ಪುಟ:ಪ್ರಬಂಧಮಂಜರಿ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀರಸ್ತು, ಪು ಬಂಧಮಂಜರಿ. .+%b2%a' ..- ಮೊದಲನೆಯ ಭಾಗ: ಪ್ರಬಂಧರಚನಾಕ್ರಮ, ವಾಕ್ಯ ರಚನೆ (Composition) ಇತರರಿಗೆ ನಮ್ಮ ಅಭಿಪ್ರಾಯವನ್ನು ಪೂರ್ಣವಾಗಿ ತಿಳಿಸತಕ್ಕ ಮಾತುಗಳ ಸಮೂಹಕ್ಕೆ ವಾಕ್ಯವೆಂದು ಹೆಸರು. ಅಂತಹ ವಾಕ್ಯಗಳನ್ನು ಪ್ರಯೋಗಿಸುವುದು ವಾಕ್ಯರಚನೆಯೆನಿಸುವುದು, ವಾಕ್ಯರಚನೆ ಸರಿಯಾಗಿದ್ದರೆ ಅದರಲ್ಲಿ ಶಬ್ದದ ಮತ್ತು ಅರ್ಥದ ದೋಷ ಯಾವುದೂ ಇರುವುದಿಲ್ಲ. ಬರೆದವರ ಅಭಿಪ್ರಾಯಗಳು ವಿಶದವಾಗಿಯೂ ಸುಲಭವಾಗಿಯೂ ತಿಳಿಯಬರುವುವು. ಅಲ್ಲದೆ ನೆನಪಿನಲ್ಲಿಟ್ಟು ಕೊಳ್ಳುವಷ್ಟು ಲಲಿತವಾಗಿರುವುದು ವಾಸಕ್ಕೆ ಯೋಗ್ಯವಾಗುವಂತೆ ಒಂದು ಮನೆಯನ್ನು ಕಟ್ಟಬೇಕಾದರೆ ಕಲ್ಲುಗಳನ್ನೂ ಇಟ್ಟಿಗೆಗಳನ್ನೂ ತಕ್ಕ ಸ್ಥಳಗಳಲ್ಲಿ ಸರಿಯಾಗಿ ಇಡಬೇಕು. ಹಾಗೆಯೇ, ನಮ್ಮ ಅಭಿಪ್ರಾಯಗಳು ಹೆರರಿಗೆ ವಿಶದವಾಗಿ ತಿಳಿಯಬರಬೇಕಾದರೆ, ತಕ್ಕ ಪದಗಳನ್ನು ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಸೇರಿಸಿ ಬರೆಯಬೇಕು. ವಾಕ್ಯಗಳನ್ನು ಚೆನ್ನಾಗಿ ರಚಿಸುವ ಯೋಗ್ಯತೆಯನ್ನು ಹೇಗೆ ಸಂಪಾದಿಸಬೇಕು ? ಕೆಲವರು ವ್ಯಾಕರಣ ಜ್ಞಾನದಿಂದ ಅದನ್ನು ಸಂಪಾದಿಸಬಹುದೆನ್ನು ವರು. ಇದು ತಪ್ಪು, ವ್ಯಾಕರಣವು ಶಬ್ದಗಳನ್ನು ತಿದ್ದುವುದಕ್ಕೆ ಸಹಕಾರಿಯಾಗುವುದೇ ಹೊರತು ಯಾವುದಾದರೂ ಒಂದು ವಿಷಯವನ್ನು ಕುರಿತು ಬರೆವ ಶಕ್ತಿಯನ್ನುಂಟುಮಾಡಲಾರದು. ಯಾವ ಭಾಷೆಯಲ್ಲಿ.