ಪುಟ:ಪ್ರಬಂಧಮಂಜರಿ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಪ್ರಬಂಧಮಂಜರಿ ಎರಡನೆಯ ಭಾಗ. ಯುತ್ತಿದ್ದಾಗ, ಟ್ರಾನ್ಸ್ಟಾಲ್ ದೇಶದ ಮತ್ತು ಅದರ ಬೋಯರ್‌ ಜನರ ಸ್ಥಿತಿಗಳ ಘೋರವಾದ ವರ್ಣನೆಗಳನ್ನು ಆಗಿನ ವೃತ್ತಾಂತಪತ್ರಿಕೆಗಳಲ್ಲಿ ಯಾರು ತಾನೆ ಕಣ್ಣೀರು ಸುರಿಸದೆ ಓದುತ್ತಿದ್ದರು ? - ಈಗ ಯೂರೋಪಿನಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಪ್ರಾಯದವರೆಲ್ಲ ಸೈನ್ಯದಲ್ಲಿ ಯುದ್ಧಕ್ಕೆ ಸಿದ್ಧರಾಗಿರಬೇಕೆಂಬೊಂದು ಕಾನೂನನ್ನು ಮಾಡಿಕೊಂಡಿದ್ದಾರಂತೆ. ಇದರಿಂದ ಯುದ್ದದ ಹಾನಿಗಳನ್ನು ಹೆಚ್ಚಿಸಿದಂತಾಯಿತು. ಹಾನಿಯನ್ನು ಹೆಚ್ಚಿಸುವ ಈ ಸಂಗತಿಯೇ ಅನೇಕರನ್ನು ಯುದ್ದಕ್ಕೆ ಹೋಗದಂತೆ ಮಾಡಿ ಲೋಕದಲ್ಲಿ ಶಾಂತಿಯನ್ನು ವೃದ್ಧಿ ಪಡಿಸಬಹುದು. ಯಾವನು ತಾನೆ ಪ್ರಾಣದಮೇಲೆ ದೃಷ್ಟಿ ಯಿಡದೆ ಸೈನ್ಯಕ್ಕೆ ನುಗ್ಗಿ ಹೆದರದೆ ರಣರಂಗದಲ್ಲಿ ಹೋರಾಡುವನು? ಈ ಜ್ಞಾನವು ಚಿರಕಾಲದಿಂದಲೂ ಪ್ರಾಣಹಾನಿ ಗಾಕರವಾದ ಜನರ ಯುದ್ಧಾಭಿಲಾಷೆಯನ್ನು ಕುಂದಿಸಿ ಲೋಕಕ್ಕೆಲ್ಲ ಕ್ಷೇಮವನ್ನು ಹೆಚ್ಚಿಸಬಹುದು. 40. ಅಚ್ಚು ಹಾಕುವುದು, ಅಚ್ಚು ಹಾಕುವುದನ್ನು ಬಹುಕಾಲದ ಹಿಂದೆ ಕಂಡುಹಿಡಿದಿದ್ದರೂ, ಅದರ ಚರಿತ್ರೆ ವಿಶದವಾಗಿ ತಿಳಿದಿಲ್ಲ. ಯೂರೋಪಿನಲ್ಲಿ ಇದನ್ನು ತಿಳಿವುದಕ್ಕೆ ಮುಂಚೆಯೇ, ಚೀನಾ ಜಪಾನ್ ದೇಶಗಳಲ್ಲಿ ಮರದ ಕೊರಡುಗಳಿಂದಲೂ ಮುದ್ರಾಕ್ಷರಗಳಿಂದಲೂ ಅಚ್ಚು ಹಾಕುವುದು ನಡೆಯುತ್ತಿದ್ದಿತೆಂದು ಹೇಳುತ್ತಾರೆ. ಯುರೋಪಿನಲ್ಲಿ ಮೊಟ್ಟಮೊದ ಮರದಮೊದ್ದು ಗಳಮೇಲೆ ಅಕ್ಷರಗಳನ್ನು ಕೊರೆದು ಅಚ್ಚು ಹಾಕಿದರು. ವರ್ಣ ಮಾಲೆಯ ಪ್ರತಿಯೊಂದಕ್ಷರಕ್ಕೂ ಬೇರೆಬೇರೆ ಮುದ್ರಾಕ್ಷರವನ್ನು ಕಲ್ಪಿಸುವವರೆಗೂ,ಅಚ್ಚು ಹಾಕುವುದು ಉಪಯುಕವೂ ಆಶ್ಚರ್ಯಕರವೂ ಆಗಿರಲಿಲ್ಲ. ಹೀಗೆ ಬೇರೆ ಮುದ್ರಾಕ್ಷರಗಳನ್ನು ಕಂಡು ಹಿಡಿದ ಮಹಾ ಪುರುಷನ ಹೆಸರು ಗೊತ್ತಿಲ್ಲ. ಯೂರೋಪಿಗೆ ಸೇರಿದವನಾಗಿ ಅವುಗಳನ್ನು ತಾನೇ ಹೊಸದಾಗಿ ಕಂಡುಹಿಡಿದನೋ, ಅಥವಾ ಚೀನಾ ಜಪಾನ್ ದೇಶಗಳ ಜನರಿಂದ ಕಲಿತನೋ ಅದೂ ತಿಳಿಯದು .ದೃಢ ವಾಗಿ ತಿಳಿದಿರತಕ್ಕುದೇನೆಂದರೆ:-ಸ್ಥಳದಿಂದ ಸ್ಥಳಕ್ಕೆ ಸಾಗಿಸಲಾಗುತ್ತಿದ್ದ ಮುದ್ರಾಕ್ಷರಗಳಿಂದ.ಅಚ್ಚು ಹಾಕುವುದು ಕ್ರಿ.ಶ. ಹದಿನೈದನೆಯ ಶತಮಾನದ