ಪ್ರಾಣಿಹಿಂಸೆ ಸಂಪೂರ್ಣವಾಗಿ ಒಪ್ಪತಕ್ಕುದೋ ಅಲ್ಲವೋ ಅದುಹಾಗಿರಲಿ;ಪ್ರಾಣಿಗಳನ್ನು ಬಾಧಿಸುವುದು ತಪ್ಪೇ ಅಲ್ಲವೆಂದು ಯಾರೂ ಹೇಳಲಾಗುವುದಿಲ್ಲ. ಲೋಕ ಹಿತಾರ್ಥವಾಗಿ ವೈದ್ಯರು ಪ್ರಾಣಿಹಿಂಸೆಯನ್ನಾದರೂ ಮಾಡುವುದು ಸರಿಯೆಂದು ನಿರ್ಧರಿಸುವುದಕ್ಕೆ ಹೊರಟಾಗಲೇ ಪ್ರಾಣಿಹಿಂಸೆ ಬಲು ಕೆಟ್ಟುದೆಂದು ಒಪ್ಪಿದ ಹಾಗಾಯಿತು. ಇತರ ಪ್ರಾಣಿಗಳಿಗೆ ನಾವು ಬಹಳ ಕೃತಜ್ಞರಾಗಿರಬೇಕು. ಅವು ನಮ್ಮ ಮೂಟೆಗಳನ್ನು ಹೊರುತ್ತವೆ;ನಮ್ಮ ತಿಂಡಿಯನ್ನೂ ಉಡುಪನ್ನೂ ಹೊಂದಿಸಿ ಕೊಡುತ್ತವೆ ; ನಮ್ಮನ್ನು ಬೆನ್ನಿ ನಮೇಲೆ ಹೊತ್ತುಕೊಂಡು ಹೋಗಿ ನಮಗೆ ಕಾಲು ನೋವನ್ನು ತಪ್ಪಿಸುವುವು:ನಮ್ಮ ಮನೆಯ ಮುಂದೆ ಕಾವಲು ಬಿದ್ದಿರುವುವು. ಹೀಗೆ ನಾನಾರೀತಿಗಳಲ್ಲಿ ನಮಗೆ ಉಪಕಾರಮಾಡುವ ಜಂತುಗಳನ್ನು ಅನ್ಯಾಯವಾಗಿ ಹಿಂಸಿಸುವುದು ಪರಮನೀಚತನ, ಅವುಗಳನ್ನು ಪ್ರೀತಿಯಿಂದ ಕಾಣಬೇಕೆಂದು ದೇವರು ನಮ್ಮ ವಶಕ್ಕೆ ಕೊಟ್ಟಿದ್ದಾನೆ. ಮಕ್ಕಳಿಗೆ ಚಿಕ್ಕಂದಿನಿಂದಲೂ ಪ್ರಾಣಿಗಳಲ್ಲಿ ದಯೆತೋರಿಸುವುದನ್ನು ಕಲಿಸಬೇಕು, ಬೆಕ್ಕು, ನಾಯಿ, ಗಿಣಿ, ಹಸು ಮೊದಲಾದ ಮನೆಯಲ್ಲಿ ಸಾಕುವ ಪ್ರಾಣಿಗಳ ಮೂಲಕ ಅವರಿಗೆ ಕನಿಕರವು ಹೆಚ್ಚುವಂತೆ ಮಾಡಬಹುದು. ಇಂಡಿಯ ಮುಂತಾದ ಪೂರ್ವದೇಶಗಳ ಮಹನೀಯರು : ಅಹಿಂಸಾ ಪರಮೋಧರ್ಮಃ, « ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಂ' ಎಂದು ಪ್ರಾಣಿಗಳ ವಿಷಯದಲ್ಲಿ ದಯೆಯಿಂದನಡೆದುಕೊಳ್ಳುವುದನ್ನು ಒಂದು ದೊಡ್ಡ ಧರ್ಮವಾಗಿ ಎಣಿಸಿರುವರು. ಆತ್ಮಗಳಿಗೆ ಪ್ರಾಣಿಹಿಂಸೆಯಿಂದುಂಟಾಗುವ ಪಾಪಕ್ಕನುಸಾರವಾಗಿ ಆಯಾ ಜನ್ಮಾಂತರವೂ ಸಂಭ. ವಿಸುವುದೆಂದು ಶಾಸ್ತ್ರಗಳಲ್ಲಿ ಹೇಳಿದೆ. ಆತ್ಮ ನಿಗೆ ಜನ್ಮಾಂತರವುಂಟೆಂದು ನಂಬತಕ್ಕವನು ಪ್ರಾಣಿಗಳ ಸೌಖ್ಯಾಭಿವೃದ್ಧಿಯನ್ನು ಮಾಡಬೇಕೆಂಬ ಅಭಿಲಾಷೆಯಿಂದಲೇ ಅಲ್ಲದೆ, ತಾನುಹಿಂಸಿಸುವ ಪ್ರಾಣಿಯಲ್ಲಿಯೂ ತನಗೆ ಬಲು ಹತ್ತಿರದ ಬಂಧುವಿನಂತೆ ತನ್ನ ಹಾಗಿರುವ ಆತ್ಮ ನು ಸೇರಿರುವನೆಂಬ ಅಭಿಪ್ರಾಯದಿಂದಲೂ ಪ್ರಾಣಿಗಳಲ್ಲಿ ತುಂಬಾ ಕನಿಕರವಿಡಬೇಕೆಂದು ಬೋ ಧಿಸುತ್ತಾನೆ. ಆದುದರಿಂದಪ್ರಾಣಿಗಳ ವಿಷಯದಲ್ಲಿ ಕ್ರೌರ್ಯವನ್ನು ನಿರೋಧಿಸಲು ಸಭೆ ಮೊದಲಾದುದನ್ನು ಏರ್ಪಡಿಸುವ ಆವಶ್ಯಕತೆಯು ಯು
ಪುಟ:ಪ್ರಬಂಧಮಂಜರಿ.djvu/೧೧೧
ಗೋಚರ