ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೧ ಸ್ತ್ರೀವಿದ್ಯಾಭ್ಯಾಸ ಕಾಮದಿಂದಾಗುವ ಕೆಡಕುಗಳನ್ನು ಕಡಮೆಮಾಡುವದು ಸರ್ಕಾರದವ ರಿಗೆ ಸೇರಿದುದು.ಕಾಮ ಬಂದಾಗ, ಸರ್ಕಾರದವರುದೊಡ್ಡ ಕೆರೆಗಳು, ರಸ್ತೆಗಳು, ಮುಂತಾದುವನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿ, ಕಾಯ್ತಶಕ್ತಿಯುಳ್ಳ ಬಡವರಿಗೆ ಕೂಲಿಯನ್ನು ಕೊಡಬೇಕು, ಮುದುಕರಿಗೂ ನಿರ್ಬಲರಿಗೂ ಕೆಲಸ ಮಾಡಿಸದೆಯೇ ತಿಂಡಿಹಾಕಬೇಕು. ಕ್ಷಾಮವಿಲ್ಲದಿರುವ ದೇಶಗಳಿಂದಧಾನ್ಯ ಗಳನ್ನು ರೈಲಿನಿಂದ ಜಾಗ್ರತೆಯಾಗಿ ತರಿಸಬೇಕು. ಜನರಿಗೆ ಬಗೆಬಗೆಯ ಕೈಗಾರಿಕೆಗಳನ್ನು ಕಲಿಸಬೇಕು. ಇವುಗಳಿಂದ ಅವರಿಗೆ ಪರದೇಶದಿಂದಲೂ ಆ. ದಾಯ ಬರುವುದು. ಕ್ಷಾಮ ಬರುವುದಕ್ಕೆ ಮುಂಚೆಯೇ ಜನರು ಹಣವನ್ನೂ ಧಾನ್ಯಗಳನ್ನೂ ಕೂಡಿಡುವಂತೆ ಮಾಡಬೇಕು. ಸರ್ಕಾರದವರ ಜತೆಗೆ ಪ್ರಜೆ. ಗಳಲ್ಲಿ ಹಣವಂತರಾದವರೂ ಬಡವರಿಗೆ ಸಹಾಯ ಮಾಡಬೇಕು. ಪರೋಪಕಾರಕ್ಕೆ ಕ್ಷಾಮ ಕಾಲದಂಥ ತಕ್ಕ ಸಮಯವು ದೊರೆಯಲಾರದು. 53. ಶ್ರೀವಿದ್ಯಾಭ್ಯಾಸ ಎಲ್ಲಾ ಜನರಲ್ಲಿಯೂ ಸಾಮಾನ್ಯವಾಗಿ, ಮಕ್ಕಳುಹುಟ್ಟಿದಂದಿನಿಂದತಾಯಿ ಇಲ್ಲವೆ ದಾದಿ ಇವರ ಬಳಿಯಲ್ಲಿರುತ್ತಾರೆ. ಈ ಹೆಂಗಸರು ಅಜ್ಞಾನಿಗಳಾಗಿದ್ದರೆ, ಮಕ್ಕಳು ಏಳಿಗೆಗೆ ಬರುವುದು ಹೇಗೆ? ಹಾಗಲ್ಲದೆ ಅವರು ವಿದ್ಯಾವತಿಯರಾಗಿದ್ದರೆ, ತಮ್ಮ ಮಕ್ಕಳನ್ನು ಉತ್ತಮರೀತಿಯಲ್ಲಿ ಶಿಕ್ಷಿಸುವರು. ಮಕಳು ಇತರರು ನಡೆವಂತೆ ನಡೆವ ಸ್ವಭಾವವುಳ್ಳವರು. ತಮ್ಮ ನ್ನು ನೋಡಿಕೊಇವರಂತೆಯೇ ನಡೆವರು. ಸ್ತ್ರೀಯರು ವಿದ್ಯಾವತಿಯರಾಗಿ ಸನ್ಮಾರ್ಗದಲ್ಲಿ ನಡೆದರೆ, ಅವರಂತೆಯೇ ಅವರಮಕ್ಕಳೂ ನಡೆದುಕೊಂಡು ಮುಂದಕ್ಕೆ ಬರಲವಕಾಶವುಂಟು. ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ ಎಂಬ ಗಾದೆ ಬಲು ಪ್ರಸಿದ್ದವಷ್ಟೆ. ಮನುಷ್ಯನ ಬುದ್ಧಿಯ ಗುಣವೂ ತನ್ನ ತಾಯಿಯ ಗರ್ಭದಲ್ಲಿರುವಾಗಲೇ ಅಂಕುರಿಸುವುವೆಂತಲೂ, ಈ ಗುಣಗಳ ಸ್ವರೂಪವು ಬಹುತರವಾಗಿ ತಾಯಿಯ ಗುಣಗಳನ್ನೇ ಅನುಸರಿಸುತ್ತದೆಯೆಂತಲೂ ಶಾಸ್ತ್ರ ಜ್ಞರು ನಿಶ್ಚಯಿಸಿರುವರು. ಆದುದರಿಂದ ಹೆಂಗಸರಿಗೆವಿದ್ಯೆ ಕಲಿಸಿ ಜ್ಞಾನಾಭಿವೃದ್ಧಿ ಮಾಡಿದರೆ, ಬುದ್ದಿವಂತರಾದ ಜನರು ಹುಟ್ಟುವುದು ಹೆಚ್ಚುತ್ತದೆ. - ಯೋಗ್ಯರೊಡನೆ ಸಂಭಾಷಣೆಯಿಂದ ಆನಂದವಾಗುವುದು. ಅನೇಕ ವಿಷಯಗಳನ್ನು ಅರಿತಹೊರತು ಸಂಭಾಷಣೆಗೆಯೋಗ್ಯತೆ ಬರುವದಿಲ್ಲ. ಅನೇ ಕವಿಷಯಜ್ಞಾನವು ವಿದ್ಯೆಯಿಂದಲೇ ಬರುವುದು. ಪ್ರಕೃತಸ್ಥಿತಿಯಲ್ಲಿ ಇಬ್ಬರು 'ಆ