ಪುಟ:ಪ್ರಬಂಧಮಂಜರಿ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೨ ಪ್ರಬಂಧಮಂಜರಿ-ಎರಡನೆಯ ಭಾಗ 23. ವಸ್ತು ಪ್ರದರ್ಶನಗಳು, 1, ಈಚೆಗೆ ಎಲ್ಲಾ ನಾಗರಿಕದೇಶಗಳಲ್ಲೂ ಹೆಚ್ಚುತ್ತವೆ. ಇವುಗಳಲ್ಲಿ ಮಾಡುವುದೇನು ? 2, ಉದ್ದೇಶಗಳು ಜನರಲ್ಲಿ ಪರಸ್ಪರ ಸ್ನೇಹಾಭಿವೃದ್ಧಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಬಹುಮಾನಕ್ಕಾಗಿ ಕೈಗಾರಿಕೆಯವರಲ್ಲಿ ಸ್ಪರ್ಧೆ, ಕೈಗಾರಿಕೆಯನ್ನು ಗುಟ್ಟಾಗಿ ಮುಚ್ಚಿಡದೆ ಬಹಿರಂಗಮಾಡುವ ಬುದ್ಧಿ, ನೋಟಕಂಗೆ ಪದಾರ್ಥಜ್ಞಾನ ಹೆಚ್ಚುವುದು. ವಿದ್ಯಾಭ್ಯಾಸಕ್ಕೆ ಇದೊಂದು ದಾರಿ, 3, ನೀವು ನೋಡಿರುವ ಒಂದು ದೊಡ್ಡ ವಸ್ತು ಪ್ರದರ್ಶನದ ವರ್ಣನೆ, ನಿಮ್ಮ ಮನಸ್ಸಿನಲ್ಲಿ ಅದರಿಂದ ಹೊಳದ ಅಭಿಪ್ರಾಯಗಳು, 24, ಜೀವವಿಮೆ, (ಲೈಫ್ ಇನ್ ಪ್ಯೂರೆನ್ಸ್.) 1. ಪ್ರಾಣಿಗಳು ಅಸ್ಥಿರ, ಅನೇಕ ವಿಧಗಳಲ್ಲಿ ಹಠಾತ್ತಾಗಿ ಮರಣ ಸಂಭವಿಸಬಹುದು, 2 ಪೂರ್ವಕಾಲದಲ್ಲಿ ಒಬ್ಬನಿಗೆ ಅಕಾಲಮರಣ ಪ್ರಾಪ್ತವಾದರೆ, ಅವನ ಹೆಂಡತಿ ಮಕ್ಕಳಿಗೆ ದಿಕ್ಕಿಲ್ಲದೆ ಅವನ ಜೀವನವೇ ದುಸ್ತರವಾಗಿದ್ದಿತು. 3, ಈಗ ಜೀವವಿಮೆಯಿಂದ ಇದು ತಪ್ಪಿದೆ. 4 ಪ್ರತಿಮಾಸವೋ, ಆರು ತಿಂಗಳಿಗೋ, ವರ್ಷಕ್ಕೋ, ಸ್ವಲ್ಪ ಸ್ವಲ್ಪ ಹಣವನ್ನು ಕೊಟ್ಟು, ಒಟ್ಟಿಗೆ ಸಾವಿರಾರು ರೂಪಾಯಿಗಳನ್ನು ಕೊನೆಯಲ್ಲಿ ಪಡೆಯಬಹುದು ಇದರಿಂದ ಇನ್‌ಕ್ಯೂರೆನ್ಸ್ ಕಂಪೆನಿಯವರಿಗೆ ನಷ್ಟವಾಗುವುದಿಲ್ಲವೇ? ಎಂಬ ವಿಚಾರ, 5. ಜೀವವಿಮೆ ನಮಗೆ ಚಿಂತೆಯನ್ನು ಹೋಗಲಾಡಿಸಿ, ತನ್ಮೂಲಕ ಆಯುಸ್ಸನ್ನು ಹೆಚ್ಚಿಸುವುದು, 6, ಮಿತವ್ಯಯವನ್ನು ನಮ್ಮಲ್ಲಿ ಹುಟ್ಟಿಸುತ್ತದೆ. 7, ನೌಕರರೆಲ್ಲಾ ಜೀವವಿಮೆಯನ್ನು ಮಾಡಬೇಕೆಂಬ ಸರಕಾರದ ನಿರ್ಬಂಧ 25, ಬಡತನ, 1. ಕಾರಣಗಳು--ಬಡತನವು ದೌರ್ಭಾಗ್ಯದಿಂದ ಬರುವುದುಂಟೆ? ಉದಾಹರಣೆಗಳು: ದುಂದುಗಾರಿಕೆ, ಉಪೇಕ್ಷ್ಯ, ಸೋಮಾರಿತನ, ದುರಾಚಾರ ಇವುಗಳಿಂದ ಎಷ್ಟು ಮಟ್ಟಿಗೆ ಬರಬಹುದು ? ಈ ಎರಡು ತರದ ಬಡತನಗಳಿಗೆ ಭೇದ ? ಎರಡಕ್ಕೂ ಸಹಾಯಮಾಡಬಹುದೇ? - ೪, ಉಪಯೋಗಗಳು:-() ಸುಖಕಾಲದಲ್ಲಿಲ್ಲದ ಕೆಲವು ಸುಗುಣಗಳು ಬಡತನದಲ್ಲಿ ಜನರಿಗೆ ಉಂಟಾಗುವುವು. ಉದಾಹರಣೆ. (೩) ದಾರಿದವು ಸ್ನೇಹದ ಒರೆಗಲ್ಲು (3) ದಂದ್ರಾವಸ್ಥೆಯಲ್ಲಿ ಸಂಕಟ ಪಡುತ್ತಿರುವವರನ್ನು ನೋಡಿ, ಜನರಲ್ಲಿ ಪರೋಪಕಾರ ಬುದ್ದಿ ಹುಟ್ಟುವುದು, 3, ಪರಿಹಾರ, ತಕ್ಕಮಟ್ಟಿಗೆ ವಿದ್ಯಾಭ್ಯಾಸದಿಂದ ಬಡವರು ವಾಸಿಸುವ ಸನ್ನಿವೇಶದಿಂದ ಬಲುಮಟ್ಟಿಗೆ ಸಹಾಯವುಂಟು, ಸರ್ಕಾರದಿಂದ ಎಷ್ಟು ಮಟ್ಟಿಗೆ ಪ್ರಯೋಜನವಾಗಬಹುದು 4, ಇಂಡಿಯಾದಶದಲ್ಲಿ ಬಡತನ ಹೆಚು , ಇದಕ್ಕೆ ಕಾರಣಗಳು