ಪುಟ:ಪ್ರಬಂಧಮಂಜರಿ.djvu/೧೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸ್ವಾರ್ಥಪರತ್ವ ೧೧೭ ವರ್ತಕರ ಮೂಲಕ ಒಡನೆಯೇ ಹರಡಿಕೊಂಡಿದ್ದರೆ, ಇನ್ನೂ ಎಷ್ಟೋ ಮುಂಚೆಯೇ ನಾಗರಿಕತೆ ಲೋಕದಲ್ಲೆಲ್ಲಾ ವ್ಯಾಪಿಸುತ್ತಿತ್ತು, ವ್ಯಾಪಾರದಿಂದ ಕೆಡಕುಗಳೂ ಇಲ್ಲದೆ ಇಲ್ಲ ; ಇದರಿಂದ ಜನರಲ್ಲಿ ಡಂಭವೂ ದುಂದುಗಾರತನವೂ ಉಂಟಾಗಬಹುದು.ದುಂದು ಕುಂದಿಗೆಕಾರಣವು, ವ್ಯಾಪಾರದ ಮಲಕ ಒಂದು ಸೀಮೆಗೂ ಮತ್ತೊಂದಕ್ಕೂ ಮೇಲಾಟವುಂಟಾಗಿ ಕೊನೆಗೆ ವಿರೋಧದಲ್ಲಿ ಪರಿಣಮಿಸಿ, ಇದರಿಂದ ಅರ್ಥನಾಶ, ಪ್ರಾಣನಾಶಗಳಾಗಬಹುದು. ಇದಲ್ಲದೆ ವ್ಯಾಪಾರದ ವ್ಯಾಜದಿಂದ ಸೀಮೆಗಳನ್ನು ಜಯಿಸಿ ಅಲ್ಲಿನ ಜನರನ್ನು ವಶಮಾಡಿಕೊಳ್ಳುವುದಕ್ಕೆ ಅವಕಾಶವುಂಟು. ಇದಕ್ಕೆ ಹಿಂದೂದೇಶವೇ ದೃಷ್ಟಾಂತವು. 37. ಸ್ವಾರ್ಥಪರತ್ವ. (“ತನುಂಟೋ ಮೂರು ಲೋಕವುಂಟೋ?' ಎಂಬಂತೆ ಸ್ವಾರ್ಥಪರನಾದವನು ಹೆರರ ಸೌಖ್ಯಕ್ಕೆ ಲಕ್ಷ್ಯ ಮಾಡದೆ ತನ್ನ ಸೌಖ್ಯವನ್ನೇ ಪ್ರಧಾನವಾಗಿಟ್ಟು ಕೊಂಡಿರುವನು. ಲೋಕದಲ್ಲಿ ಸಿಕ್ಕಿದ ಒಳ್ಳೆಯ ವಸ್ತುಗಳನ್ನೆಲ್ಲಾ ಸ್ವಸಖ್ಯಕ್ಕಾಗಿ ಮಾಡಿಕೊಳ್ಳುವನು. ದೊರೆಗಳು ತಮ್ಮ ವಿಷಯಾಭಿಲಾಷೆಯನ್ನು ಪೂರೈಸಿ ಸೌಖ್ಯವನ್ನು ಪಡೆದರೆ ಎಲ್ಲರೂ ಸುಖದಿಂದಿದ್ದಂತೆಯೇ?' ಎಂಬದಾಗಿ ಹತ್ತರಿರುವವರಿಂದ ಅನೇಕ ರಾಜರು ಬೋಧಿಸಲ್ಪಟ್ಟು ಸ್ವಾರ್ಥಪರರಾಗಿ ಹೋದರೆಂದು ಚರಿತ್ರೆ ತಿಳಿಸುತ್ತದೆ. ಇಂಗ್ಲೆಂಡ್ ದೇಶದ ಇಂಥ ದೊರೆಗಳಲ್ಲಿ ಎಂಟನೆಯ ಹೆನ್ರಿ ಮತ್ತು ಎರಡನೆಯ ಚಾರ್ಲ್ಸ್ ಎಂಬಿಬ್ಬರು ಪ್ರಮುಖರು. ನಮ್ಮ ದೇಶದ ದೊರೆಗಳಲ್ಲಿಯೂ ಹೀಗೆ ಸ್ವಾರ್ಥಪರರಾದವರಿದ್ದರು. ಎಲ್ಲಾ ಪದಾರ್ಥಗಳನ್ನೂ ತಮ್ಮು ಪಯೋಗಕ್ಕೆ ಅನ್ಯಾಯವಾಗಿ ತಿರುಗಿಸಿಕೊಂಡು, ಇತರರನ್ನು ತಮ್ಮ ಸೌಖ್ಯಕ್ಕೆ ಸಾಧಕರನ್ನಾಗಿ ಮಾಡಿಕೊಳ್ಳುವರು ಲೋಕದಲ್ಲಿ ಅನೇಕರುಂಟು, ನಂಟರು, ಇಷ್ಟರು, ಮಿತ್ರರು ಯಾ ರೇ ಆಗಲಿ ಅವರ ಸೌಖ್ಯವನ್ನು ಸ್ವಲ್ಪವೂ ಲಕ್ಷ್ಯಮಾಡದೆ ಇಂಥ ಸ್ವಾರ್ಥ ಪಠರು ಎಲ್ಲರನ್ನೂ ತಮ್ಮ ಪ್ರಯೋಜನಕ್ಕೆ ಸೆಳೆದುಕೊಳ್ಳುವರು. ಈ ಸ್ವಭಾವವುಳ್ಳ ಒಬ್ಬ ಹೆಂಗಸೋ ಗಂಡಸೋ ಒಂದೊಂದು ಸಂಸಾರದಲ್ಲಿರುವ