ವಿಷಯಕ್ಕೆ ಹೋಗು

ಪುಟ:ಪ್ರಬಂಧಮಂಜರಿ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧c ಪ್ರಬಂಧಮಂಜರಿ-ಮೊದಲನೆಯ ಭಾಗ ನಾಗೇಂದ್ರನಾಥನು ಹಾಗೆಯೇ ಮಾಡುವೆನೆಂದೊಪ್ಪಿಕೊಂಡು ಹೊರಟಿದ್ದನ್ನು ನಾಗೇಂದ್ರನು ಹಾಗೆಯೇ ಒಪ್ಪದಿದ್ದರೆ ಸೂರ್ಯಮುಖಿಯು ಈ ಪ್ರಯಾಣಕ್ಕೆ ಸಮ್ಮತಿಸುತಿ ರಲಿಲ , ನಾಗೇಂ. ದ್ರನು ಕಲಿಕತ್ತಾಕ್ಕೆ ಹೋಗದಿರಲು ಸಾಧ್ಯವಾಗಿರಲಿಲ್ಲ, ನಾಗೇಂದ್ರನಾಥದತ್ತನು ಒಬ್ಬ ಅತುಟೈಶ್ವರ್ಯವುಳ್ಳ ಜಮೀನ್ದಾರನಾಗಿದ್ದನು. ನಾಗೇಂದ್ರನು ಯವನ ಪುರುಷನಾಗಿದ್ದನು.” “ಬೆಳ್ಳಿ ಬಂಗರಗಳಿಂದ ಅನೇಕ ಆಭರಣಾಲಂಕಾರಗಳನ್ನು ಮಾಡುವರು.” “ಈ ದಾರುಣವಾದ ಶೋಕವನ್ನು ಸಹಿಸಲಾರದೆ ರಾಜಾದಶರಥನು ಪ್ರಾಣ ಬಿಟ್ಟವನಾಗಿ ಪರಲೋಕ ಯಾತ್ರೆ ಮಾಡಿದರು.” “ ಅಲಕ್ಷಾಂಡರನು ಭರತವರ್ಷವನ್ನು ಪರಿತ್ಯಾಗಮಾಡಿ ಬಿಟ್ಟು ಹೋದ ಮೇಲೆ ಚಂದ್ರಗುಪ್ತನು ಸಿಂಹಾಸನಕ್ಕೆ ಬಂದನು.” “ಸತ್ಯಸಂಧನಾದ ದಶರಥನು ತನ್ನ ಮಗನನ್ನೂ ಮಾತು ಕೊಟ್ಟಿದ್ದಂತೆ ಕಾಡಿಗೆ ಕಳುಹಿಸಿದನು.” 4 ತಾವು ಪಟ್ಟ ಕಷ್ಟವನ್ನು ಹಲವು ಬಾರಿ ಹೇಳಿಕೊಂಡು ಹೇಳಿ ಕೊಂಡು ಮರುಗುತ್ತಿದ್ದರು.” (6ಬೌದ್ಧಮತಾವಲಂಬಿಗಳೆಲ್ಲರೂ ಮೊದಲು ಮೊದಲು ದಿಗಂತವ್ಯಾಪಿಗಳಾಗಿ ದಿಕ್ಕು ದಿಕ್ಕಿಗೆ ಹೊರಟು ಹೋಗುತ್ತಿದ್ದರು.” ಈಗಿನ ವಿದ್ಯಾರ್ಥಿಗಳು 1 ಮತ್ತು ಆದರೆ ” ಮೊದಲಾದ ಕೆಲವು ಶಬ್ದ ಗಳನ್ನು ಬಾರಿಬಾರಿಗೂ ನಿರರ್ಥಕವಾಗಿ ಬರೆವುದೂ, c« ಅಂಥ ಎಂಬುದನ್ನು ವಿಶೇಷಣಗಳ ಕೊನೆಯಲ್ಲಿ ಒಂದೇ ಕಡೆ ಹಲವು ಬಾರಿ ಸೇರಿಸುವುದೂ ಬಹಳ ವಾಡಿಕೆಯಾಗಿದೆ. ಇದು ತಪ್ಪು, (2) ಶಬ್ಲಾಧಿಕ್ಯ (Verbosity)ವೆಂದರೆ ಒಂದೆರಡು ಶಬ್ದಗಳಿಂದಲೇ ಬೇಕಾದ ಅರ್ಥವಾಗುವ ಕಡೆ ಹಲವು ಶಬ್ದಗಳನ್ನೂ ವಾಕ್ಯಗಳನ್ನೂ ವ್ಯರ್ಥವಾಗಿ ಪ್ರಯೋಗಿಸುವುದು. ಈ ದೋಷವನ್ನು ತಿದ್ದಬೇಕಾದರೆ ಹೆಚ್ಚಾದ ಶಬ್ದ ಗಳನ್ನು ಹೊಡೆದುಹಾಕುವುದು ಸಾಲದು ; ವಾಕ್ಯಗಳನ್ನೇ ಮೊದಲಿನಿಂದ ಕೊನೆವರೆಗೂ ಬದಲಾಯಿಸಿ ಬರೆಯಬೇಕು ಉದಾ- “ಪಾಪಿಯಾದ ಹೊಳೆಯೇ, ಇನ್ನು ನೀನು ನೀರು ಬತ್ತಿ, ಚಿಲುಮೆಗಳಡಗಿ, ಹಳ್ಳಗಳು ಹೂತುಹೋಗಿ, ಪ್ರವಾಹವಿಲ್ಲದ, ಮನನೊಂದು, ರೂಪು ತೋರದೆ, ನಿರ್ನಾಮವಾಗಿ ಹಾಳಾಗಿ ಹೋಗುವೆ.”