ಪುಟ:ಪ್ರಬಂಧಮಂಜರಿ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮ ಪ್ರಬಂಧಮಂಜರಿ-ಎರಡನೆಯಭಾಗ. ಮುತ್ತ° ಇರುವ ಸುದರ್ಭಗಳಿಗನುಸಾರವಾಗಿ ನಡೆದುಕೊಳ್ಳುವರು. ಆದುದರಿಂದ ಆಯಾದೇಶಗಳಲ್ಲಿ ಜನರ ನಡತೆಗಳೂ, ಅಭಿಪ್ರಾಯಗಳೂ ಬೇ ರೆಬೇರೆಯಾಗಿರುವುವು. ಇವುಗಳಲ್ಲಿ ನಾವೂ ಒಪ್ಪಿ ಮೆಚ್ಚಿ ಅನುಸರಿಸತಕ್ಕವು ಎಷೆ ಇರುತ್ತವೆ. ಇತರ ದೇಶದವರಲ್ಲಿ ಕೆಲವು ಸಂಗತಿಗಳು ನಮ್ಮ ಮನಸ್ಸಿಗೆ ಬಾರದೆನಿರಾಕರಿಸತಕ್ಕವುಗಳಾಗಿರಬಹುದು. ಇವುಗಳನ್ನು ತಿಳಿಯುವದರಿಂದಲೂ ಪ್ರಯೋಜನವುಂಟು; ನಾವೂ ಅದೇ ರೀತಿಯಲ್ಲಿ ಕೆಟ್ರದಾರಿಗೆ ಬೀಳಬಾರದೆಂದು ಬುದ್ದಿ ಬರುತ್ತದೆ. ಮುಖ್ಯವಾಗಿ ವಿಷಯಪರಿಶೀಲನ ದೊಡನೆ ದೇಶಸಂಚಾರ ಮಾಡುವುದರಿಂದ ಲೌಕಿಕಜ್ಞಾನವೂ ವಿವೇಕವೂ ಅನುಭವವೂ ಉಂಟಾಗುವುವು. ಇದಲ್ಲದೆ ಹವಾಬದಲಾವಣೆಯಿಂದ ನಮ್ಮ ಆರೋಗ್ಯವು ಹೆಚ್ಚುವುದು ಬಹಳ ಮುಖ್ಯವಾದ ಸಂಗತಿಗಳು ನಡೆದ ಸ್ಥಳಗಳ ವರ್ಣನೆಯನ್ನು ಚರಿತ್ರೆಯಲ್ಲಿ ನಾವು ಓದಬಹುದು. ಓದುವುದೇ ನಮ್ಮ ಮನಸ್ಸಿಗೆ ಅಷ್ಟು ಆ ಹ್ಲಾದಕರವಲ್ಲ, ಆ ಸ್ಥಲಗಳನ್ನು ಪ್ರತ್ಯಕ್ಷವಾಗಿ ನೋಡಿದಮೇಲೆ ಅವುಗಳ ವರ್ಣನೆಗಳಲ್ಲಿ ನಮಗೆ ಅತ್ಯಾಸಕ್ತಿ ಹುಟ್ಟುತ್ತದೆ. ನಮ್ಮ ಊಹನಾ ಶಕ್ತಿ ಹೆಚ್ಚಿ ಆಸ್ಟಲಗಳಲ್ಲಿ ನಡೆದಂತೆ ಬರೆದಿರುವ ಸಂಗತಿಗಳು ನಮ್ಮ ಕಣ್ಣ ಮುಂದೆ ಆದಷ್ಟು ಸ್ಪಷ್ಟವಾಗಿ ಕಾಣುತ್ತವೆ. ಕುರುಕ್ಷೇತ್ರಕ್ಕೆ ಹೋಗಿ ನೋಡಿದರೆ, ಭಾರತಯು ದ ವು ನೆನಪಿಗೆ ಬಂದುಅದರ ಮನೋಹರವಾದ ವರ್ಣನೆಯನ್ನು ಮಹಾ. ಭಾರತ ದಲ್ಲಿ ಓದಬೇಕೆನಿಸುವುದು. ಪ್ಲಾಸಿಯನ್ನು ನೋಡಿದರೆ, ಅಲ್ಲಿ ಇಂಗ್ಲಿಷರಿಗೂ ಹಿಂದೂಗಳಿಗೂ ನಡೆದ ದೊಡ್ಡ ಯುದ್ದವೂ ಅದರ ಅದ್ಭುತ ಫಲಿ. ತಾಂಶಗಳೂ ಮನಸ್ಸಿಗೆಹೊಳೆದುಯಾರು ತಾನೆಬೆರಗಾಗುವದಿಲ್ಲ?ರೋಮ್ ಗ್ರೀಸ್ ಎಂಬ ಸ್ಪಲಗಳು ಅವುಗಳನ್ನು ನೋಡಿದ ಕವಿಗಳ ಮನಸ್ಸನ್ನು ಕರಗಿಸಿ ಅವರು ಚರಿತ್ರೆಗಳನ್ನೂ ಕಾವ್ಯಗಳನ್ನೂ ಒರೆವಂತೆ ಮಾಡಿವೆ. ನದಿ, ಪರ್ವತ,ಜಲಪಾತಮುಂತಾದುವನ್ನು ಭೂಗೋಳಶಾಸ್ತ್ರದಲ್ಲಿ ವರ್ಣಿ ಸಿರಬಹುದು ಆ ವರ್ಣನೆ ಎಷ್ಟು ಚೆನ್ನಾಗಿರಲಿ, ಅದನ್ನೋದಿದರೆ ನಮಗೆ ಅಷ್ಟು ಆನಂದವಾಗದು. ಹಿಮಾಲಯ ಪರ್ವತವು ಲೋಕದಲ್ಲೆಲ್ಲ ಅತ್ಯುನ್ನತವಾದುದು. ಅದನ್ನು ಕಣ್ಣಾರೆ ನೋಡಿದಾಗ, ನಮ್ಮ ಮನಸ್ಸಿನ ಸ್ಥಿತಿಯೇ ಬೇರೆ, ವರ್ಣನೆಯನ್ನೂದಿದಾಗ ಇರುವ ಸ್ಥಿತಿಯೇ ಬೇರೆ. ಒಂದು ಶಿಖರದ ಮೇಲೆ ಮತ್ತೊಂದು ಶಿಖರದಿಂದ ಕಂಗೊಳಿಸುವ ಆಶ್ರೇಣಿಯ ಮಹೌu