ಪ್ರಬಂಧ, (1) ಅರ್ಥವಿವರಣೆ:-ಕೊಟ್ಟ ವಿಷಯದ ಅರ್ಥವನ್ನು ಸುಲಭ ವಾದ ಶಬ್ದಗಳಿಂದ ವಿವರಿಸುವುದು. ಒಂದು ಪರ್ಯಾಯಪದವನ್ನು ಕೊರೆ ಸಾಲದು. ಕೊಟ್ಟ ಶಬ್ದದಿಂದ ಹುಟ್ಟಿದ ಶಬ್ದಗಳು ಯಾವುವೂ ಅರ್ಥವಿವ ರಣೆಯಲ್ಲಿ ಬರಬಾರದು. ಧೈರ್ಯವೆಂದರೆ ಧೀರತೆ ಅಥವಾ ಧೀರತ್ವ,” ಧೈರ್ಯವೆಂದರೆ ಧೀರನಾಗಿ ಕೆಲಸಮಾಡುವ ಗುಣ ಎಂಬ ವಿವರಣೆಗೆಳಿಂದ ಏನೂ ಫಲವಿಲ್ಲ. ( ಬಂದ ಅಪಾಯಗಳಿಗೆ ಹೆದರದೆ ಇದಿರುಬಿದ್ದು ಅವುಗಳನ್ನು ನಿವಾರಿಸಿಕೊಳ್ಳಲು ತಕ್ಕ ಪ್ರಯತ್ನ ಮಾಡುವ ಗುಣವು ಧೈರ್ಯವೆನಿಸುವುದು ಎಂದು ಹೇಳಿದರೆ, ಧೈರ್ಯವೆಂಬುದು ಇಂಥದು ಎಂದು ತಿಳಿಯಬರುವುದು, (2) ಲೇಖಕನ ಅಭಿಪ್ರಾಯ:- ಇದು ಬಲು ಮುಖ್ಯವು, ಮೊದಲ' ವಿಚಾರಮಾಡದೆ ಬರೆದು ಆಮೇಲೆ ಯೋಚಿಸಿ ಅದಕ್ಕೆ ವಿರುದ್ಧವಾಗಿ ಬರೆಯಬಾರದು, ಆಸೆಯ ವಿಷಯದಲ್ಲಿ ಬರೆವಾಗ, ಆಸೆಯಂಥ ದುರ್ಗುಣವು ಲೋಕದಲ್ಲಿ ಯಾವುದೂ ಇಲ್ಲ. ಇದನ್ನೆಲ್ಲರೂ ಬಿಡಬೇಕು.” ಎಂಬಾಶಯವನ್ನು ಮೊದಲು ಕೊಟ್ಟು, ಕೊನೆಗೆ ಪರ್ಯಾಲೋಚಿಸಿ, ಆಸೆಯಿರುವುದು ಕೆಲವೇಳೆ ಒಳ್ಳೆಯದು; ಇದರಿಂದ ಮನುಷ್ಯರ ಏಳಿಗೆಗೆ ಮಾರ್ಗವಾಗುವುದು' ಎಂದು ಬರೆಯಬಾರದು, (3) ಆ ಅಭಿಪ್ರಾಯಕ್ಕೆ ಕಾರಣಗಳು:-ಲೇಖಕನ ಅಭಿಪ್ರಾ, ಯಗಳಿಗೆ ತಕ್ಕ ಕಾರಣಗಳನ್ನು ಕೊಡಬೇಕು. ಒಂದು ವಿಷಯವು ಒಳ್ಳೆಯದು, ಅಥವಾ ಕೆಟ್ಟುದು, ಯಾವಾಗಲೂ ಎಲ್ಲೆಡೆಯಲ್ಲಿಯೂ ಉಪಯುಕ್ತವು ಅಥವಾ ಕೆಲವುವೇಳೆ ಕೆಲವುಕಡೆ ಮಾತ್ರ ಪ್ರಯೋಜನಕರವೆಂದು ಅಭಿಪ್ರಾಯ ಪಟ್ಟರೆ, ಅದಕ್ಕೆ ತಕ್ಕ ಪ್ರಮಾಣಗಳನ್ನು ಕೊಡಬೇಕು. (4) ದೃಷ್ಟಾಂತ:- ಚರಿತ್ರೆಯ ಒಂದು ಸಂಗತಿಯನ್ನಾಗಲಿ, ಚಿಕ್ಕ ಕಥೆಯನ್ನಾಗಲಿ, ಗ್ರಂಥದಿಂದೆತ್ತಿದ ವಚನವನ್ನಾಗಲಿ, ಲೋಕೋಕ್ತಿಯ ನಾಗಲಿ ಸಂದರ್ಭಕ್ಕೆ ತಕ್ಕಂತೆ ಉದಾಹರಣೆಯಾಗಿ ತೆಗೆದುಕೊಳ್ಳಬೇಕು.
ಪುಟ:ಪ್ರಬಂಧಮಂಜರಿ.djvu/೫೩
ಗೋಚರ