ಪುಟ:ಪ್ರಬಂಧಮಂಜರಿ.djvu/೧೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೯೪ ಪ್ರಬಂಧಮಂಜರಿ-ಎರಡನೆಯ ಭಾಗ್ಯ ರೋಪ್ ಮುಂತಾದ ಪಶ್ಚಿಮ ದೇಶದಲ್ಲಿರುವಷ್ಟು ಇಂಡಿಯ ಮೊದಲಾದ ಪೂರ್ವ ದೇಶಗಳಲ್ಲಿಲ್ಲ. 27. ದಾನ, ದಾನವು ಇಂಡಿಯ ಮುಂತಾದ ಪೂರ್ವದೇಶಗಳಲ್ಲಿ ಶ್ರೇಷ್ಠವಾದ ಧರ್ಮವೆಂದು ತಿಳಿಯಲ್ಪಟ್ಟು ಬಹುವಾಗಿ ಆಚರಣೆಯಲ್ಲಿದೆ. ದೊರೆಗಳೂ ಶ್ರೀಮಂತರೂ ತುಲಾಭಾರವನ್ನು ತೂಗಿಸಿಕೊಂಡು ಚಿನ್ನವನ್ನಾದರೂ ಬೆಳ್ಳಿಯ ನ್ಯಾ ದರೂ ದರಿದ್ರರಿಗೆ ದಾನ ಮಾಡುವ ಪದ್ಧತಿ ಹಿಂದೂದೇಶದಲ್ಲಿ ಪೂರ್ವದಿಂದಲೂ ಉಂಟು. ಶಿವಾಜಿ ತುಲಾಭಾರವನ್ನು ತೂಗಿಸಿಕೊಂಡನು, ಇವ ನಿಗೆ ಹಿಂದೆಯೂ ಮುಂದೆಯೂ ಅನೇಕರು ಹೀಗೆ ಮಾಡಿದರು. ಹಿಂದೂ ದೇಶದ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಪರೋಪಕಾರಿಗಳಾದ ಅನೇಕ ಧನಿಕರು ಧರ್ಮಾರ್ಥವಾಗಿ ಸ್ಕೂಲುಗಳನ್ನೂ , ಕಾಲೇಜುಗಳನ್ನೂ , ಆಸ್ಪತ್ರೆಗಳನ್ನೂ, ಚತ್ರಗಳನ್ನೂ ಕಟ್ಟಿಸಿದ್ದಾರೆ. ಆದರೆ ದಾನಮಾಡಲು ಅಧಿಕಾರವು ಭಾಗ್ಯವಂತರಿಗೇ ಅಲ್ಲ. ಪರೋಪಕಾರಬುದ್ದಿ ಬಡವರಿಗೂ ಸಹಜವಾಗಿ ಉಂಟು. ದಾನದಲ್ಲಿ ಮೂರು ವಿಧಗಳುಂಟೆಂದು ಶ್ರೀಭಗವದ್ಗೀತೆಯಲ್ಲಿ ಹೇಳಿದೆ. ದಾನಮಾಡುವುದು ಧರ್ಮವೆಂದುಭಾವಿಸಿ ಪ್ರತಿಫಲಾಪೇಕ್ಷೆಯಿಲ್ಲದೆ ಆರ್ಹನಾದವನಿಗೆ ದೇಶಕಾಲಗಳನ್ನ ರಿತು ಮಾಡಿದ ದಾನವು ಸಾತ್ವಿಕದಾನವೆನಿಸುವುದು, ಪ್ರತ್ಯು ಸಕಾರರೂ ಪದಿಂದಾಗಲಿ, ಪ್ರತಿಫಲಾಪೇಕ್ಷೆ ಯಿಂದಾಗಲಿ, ಕೊಡುವುದಕ್ಕೆ ರಾಜಸದಾನವೆಂದು ಹೆಸರು. ದೇಶಕಾಲವಿವೇಚನೆಯಿಲ್ಲದೆ ಅಪಾತ್ರರಿಗೆ ಕೊಡುವುದು ತಾಮಸದಾನವೆನಿಸುವುದು ಕೆಲವರು ತಮ್ಮ ದಾತೃತ್ವವನ್ನು ಹೊರಗೆ ತೋರ್ಪಡಿಸಿಕೊಳ್ಳಲಾಗಲಿ, ಸರ್ಕಾರದ ಪ್ರೀತಿ. ಯನ್ನು ಪಡೆವುದಕ್ಕಾಗಲಿ ದಾನಮಾಡುವುದುಂಟು. ಪಾರಮಾರ್ಥಿಕವಾಗಿ ರಹಸ್ಯದಲ್ಲಿ ಮಾಡುವದಾನವು ಅತ್ಯುತ್ಕೃಷ್ಟವಾದುದು. ಈ ಸಾತ್ವಿಕದಾನದಿಂದ ನಮಗೆ ವಸ್ತುಗಳಲ್ಲಿರುವ ಮಮತೆ ಕಡಮೆಯಾಗುವುದರ ಮೂಲಕ ಎರಕ್ತಿ ಹೆಚ್ಚುವುದಕ್ಕೆ ಅವಕಾಶವುಂಟೆಂದು ವೇದಾಂತಿಗಳು ಹೇಳುವರು. ಕೈಲಾದ ಮಟ್ಟಿಗೂ ದಾನಮಾಡುವುದು ನಮ್ಮ ಧರ್ಮವು. ಆದರೆ ದಾನಮಾಡುವುದರಲ್ಲಿ ವಿವೇಚನೆ ಬೇಕು, ಹೊಟ್ಟೆ ತುಂಬಿದವನಿಗೆ ಅನ್ನ ಹಾ