೪೦ ಪ್ರಬಂಧಮಂಜರಿ -ಮದುವೆಯ ಭಾಗ ಶಿ, ಮಾಂಸಭಕ್ಷಣ, ಮದ್ಯಪಾನ ಇವುಗಳಿಗೆ ಹೋಗದೆ ನಿತ್ಯಕಜ್ಜಿಯ ಆಹಾರವನ್ನ ತಗೆದುಕೊಳ್ಳುವ ಏರ್ಪಾಡು ಮಾಡಿಕೊಳ್ಳಬಹುದು, ಆಚಾರಭಾಗದು ಶಾಸ್ತ್ರಾರ್ಥವನ್ನು ಕಾಲಾನುಗುಣವಾಗಿ ಸಂಕಟಮಾಡಬೇಕು, ಈಗಿನ ರೈಲ್ ಪ್ರಯಾಣದಲ್ಲಿಯಂ, ಕರ್ಮಾಚರಣೆಯಲ್ಲಿ ಯ ಹೀಗೆ ನಡೆಯುತ್ತಿಲ್ಲವೆ ? ಅದಕ್ಕೆಲ್ಲ ದೊಡ್ಡ ವೈದಿಕರೇ ಸುಮ್ಮನಿಲ್ಲವೆ ? 3, ಕೆಲವು ನಿದರ್ಶನಗಳಿಂದ ಹಿಂದೂಗಳಲ್ಲಿ ಇದು ಪೂರ್ವದತ್ತ೧ದು ತೋರುವುದು, (e) ಈಗ ಹಿಂದೂಗಳಲ್ಲಿ ಸಮುದ್ರಯಾನ ಮಾಡಿಬಂದವರ ಪಾಡು, (f) ಮುಂದೆ ಹೇಗೆ ಪರಿಣಮಿಸಬಹುದು ? ಸೂಚನೆ:-ಕಲವು ಪ್ರಬಂಧಗಳಲ್ಲಿ ವಸ್ತು ವಣ೯ನವೂ ವೃತ್ತಾಂತ ಕಥನವೂ, ವ್ಯಶಾ೦ತ ಕಥನವೂ ವಿಮರ್ಶನವೂ, ವಸ್ತು ವರ್ಣನವೂ ವಿಮರ್ಶನವೂ ಈ ರೀತಿ ಯಥಾಸಂಭವವಾಗಿ ಕಲೆತಿರುವುವು. ಉದಾ,-, (೨) ಒಂದು ಪ್ರಯಾಣ, (೫) ಒಬ್ಬ ಪ್ರಸಿದ್ಧ ಪುರುಷನ ಜೀವನಚರಿತ, (3) ವಸಂತಕಾಲ, ವರ್ಷಾಕಾಲ. " ಮತ್ತು ಒಂದೇ ವಿಷಯವನ್ನು ಕುರಿತು ಬಗೆಬಗೆಯಾಗಿಯೂ ಬರೆಯಬಹುದು;- ರೈಲುಗಾಡಿ, ಕಟ್ಟಡ ಇವುಗಳನ್ನು ಕುರಿತು ಬರೆವಾಗ ಅವುಗಳ ಸ್ವರೂಪವನ್ನು ವಿವರಿಸುವುದು 4 ವಸ್ತು ವರ್ಣನ'ಕ್ಕೆ ಸೇರುವುದು, ಅಲ್ಲದೆ ಅವುಗಳ ಉಪಯೋಗಗಳನ್ನು ವರ್ಣಿಸಿ, ಲೇಖಕನ ಸ್ನಾಭಿಪ್ರಾಯಗಳನ್ನು ಬರವುದು 4 ವಿಮರ್ಶನ” ವಾಗುವುದು, ಯಾವ ರೀತಿಯಲ್ಲಿ ಪ್ರಬಂಧ ಬರೆಯಬೇಕೆಂಬುದನ್ನು ಸಂದರ್ಭದಿಂದ ಗೊತ್ತು ಮಾಡಿಕೊಳ್ಳಬೇಕು. ಪರೀಕ್ಷೆಯಲ್ಲಿ ಪ್ರಬಂಧವನ್ನು ಬರೆವಾಗ ಅನುಸರಿಸಿ ಬೇಕಾದ ವಿಶೇಷವಿಧಿಗಳು, (1) ಎರಡು ಮೂರು ವಿಷಯಗಳನ್ನು ಕೊಟ್ಟು, ಯಾವುದಾದರೂ ಒಂದನ್ನು ಕುರಿತು ಬರೆಯಬೇಕಾಗಿದ್ದರೆ, ಅವುಗಳಲ್ಲಿ ಯಾವುದು ವಿದ್ಯಾರ್ಥಿಗೆ ಅತಿಸುಲಭವಾಗಿ ತೋರುವುದೋ ಅದನ್ನು ಆರಿಸಿಕೊಳ್ಳಬಹುದು. ಅವುಗಳಲ್ಲಿ ಅತಿ ಕಠಿನವಾದುದನ್ನು ಕುರಿತು ಬರೆಯಲು ತಕ್ಕ ಶಕ್ತಿಯಿದ್ದರೆ ಅದನ್ನೇ ಆರಿಸಿಕೊಳ್ಳುವುದುತ್ತಮ. (2) ಆರಿಸಿಕೊಂಡ ವಿಷಯವನ್ನು ಕುರಿತು ಯೋಚಿಸಬೇಕೇ ಹೊರತು ಮಿಕ್ಕ ವಿಷಯಗಳನ್ನು ಆಲೋಚಿಸಬಾರದು. ಕ್ಸ್ ಪ್ರಕಾಲದ ಆರರ
ಪುಟ:ಪ್ರಬಂಧಮಂಜರಿ.djvu/೫೮
ಗೋಚರ