ಪುಟ:ಪ್ರಬಂಧಮಂಜರಿ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಬಂಧ 14 (1) ಅತಿಸ್ನೇಹದ ಕೆಡಕು, (2) ಗುಣವೇ ಪೂಜ್ಯವಾದುದು, (3) ಉಪದೇಶವೂ ನಡೆವಳಿಯೂ ಒಂದಾಗಿರಬೇಕು. ಸ್ತ್ರೀಯರಿಗೆ ಸ್ವಾತಂತ್ರವನ್ನು ಕೊಡಬಹುದೆ?' (ವಿಧವಾವಿವಾಹ' (ಸ್ತ್ರೀ ವಿದ್ಯಾಭ್ಯಾಸ,' ಯಾವ ಸಂದರ್ಭದಲ್ಲಿಯಾದರೂ ಸುಳ್ಳಾಡಬಹುದೆ?' (ಸಮುದ್ರಯಾನ' ಇಂಥ ಚರ್ಚನೀಯಾಂಶಗಳೂ ಈ ತರದ ಪ್ರಬಂಧಕ್ಕೆ ಸೇರಿದುವು. ಇಂಥ ವಿಷಯಗಳನ್ನು ಕೊಟ್ಟರೆ, ಪ್ರಬಂಧದ ಮಧ್ಯಭಾಗದಲ್ಲಿ ಸಾಧಕವನ್ನೂ ಬಾಧಕವನ್ನೂ ಸಕಾರಣವಾಗಿ ತಿಳಿಸಬೇಕು. ಮೊದಲು ಸಾಧಕವನ್ನು ಒಂದು ವಾಕ್ಯವೃಂದದಲ್ಲಿಯೂ, ಬಾಧಕವನ್ನು ಇನ್ನೊಂದರಲ್ಲಿಯೂ ಹೇಳಿ, ಇವಕ್ಕೆ ಕಾರಣಗಳನ್ನು ಕ್ರಮವಾಗಿ ಮತ್ತೆರಡು ವಾಕ್ಯವೃಂದಗಳಲ್ಲಿ ಕೊಡಬಹುದು. ಅಥವಾ ಸಾಧಕ, ಅದಕ್ಕೆ ಕಾರಣ; ಆಮೇಲೆ ಬಾಧಕ, ಅದಕ್ಕೆ ಕಾರಣ, ಈ ಕ್ರಮವನ್ನಾದರೂ ಅನುಸರಿಸಬಹುದು, ಇವುಗಳಲ್ಲಿ ಮೊದಲನೆಯದೇ ಸಾಮಾನ್ಯವಾಗಿ ಒಳ್ಳೆಯದು: ಇದರಿಂದ ಪರಸ್ಪರ ತಾರತಮ್ಯವನ್ನು ಸ್ಪಷ್ಟ ಪಡಿಸಬಹುದು. ಅಂತ್ಯಭಾಗದಲ್ಲಿ ಪ್ರಬಂಧವು ತನ್ನಷ್ಟಕ್ಕೆ ತಾನೇ ಕೊನೆಗಾಣುವಂತಿರಬೇಕು. ಮೇಲೆ ಕಂಡ ಚರ್ಚನೀಯಾಂಶಗಳನ್ನು ಕೊಟ್ಟಾಗ ಹಿಂದೆ ಹೇಳಿದ್ದ ವಿಚಾರಗಳನ್ನೆಲ್ಲಾ ಮತ್ತೆ ಹೇಳಿ ಅದರಿಂದ ಸಿದ್ಧವಾದ ನಿಷ್ಕರ್ಷೆಯನ್ನು ತಿಳಿಸಬೇಕು. ಇನ್ನು ಕೆಲವು ಪ್ರಬಂಧಗಳಲ್ಲಿ ಸಾರಾಲಂಕಾರದಂತೆ ಅತಿ ಮುಖ್ಯವಾದ ವಿಷಯವನ್ನು ಕೊನೆಯ ವಾಕ್ಯವೃಂದದಲ್ಲಿ ಹೇಳಿದರೆ ಚೆನ್ನಾಗಿರುವುದು. ಶ್ರೇಷ್ಠವಾದ ಗ್ರಂಥದಿಂದೆತ್ತಿದ ಒಂದು ತಕ್ಕ ವಚನವನ್ನೂ ಪ್ರಬಂಧದ ಕೊನೆಯಲ್ಲಿ ಬರೆವುದುಂಟು. ಈ ವಿಮರ್ಶನರೂಪ ಪ್ರಬಂಧಕ್ಕೆ ಸೇರಿದ ಕೆಲವು ವಿಷಯಗಳ ಸಾರಾಂಶಗಳನ್ನು ಮಾದರಿಗಾಗಿ ಮುಂದೆ ಕೊಟ್ಟಿದೆ. ಮಿಕ್ಕ ವಿಷಯಗಳಿಗೂ ಹೀಗೆಯೇ ಪಟ್ಟಿಗಳನ್ನು ಮೊದಲು ನಿರ್ಮಿಸಿಕೊಳ್ಳುವುದು,