ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ಪ್ರಬಂಧಮಂಜರಿ ಎರಡನೆಯಭಾಗ, ಹಿಂದೂ ಹೆಂಗಸರು ಸೇರಿದರೆ, ನೆರೆಮನೆಯವರ ದೂರು ಹೊರತು ಪ್ರಯೋಜನಕರವಾದ ಬೇರೆ ವಿಷಯವು ಅವರ ಸಂಭಾಷಣೆಗೆತೋರುವುದಿಲ್ಲ.ಇದಕ್ಕೆ, ವಿದ್ಯೆಯಿಲ್ಲದಿರುವುದೇ ಕಾರಣ. ಪುರುಷರು ವಿದ್ಯೆಯಲ್ಲಿ ಹೆಚ್ಚು ತ, ಹೆಂಗಸರು ಪಶುಗಳಂತೆ ಮೂಢರಾಗಿ ಯಥಾಜಾತರೆನಿಸಿದ್ದರೆ, ಇಬ್ಬರಿಗೂ ಪರಸ್ಪರ ಪ್ರೀತಿ ಹೆಚ್ಚಿತೆ?ಸ್ತ್ರೀಯರನ್ನು ಸಂಭಾಷಣೆಗೆ ಅರ್ಹರೆಂದು ಪುರುಷರು ತಿಳಿದಾರೆ? ಸ್ತ್ರೀಯರೊಡನೆ ಸಂಭಾಷಣೆ ಮಾಡುವುದರಿಂದ ಆನಂದವೂ,ಸೀ- ಯರು ಹಿತೈಷಿಗಳಾದ ಮಿತ್ರರಂತೆಆಚರಿಸಿ ಪುರುಷರು ಮಾಡುವ ಕೆಲಸಗಳಲ್ಲಿ ಸಹಾಯರೂ ಆಗಬೇಕಾದರೆ, ಅವರಿಗೆ ಪುರುಷರಂತೆಯೇ ವಿದ್ಯಾಭ್ಯಾಸ ದಿಂದುಂಟಾಗುವಜ್ಞಾನವೂ, ಯುಕ್ಕಾಯುಕ್ತ ವಿವೇಕವೂ, ಕಾರ್ಯನಿರ್ವ ಹಣಶಕ್ತಿಯೂ ಇರಬೇಕು. * ದೇವರ ಸೃಷ್ಟಿಯಲ್ಲಿ ಗಂಡಸರೂ ಹೆಂಗಸರೂ ಒಂದೇ.ಗಂಡಸರಿಗೆ ವಿದ್ಯೆ, ಯನ್ನು ಕಲಿಯಲು ಹೇಗೆ ಸ್ವಭಾವಸಿದ್ಧವಾದ ಬಾಧ್ಯತೆ ಇರುವದೋ ಹಾಗೆಯೇ ಹೆಂಗಸರಿಗೂ ಇದೆ. ಆದುದರಿಂದ ಸ್ತ್ರೀಯರಿಗೆ ವಿದ್ಯೆಯನ್ನು ಕಲಿಸದೆ ಮೂಢಯರನ್ನಾಗಿ ಮಾಡುವುದು ಅನ್ಯಾಯ, ತಾನು ಸಾಕುವ ಕುದುರೆ, ನಾಯಿ, ಗಿಣಿ ಮುಂತಾದ ಪ್ರಾಣಿಗಳಿಗೂ ಮನುಷ್ಯನು ತಮ್ಮ ವಿದ್ಯೆಗಳನ್ನು ಕಲಿಸುವನು, ಸ್ತ್ರೀಯರಿಗೆ ವಿದ್ಯೆ ಕಲಿಸದಿರುವುದು ಬಹಳ ಆಶ್ಚರ್ಯ.ಆದುದ. ರಿಂದವಿದ್ಯೆಯನ್ನು ಕಲಿವ ಶಕ್ತಿಯುಳ್ಳ ಸ್ತ್ರೀಯರಿಗೆ ಉಚಿತ ವಿದ್ಯೆಯನ್ನು ಕಲಿಸುವುದು ಭಗವನ್ನಿ ಯಮಿತವಾದ ಕೆಲಸವೆಂದೇ ತಿಳಿಯಬೇಕು. ಈ ಕಾರಣಗಳಿಂದಲೇ ಅಮೆರಿಕ,ಯೂರೋಪ್ ಖಂಡಗಳಲ್ಲಿ ಗಂಡಸರಂತೆಹೆಂಗಸರಿಗೂ ವಿದ್ಯೆಯನ್ನು ಕಲಿಸುವರು. ವಿದ್ಯಾ ಬಲದಿಂದ ಅಲ್ಲಿನಹೆಂ ಗಸರೂ ಸರ್ಕಾರದ ಅಧಿಕಾರಗಳನ್ನು ಮಾಡುತ್ತಿರುವರು. ಆದರೆ ಹಿಂದೂ ದೇಶದಲ್ಲಿ ಸ್ತ್ರೀ ವಿದ್ಯಾಭ್ಯಾಸವುಚಿರಕಾಲದಿಂದಲೂ ಇಲ್ಲದಿದೆ. ಸ್ತ್ರೀ ವಿದ್ಯಾಭ್ಯಾಸವಿಷಯದಲ್ಲಿ ಆಧುನಿಕರಾದ ನಮ್ಮ ವರು ಅನೇಕ ಆಕ್ಷೇಪಣೆಗಳನ್ನು ಮಾಡುತ್ತಿದಾರೆ. ಕೆಲವರು ಸ್ತ್ರೀಯರು ವಿದ್ಯೆ ಕಲಿವುದರಿಂದ ಅವರಿಗೆ ದುರಹಂಕಾರ ಬರುವುದು' ಎನ್ನುವರು. ಅಲ್ಪ ವಿದ್ರೋ ಮಹಾಗರ್ವಿ ಎಂಬಂತೆಅಧಿಕವಿದ್ಯೆಯನ್ನು ಕಲಿಸದೆ ಸ್ವಲ್ಪ ವಿದ್ಯೆಯನ್ನು ಕಲಿಸಿದರೆ, ಹೀಗೆ ಆಗುವುದುಸಹಜ. ತುಂಬಿದ ಕೊಡ ತುಳುಕುವುದಿಲ್ಲ. ಯಾರಲ್ಲಿಯೂ ಇಲ್ಲದಅತಿಶಯವಾದವಸ್ತು ಒಬ್ಬರಲ್ಲಿದ್ದರೆ, ಅವರಿಗೆ ಹೆಮ್ಮೆ ಬರಬಹುದು.