ಪುಟ:ಪ್ರಬಂಧಮಂಜರಿ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ಪ್ರಬಂಧಮಂಜರಿ-ಎರಡನೆಯ ಭಾಗ. ತೇದು ಚೊಕ್ಕಟ ಮಾಡಿಕೊಳ್ಳುತ್ತದೆ. ರಾತ್ರಿ ಮರದ ಕೊಂಬೆಯ ಮೇಲೆ ಕುಳಿತು ನಿದ್ರೆ, ಬಹಳ ತಂತ್ರವುಳ್ಳದ್ದು ; ದೃಷ್ಟಾಂತವಾಗಿ ಕಥೆ, ಆಹಾರ ಸಿಕ್ಕುವುದು ತಿಳಿದೊಡನೆ ಕೂಗಿಕೊಂಡು ಜೊತಯ ಕಾಗೆಗಳನ್ನೂ ಕರೆದು ಅವಕ್ಕೂ ಕೊಡುತ್ತದೆ. ಒಂದು ಕಾಗೆ ಸತ್ತರೆ, ಹಲವು ಕಾಗೆಗಳು ಗುಂಪುಗೂಡಿ ಕೂಗುತ್ತವೆ. ಆಯುಸ್ಸು ಸುಮಾರು 100 ವರ್ಷ, ಆದ್ದರಿಂದಲೇ ಇದಕ್ಕೆ ಆ ಚಿರಜೀವಿ” ಎಂಬ ಹೆಸರು. ಮರದ ಮೇಲೆ ಗೂಡುಕಟ್ಟಿ ಮೊಟ್ಟೆ ಇಡುವುವು. (4) ಕಸಬಳಿಯುವವನ ಕಲಸಮಾಡುತ್ತದೆ. ಮನೆಯ ಹತ್ತಿರ ನಾರುತ್ತ ಬಿದ್ದಿರುವ ಸತ್ತ ಇಲಿ, ಹೆಗ್ಗಣ ಮುಂತಾದುದನ್ನು ಎತ್ತಿಕೊಂಡು ಹೋಗುವುದು. ಪಯಿರನ್ನು ಹಾಳು. ಮಾಡುವ ಹುಳುಗಳನ್ನು ತಿಂದು ವ್ಯವಸಾಯಕ್ಕೆ ಅನುಕೂಲ ಮಾಡುವುದು, ಕಾಗಯಿಂದ ನಾವು ತಿಳಿಯಬಹುದಾದ ಎರಡು ನೀತಿ. 5. ನಾಗರಹಾವು. (1) ಇಂಡಿಯಾದೇಶದ ಬಯಲು ಸೀಮೆಗಳಲ್ಲಿ ವಿಶೇಷ; ಚಳಿಯಾದ ಬೆಟ್ಟದ ಸರಹದ್ದು. ಗಳಲ್ಲಿರುವುದಿಲ್ಲ; ಅತ್ಯುಷ್ಣ ಪ್ರದೇಶಗಳಲ್ಲಿಯೇ ವಿಶೇಷ (8) ಸಾಮಾನ್ಯವಾಗಿ ಗೋಧಿಯ ಬಣ್ಣ ; ಕಪ್ಪು ಬಣ್ಣವೂ ಉಂಟು. ತಲೆ ಚಿಕ್ಕದು, ತ್ರಿಭುಜಾಕಾರ. ಕಣ್ಣು ಗುಂಡು, ಮುಟ್ಟಿದರೆ ಗಟ್ಟಿ, ರೆಪ್ಪೆಗಳಿಲ್ಲ, ಕಣ್ಣುಗಳನ್ನು ಪಕ್ಕಗಳಿಗೆ ತಿರುಗಿಸಲಾಗುವುದಿಲ್ಲ, ಕುತ್ತಿಗೆಯನ್ನು ತಿರುಗಿಸಿ ನೋಡಬೇಕು, ಕಿವಿಗಳು ಹೊರಗೆ ಎಲ್ಲೆಲ್ಲಿಯೂ ಕಾಣಿಸುವುದಿಲ್ಲ. ಮಗಿನ ಸೊಳ್ಳೆಗಳಿಲ್ಲ. ಬಾಯಿ ದೊಡ್ಡದು, ಎರಡು ದವಡೆಗಳನ್ನೂ ಅಲ್ಲುಡಿಸಬಲ್ಲುದು, ಬಾಯನ್ನು ಅಗಲವಾಗಿ ತೆರೆದು ತನಗಿಂತ ಗಾತ್ರವಾದ ಪ್ರಾಣಿಗಳನ್ನು ಕೂಡ ನುಂಗಬಲ್ಲುದು. ಹಲ್ಲುಗಳು ಮೊನೆಯಾಗಿ ಹಿಂದಕ್ಕೆ ಬಾಗಿವೆ. ಏಕೆ ? ಇವುಗಳಿಂದ ಅಗಿಯುವುದಕ್ಕಾಗುವುದಿಲ್ಲ. ವಿಷದ ಹಲ್ಲುಗಳು ಎರಡು ಮೇಲಣ ದವಡೆಯಲ್ಲಿವೆ. ಇವುಗಳ ಒಳಗಡೆ ರಂಧ್ರವಿದೆಬುಡದಲ್ಲಿ ವಿಷ ತುಂಬಿದ ಒಂದು ಸಣ್ಣ ಚೀಲವಿದೆ ಹಾವು ಕಡಿದಾಗ ಈ ಚೀಲದಿಂದ ವಿಷವು ಹರಿದು ಹಲ್ಲಿನ ರಂಧಗಳಲ್ಲಿಳಿದು ಗಾಯಕ್ಕೆ ಬಂದು ಬೀಳುತ್ತದೆ, ನಾಲಿಗೆ ಕಪ್ಪು, ಉದ್ದ, ತುದಿಯಲ್ಲಿ ಎರಡು ಸೀಳು, ಬೇಕಾದಾಗ ನೀಡಬಹುದು. ಹಾವಿಗೆ ನಾಲಿಗೆಯೇ ಮುಖ್ಯ ಸ್ವರ್ಶಂದ್ರಿಯ, ಹೆಡೆಯ ಹಿಂಭಾಗದಲ್ಲಿ ಕಣ್ಣಿನಂತೆ ಎರಡು ಕರಿಯ ಚುಕ್ಕೆಗಳು, ಅವುಗಳ ನಡುವೆ ಒಂದು ಕರಿಯ ಗೆರೆ ಮೈ ಹಗ್ಗ ದಂತ ಉದ್ದ, ತುದಿಯಲ್ಲಿ ಮೊನೆ, ಹಾವಿನ ಕೆಳಭಾಗದಲ್ಲಿ ತುಂಡುತುಂಡಾದ ಹಲವು ಚರ್ಮಗಳಿವೆ. ಇವುಗಳ ಸಹಾಯದಿಂದ ತನ್ನ ದೇಹವನ್ನು ಎಳೆದುಕೊಂಡು ಹೋಗುತ್ತದೆ. ಕಾಲುಗಳಿಲ್ಲ, (3) ಆಹಾರ-ಕಪ್ಪ, ಇಲಿ, ಕೋಳಿಮರಿ, ಹಕ್ಕಿ ಮೊದಲಾದ ಸಣ್ಣ ಪ್ರಾಣಿಗಳು, ಹಕ್ಕಿಯ ಮೊಟ್ಟೆ, ಸ್ವಭಾವಬಹಳ ರೋಷವುಳ್ಳ, ಪ್ರಾಣಿ ; ರೇಗಿದಾಗ ಹೆಡೆಯನ್ನು ಬಿಚ್ಚಿ ಕಚ್ಚುತ್ತದೆ. ಸಾಧಾರಣವಾಗಿ ಹುತ್ತದಲ್ಲಿ, ಹೊದರಿನಲ್ಲಿ ವಾಸ ; ರಾತ್ರಿ ಸಂಚಾರ ಹೆಚ್ಚು, ನವಿಲಿಗೂ ಮುಂಗಸಿಗೂ ಹೆದರಿ ಅವಿತುಕೊಳ್ಳುತ್ತದೆ. ಶಾಂತವಾಗಿರುವಾಗ ಮೈಯನ್ನೆಲ್ಲಾ ಸುರಳಿ