ್ಬೊಬ್ಬರಿಗೆ ಒಂದೊಂದು ಹೂವನ್ನು ಕಂಡರೆ ಇಷ್ಟ, ಒಂದೊಂದು ದೇಶದವರಿಗೆ ಒಂದೊಂದು ಜಾತಿಯ ಹೂ ಪ್ರೇಮಾ ಸ್ಪದವಾಗಿರುತ್ತದೆ. ಇಂಗ್ಲೆಂಡಿನವರೆಗೆ ಗುಲಾಬಿಹೂವಿನ ಮೇಲೆ ಪ್ರಾಣ, ಇದು ಎಲ್ಲಾ ಸೀಮೆಗಳಲ್ಲಿಯೂ ಪ್ರಾಶಸ್ತ್ರಕ್ಕೆ ಬಂದಿದ್ದರೂ ಇಂಗ್ಲೆಂಡಿನಲ್ಲಿ ಅಗ್ರಗಣ್ಯವಾಗಿದೆ. ಹಿಂದೂ ದೇಶದಲ್ಲಿ ಕಮಲವು ಬಹುಕಾಲದಿಂದಲೂ ಶ್ರೇಷ್ಣವಾಗಿ ಭಾವಿಸಲ್ಪಟ್ಟಿದೆ. ಆದುದರಿಂದಲೇ ರೂಪಾಯಿಯ ಮೇಲೆ ಕಮಲವನ್ನು ಗುಲಾಬಿ ಹೂವಿನ ಸಂಗಡ ಸೇರಿಸಿರುವರು. ಹಿಂದೂದೇಶದ ಕವಿಗಳು ಮುಖವನ್ನು ವರ್ಣಿಸುವಾಗ ಕಮಲದ ಸಾಮ್ಯವನ್ನು ಹೇಳುವುದೂ, ಇಂಗ್ಲಿಷ್ ಕವಿಗಳು ಕೆನ್ನೆ ಗಳನ್ನು ಗುಲಾಬಿ ಹೂವಿಗೆ ಹೋಲಿಸುವುದೂ ವಾಡಿಕೆಯಾಗಿವೆ. ಹಿಂದೂ ಜನರು ಕಮಲವನ್ನು ಲಕ್ಷ್ಮಿದೇವಿಯ ವಾಸಸ್ಥಾನವೆಂದು ನಂಬಿರುತ್ತಾರೆ. ಕಮಲವಲ್ಲದೆ ಶಾಮಂತಿಗೆ, ಮಲ್ಲಿಗೆ, ಜಾಜಿ, ಸಂಪಗೆ ಮೊದಲಾದ ಅನೇಕ ಪುಷ್ಪಗಳನ್ನು ಇವರು ಉಪಯೋಗಿಸುತ್ತಾರೆ. ಹೂಗಳನ್ನು ಹಿಂದೂದೇಶದಲ್ಲಿ ದೇವರಿಗೆ ಪೂಜೆ ಮಾಡುವಾಗ ಅರ್ಪಿಸುವರು. ಬಳಿಕ ಅವುಗಳನ್ನು ನಾರಿನಲ್ಲಿ ಕಟ್ಟಿಯೂ ಬಿಡಿಯಾಗಿಯೂ ತಲೆಯಲ್ಲಿ ಮುಡಿದುಕೊಳ್ಳುವರು. ಮದುವೆ, ಮುಂಜಿ, ಮೊದಲಾದ ಶುಭಕಾರ್ಯಗಳನ್ನು ನಡೆಸುವಾಗ ಎಲ್ಲರಿಗೂ ಫಲತಾಂಬೂಲಗಳೊಡನೆ ಹೂವಿನಹಾರಗಳನ್ನು ಕೊಡುವಸಂಪ್ರದಾಯವು ಹಿಂದೂಗಳಲ್ಲಿ ಪುರಾತನಕಾಲದಿಂದಲೂ ಉಂಟು. ಹೊಸದಾಗಿ ಬಂದ ಹುದ್ದೆದಾರರಿಗೂ, ವರ್ಗವಾಗಿ ಊರು ಬಿಟ್ಟು ಹೋಗುವ