ನದಿಗಳ ಉಪಯೋಗ ೧೩೯ ತ್ಯವನ್ನು ನೋಡುವುದರಿಂದ ನಮ್ಮ ಮನಸ್ಸಿನಲ್ಲಿದ್ದ ಅಲ್ಪತ್ವವು ತೊಲಗಿ ಗಾಂಭೀರ್ಯವು ಬರುವುದು.ಗೇರಸೊಪ್ಲಾಜಲಪಾತ,ತಾಜಾ ಮಹಲ್ ಇವು ಗಳ ನೋಟದಿಂದುಂಟಾಗುವ ಆನಂದವನ್ನು ನೋಡಿರುವವರೇ ಬಲ್ಲರು. - ಹಿಂದೆ ದೇಶಸಂಚಾರವು ತುಂಬಾ ತೊಂದರೆಯನ್ನು ಕೊಡುತ್ತಿತ್ತು. ಇದಕ್ಕೆ ಹಣವೂ ಕಾಲವೂ ಬಹಳ ಬೇಕಾಗಿದ್ದು ವು. ಈಗ ದೇಶಾಟನೆಗೆ ಬಹು ಸೌಕರ್ಯವುಂಟು, ಕೊಂಚವೇಳೆಯಲ್ಲಿಯೇ ಸ್ವಲ್ಪ ವೆಚ್ಚ ಮಾಡಿದರೂ ಬಲುದೂರ ಪ್ರಯಾಣ ಮಾಡಬಹುದು. ಆದರೆ ರೈಲಿನ ಪ್ರಯಾಣದಿಂದ ದೇಶಗಳನ್ನು ಚೆನ್ನಾಗಿ ಪರೀಕ್ಷಿಸಿ ನೋಡಲಾಗುವುದಿಲ್ಲವೆನ್ನಬಹುದು. ಇದು ಯಾರ ತಪ್ಪು? ರೈಲಿನತಪ್ಪೆ ರೈಲಿನಲ್ಲಿ ಪ್ರಯಾಣಮಾಡಿದರೂ ದೇಶಾಟನೆಯಿಂದಾಗುವ ಮನೋವಿಕಾಸಾದಿ ಪ್ರಯೋಜನಗಳು ಲಭಿಸುವಂತೆಮಾಡಿಕೊಳ್ಳುವುದು ನಮ್ಮ ಕೆಲಸ. ಆದುದರಿಂದ ನಮ್ಮ ಜನ್ಮಭೂಮಿಯಾದ ಹಿಂದೂಸ್ಥಾನದಲ್ಲಿಯಾದರೂ ಎಲ್ಲೆಡೆಗಳಲ್ಲಿಯೂ ಸಂಚಾರಮಾಡಿ ಕೊಲಡು ಬರುವುದು ನಮ್ಮ ಕರ್ತವ್ಯವಾಗಿದೆ. 47. ನದಿಗಳ ಉಪಯೋಗ, ನದಿಗಳು ಹಲವು ಬಗೆಗಳಲ್ಲಿ ನಮಗೆ ಬೇಕಾಗಿವೆ. ಬೇಸಾಯಕ್ಕೆ ಇವುಗಳಿಂದಾಗುವ ಉಪಯೋಗವನ್ನು ರೈತರೆಲ್ಲ ಬಲ್ಲರು. ಭೂಮಿಯನ್ನು ಹುಲುಸಾಗಿ ಮಾಡುತ್ತವೆ ; ಪರುಸಚ್ಚೆಗಳು ಚೆನ್ನಾಗಿ ಬೆಳೆವಂತೆ ಮಾಡುತ್ತವೆ ; ಸಾಗುವಳಿಗೂ ದನಕರುಗಳು ಕುಡಿವುದಕ್ಕೂ ಯಥೇಚ್ಛವಾಗಿನೀರನ್ನು ಒದಗಿಸಿಕೊಡುವುವು. ಈಜಿಪ್ಟ್ ದೇಶಕ್ಕೆಲ್ಲ ಒಂದೇ ದೊಡ್ಡ ನದಿ ಆಧಾರ. ಅಲ್ಲಿಯ ಜನರು ಪಯಿರನ್ನೇ ನಂಬಿಕೊಂಡಿದ್ದಾರೆ; ಆ ನಯಿರಿನ ಬೆಳೆಯೆಲ್ಲ ನೈಲ್ ನದಿಯೊಂದರಿಂದಲೇ ನಡೆಯಬೇಕಾಗಿದೆ. ಬೇಸಾಯಕ್ಕೆ ಗಂಗೆ, ಕಾವೇರಿ, ಕೃಷ್ಣ, ಕಪಿಲೆ ಮುಂತಾದ ನದಿಗಳು ಮಾಡುತ್ತಿರುವ ಉಪಕಾರವನ್ನು ನಾವೆಲ್ಲ ಎಂದಿಗೂ ಮರೆಯಲಾರೆವು. ಬೇಸಾಯವಲ್ಲದೆ ಬೇರೆ ಕೆಲಸಗಳಿಗೂ ನದಿಗಳನ್ನು ರ್ಪಯೋಗಿಸಿಕೊಳ್ಳುವುದುಂಟು;ನದೀ ಪ್ರವಾಹಶಕ್ತಿಯನ್ನು ಒಂದು ಕಡೆ ಕೂಡಿಸಿಟ್ಟು ಹತ್ತಿಯನ್ನು ನೂಲುವ, ಮರವನ್ನು ಕೊಯ್ಯುವ, ಧಾನ್ಯವನ್ನು ಬೀಸುವ ಯಂತ್ರಗಳನ್ನು ನಡೆಯಿಸಲು ವಿದ್ಯುಚ್ಛಕ್ತಿಯನ್ನುಂಟುಮಾ ಡುವುದಕ್ಕೂ ಆ ಶಕ್ತಿಯನ್ನು ಬಳಸುವರು. ಮೈಸೂರು ಸರ್ಕಾರದವರು
ಪುಟ:ಪ್ರಬಂಧಮಂಜರಿ.djvu/೧೫೭
ಗೋಚರ