೧೩೨ ಪ್ರಬಂಧಮಂಜರಿ ಎರಡನೆಯ ಭಾಗ್ಯ ನೆಯೇ ಮಳೆ ಕೊಚ್ಚಿ ಕೊಂಡುಹೋಗಿ ದೂರ ಸಾಗಿಸಿಬಿಡುವುದು, ತಂಗಾ ಆ ಮನುಷ್ಯನಿಗೇ ಅಲ್ಲದೆ, ಮೃಗಗಳಿಗೂ ಹಕ್ಕಿಗಳಿಗೂ, ಭರವಸವನ್ನೂ ಆರೋಗ್ಯವನ್ನೂ ಮನಶ್ಯರೀರಗಳಲ್ಲಿ ಹೊಸದಾಗಿ ಶಕ್ತಿಯನ್ನೂ ಉಂಟು. ಮಾಡುವುದು ದಿಕ್ಕು ದಿಕ್ಕಿನಲ್ಲಿಯೂ ಹಸುರು ಹುಲ್ಲು ಮೊಳೆತು, ಒಣಹುಲ್ಲಿನಮೇಲೆ ಬೀಳುತ್ತಿದ್ದ ಬಿಸಿಲಿನ ಝಳವನ್ನು ನೋಡಿನೋಡಿ ಬೇಸತ್ತ ಕಣ್ಣು ಗಳಿಗೆ ಅನಿರ್ವಾಚ್ಯವಾದ ಆನಂದವು ಹುಟ್ಟುವುದು, ರೈತರೆಲ್ಲಾ ಸಂತುಷ್ಟ ರಾಗಿ ಮಳೆಯಿಲ್ಲದೆ ನಿಂತುಹೋಗಿದ್ದ ಆರಂಬಕ್ಕೆ ಮತ್ತೆ ಕೈಹಾಕುವರು. ಬೇಕಾದಷ್ಟು ಮಳೆಕರೆವುದರಿಂದಅವರಿಗೆಕ್ಕಾ ಮದಭಯವೇ ಹೋಗುವುದು, - ಮುಂಗಾರುಮಳೆ ಬೀಳುವ ತಿಂಗಳುಗಳಲ್ಲಿ ಮಳೆಯ ಉಪಯೋಗಗಳು ಕಂಡುಬರುವುದಿಲ್ಲ. ಆಕಾಶದಿಂದ ನೆಲದ ಮೇಲೆ ಬಿದ್ದ ಮಳೆಯೆಲ್ಲ ಸಮುದ್ರಕ್ಕೆ ಹೋಗಿ ಸೇರದೆ, ಮುಂದೆಬರುವ ಬೇಸಗೆಯಲ್ಲಿ ಉಪಯೋಗಿಸುವಂತೆ ಈ ನೀರಿನಲ್ಲಿ ಬಹುಭಾಗವು ಅಲ್ಲಲ್ಲಿಕೂಡುತ್ತದೆ. ಮಳೆ ಬಿದ್ದೊಡನೆಯೇ ಕೆರೆ ಗಳು ತುಂಬುವುವು. ಈ ನೀರು ಗದ್ದೆ ತೋಟಗಳಿಗೆ ಹಾಯಿಸುವುದಕ್ಕೂ, ಮಳೆಗಾಲ ಮುಗಿದಮೇಲೆ ಬಹುಕಾಲದವರೆಗೆ ಪ್ರಾಣಿಗಳೆಲ್ಲಕುಡಿವುದಕ್ಕೂ ಉಪಯುಕ್ತವಾಗುವುದು, ಭೂಮಿಯೊಳಗಿಳಿದ ನೀರು, ಧಾನ್ಯದ ಬೀಜಗಳನ್ನೂ ಮರಗಿಡಗಳ ಬೇರುಗಳನ್ನೂ ,ಪೋಷಿಸುವುದಲ್ಲದೆ ಬುಗ್ಗೆಗಳಾಗಿ ಭೂಮಿಯ ಮೇಲಕ್ಕೆ ಬಂದು, ನದಿಗಳಾಗಿ ಮತ್ತೆ ಮಳೆಗಾಲ ಬರುವವರೆಗೂ ಹರಿಯುತ್ತಿರುತ್ತದೆ ಹೊಳೆಗಳ ನೀರನ್ನು ಹತ್ತಿರ ಇರುವ ತೋಟಗಳಿಗೂ ಗದ್ದೆಗಳಿಗೂ ಹಾಯಿಸಿ, ಪಯಿರುಸಭೆ ಗಳು ಬಿಸಿಲಿಂದಒಣಗದಂತೆ ನೋಡಿ ಕೊಳ್ಳುವರು. ಹೀಗೆ ವರ್ಷದ ಮೊದಲಿಂದ ಕೊನೆವರೆಗೂ ಮಳೆಯಿಂದ ಪ್ರಯೋಜನಗಳುಂಟು. 44ಸಕಾಲದಲ್ಲಿ ಕೆಲಸಮಾಡುವುದು, ಯಾವಕೆಲಸವನ್ನಾ ದರೂಕ್ಸ್ ಪ್ರಕಾಲದಲ್ಲಿಯೇಮಾಡುವುದುಶ್ಚಾಫ್ಟ್ ವಾದ ಗುಣವು, ಇದು ಯಾರಲ್ಲಿದೆಯೋ ಅವನಿಗೆಯಾವಾಗಲೂ ಸತ್ಯವಾಡುವ ಸ್ವಭಾವವೂ, ಯಾವ ಕಷ್ಟ ಬಂದರೂ ತನ್ನ ಕರ್ತವ್ಯವನ್ನು ಮಾಡಬೇಕೆಂಬ ಮನೋದಾರ್ಢವೂ ಉಂಟೆಂಬುದು ಸಿದ್ದವು. ಈ ಗುಣವುಳ್ಳವನಿಗೆ ಕೆಲವು ವೇಳೆ ಬಹಳ ಕಷ್ಟವುಂಟು. ಹೇಗೆಂದರೆ, ವ್ಯಸನಾಕ್ರಾಂತನಾಗಿರಲಿ, ದೇಹದಲ್ಲಿ ಆಲಸ್ಯವಿರಲಿ, ಇಂಥವನು ಕೊಟ್ಟ ಮಾತನ್ನು ನಡೆಸಿ ಕೊಡುವುದು
ಪುಟ:ಪ್ರಬಂಧಮಂಜರಿ.djvu/೧೫೦
ಗೋಚರ