ಪುಟ:ಪ್ರಬಂಧಮಂಜರಿ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲೇಖನಚಿಹ್ನೆಗಳು ೧r ವರು. ನಮ್ಮ ದೇಶಕ್ಕೆ ಅಚ್ಚು ಹಾಕುವುದು ಬಂದಮೇಲೆ ಆ ಗುರುತುಗಳು ಕನ್ನಡದಲ್ಲಿಯೂ ಪ್ರಚಾರಕ್ಕೆ ಬಂದಿವೆ. ಅವುಗಳಲ್ಲಿ ಮುಖ್ಯವಾದುವನ್ನು ಇಲ್ಲಿ ವಿವರಿಸಿದೆ, (1) , ಪೂರ್ಣವಿರಾಮ (The Full Stop). ವಾಕ್ಯವು ಮುಗಿದೊಡನೆ ಈ ಚಿಹ್ನೆ ಯನ್ನು ಹಾಕಬೇಕು ಶಬ್ದ ಗಳ ಸಂಕ್ಷಿಪ್ತ ರೂಪಗಳಲ್ಲಿಯೂ ಇದು ಬರುವುದು, ಹೇಗೆಂದರೆಶಬ್ಬಾ, ಶಾ, (ಶಬ್ದಾನುಶಾಸನ), ಅ ಸ ಸ (ಅಪ್ಪರ್ ಸೆಕಂಡರಿ ಪರೀಕ್ಷೆ), (2) ; ಅರ್ಧವಿರಾಮ (The Semi-Colon), ಇದು ಕಾರ್ಯವನ್ನೂ ಕಾರಣವನ್ನೂ ತಿಳಿಸುವ ವಾಕ್ಯಗಳ ನಡುವೆ ಬರುವುದು. ಉದಾ. ಮಿತವ್ಯಯವು ಅಪಮಾನಕರವಲ್ಲ ; ಏಕೆಂದರೆ, ಸಾಲಗಾರರಾಗಿ ಸಾಯುವುದಕ್ಕಿಂತ ಇದ್ದುದರಲ್ಲಿಯೇ ತೃಪ್ತಿ ಪಡೆದು ಬಡವರಾಗಿ ಬದುಕುವುದು ಲೇಸು. ವಿರೋಧಾರ್ಥಕ ವಾಕ್ಯದ ಹಿಂದೆಯೂ ಬರುವುದು. ಉದಾ:- ದುರ್ಜನರು ಒಳ್ಳೆಯ ಮಾತನಾಡುವರು ; ಆದರೆ ಮನದಲ್ಲಿ ವಿಷ ಕಾರುವರು, (3) , ಅಲ್ಪ ವಿರಾಮ (The Comma). ಇದು ಮುಂದಣ ಸಂದರ್ಭಗಳಲ್ಲಿ ಬರುವುದು:- 1. ಒಂದೇ ಪದದಲ್ಲಿ ಅನ್ವಯಿಸುವ ಎರಡು ಅಥವಾ ಹಲವು ಪದಗಳ ನಡುವೆ. ಉದಾ,- ದಯಾಶಾಲಿಯೂ, ಹಿತಚಿಂತಕನೂ, ಉದಾರನೂ, ಸತ್ಯವಾದಿಯೂ ಆದವನನ್ನು ಎಲ್ಲರೂ ಪ್ರೀತಿಸುವರು. ಅವನು ಇಲ್ಲಿಗೆ ಬಂದು, ತನ್ನ ಕೆಲಸವನ್ನೆಲ್ಲಾ ಮಾಡಿಕೊಂಡು, ಒಡನೆಯೇ ಹೊರಟುಹೋದನು, 2. ಅನೇಕ ಪದಯುಗ್ನಗಳ ಮೇಲೆ. ಉದಾಮುದುಕರೂ ಹುಡುಗರೂ, ಗಂಡಸರೂ ಹೆಂಗಸರೂ, ಹಣಗಾರರೂ ಬಡವರೂ, ಜಾಣರೂ ಹೆಡ್ಡರ ಎಲ್ಲರೂ ದೇವರಿಗೆ ಒಂದೇ,