ಪುಟ:ಪ್ರಬಂಧಮಂಜರಿ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಬಂಧಮಂಜರಿ---ಎರಡನೆಯ ಭಾಗ, ಉಂಟು. ಹಸುವಿನಂತೆ ಮೆಲುಕು ಹಾಕುವುದಿಲ್ಲ. ಆಗಾಗ್ಗೆ ಸ್ವಲ್ಪ ಹುಲ್ಲನ್ನು ಅಗಿದೇ ನುಂಗುತ್ತದೆ. ಮೇಯುವಾಗ ಹುಲ್ಲನ್ನು ಕತ್ತರಿಸುತ್ತದೆ. ಹಸುವಿನಂತೆ ಕೀಳುವುದಿಲ್ಲ. ಕುದುರೆಯು ಒಂದು ವಿಜಾತೀಯವಾಗಿ ಗಂಭೀರ ವಾದ ದೀರ್ಘಧ್ವನಿಯನ್ನು ಮಾಡುತ್ತದೆ. ಇದನ್ನು ಕೆನೆಯುವುದನ್ನು ವರು, ಕುದುರೆಯ ಕಿವಿ, ಕಣ್ಣು, ಮೂಗುಗಳು ಬಹು ಸೂಕ್ಷ್ಮಗಳು. ಇದಕ್ಕೆ ಸ್ವಲ್ಪ ಸದ್ದಾದರೂ ಕೇಳಿಸುತ್ತದೆ. ಕತ್ತಲೆಯಲ್ಲಿ ಮನುಷ್ಯನಿಗೆ ಕಾಣದ ವಸ್ತು ಕುದುರೆಗೆ ಕಾಣುತ್ತದೆ. ಕುದುರೆಯು ಮೂಗಿನಿಂದಲೇ ಉಚ್ಚಾಸನಿಶ್ವಾಸಗಳನ್ನು ಮಾಡುತ್ತದೆ. ಇದು ಬಹಳ ಆಯಾಸಗೊಂಡಾಗ ಮೂಗಿನ ಸೊಳ್ಳೆಗಳು ಅಗಲವಾಗುವುವೇ ಹೊರತು ಬಾಯಿ ತೆರೆವುದಿಲ್ಲ. ಮತ್ತು ಆಗ ನೆಲದ ಮೇಲೆ ಸ್ವಲ್ಪ ಹೊತ್ತು ಉರುಳಾಡಿದೊಡನೆ ಇದರ ಆಯಾಸವೆಲ್ಲಾ ಪರಿಹಾರವಾಗುವುದು. ಕುದುರೆ ಹೊಸ ಪದಾರ್ಥವನ್ನು ಕಂಡರೂ, ಅವೂರ್ವವಾದ ಧ್ವನಿಯನ್ನು ಕೇಳಿದರೂ ಬೆದರುತ್ತದೆ. ಕಾಡುಕುದುರೆಗಳು ಸಾಮಾನ್ಯವಾಗಿ ಹಿಂಡು ಹಿಂಡಾಗಿರುವುವು. ಒಂದೊಂದು ಹಿಂಡಿಗೂ ಅನುಭವಶಾಲಿಯಾದ ಒಂದು ಗಂಡುಕುದುರೆ ನಾಯಕನಾಗಿರುವುದು, ಉಳಿದುವೆಲ್ಲಾ ಅದರ ಅಪ್ಪಣೆ ಮೂಾರಿ ನಡೆವುದಿಲ್ಲ. ಹುಲ್ಲು ನೀರು ಯಥೇಚ್ಛವಾಗಿರುವ ಸ್ಥಳಗಳಲ್ಲಿ ವಾಸಿಸುವುವು, ಕಾಡು ಕುದುರೆಯ ಆಹಾರವು ಹುಲ್ಲು ಮಾತ್ರ. ಸಾಕಿದ ಕುದುರೆಯು ಮುಲ್ಲಂಗಿ,ಮಸಾಲೆಸೊಪ್ಪು, ರೊಟ್ಟಿ, ಕಡಲೆ, ಹುರಳಿ, ಗೋಧಿ, ಹಿಂಡಿ ಮುಂತಾದುವನ್ನು ತಿನ್ನು ತ್ತದೆ. ಕುದುರೆಯನ್ನು ಬಹಳವಾಗಿ ಸವಾರಿಗೂ ಗಾಡಿಗಳನ್ನೆಳೆವುದಕ್ಕೂ ಉಪಯೋಗಿಸುವರು. ಇಂಗ್ಲೆಂಡ್ ಮೊದಲಾದ ಸೀಮೆಗಳಲ್ಲಿ ಇದರಿಂದ ಭೂಮಿಯನ್ನು ಉಳಿಸುತ್ತಾರೆ. ಸೈನ್ಯಕ್ಕೆ ಕುದುರೆಯು ಒಂದು ಮುಖ್ಯಾಂಗವಾಗಿದೆ. ಟಾರ್ಟರೀ ಜನರು ಇದರ ಮಾಂಸವನ್ನು ತಿನ್ನು ವರಲ್ಲದೆ, ಇದರ ಹಾಲನ್ನೂ ಹಳಸಿದ ಹಾಲಿನಿಂದ ಮಾಡಿದ ರಸವಿಶೇಷವನ್ನೂ ಕುಡಿವರು. ಕುದುರೆಯ ಚರ್ಮದಿಂದ ಜೋಡು, ಜೀನು ಮೊದಲಾದ ಪದಾರ್ಥಗಳಾಗುತ್ತವೆ, ಕೇಸರ, ಬಾಲದ ಕೂದಲು ಇವುಗಳನ್ನು ಮೆತ್ತೆಗಳಿಗೂ ಪಿಟೀಲಿನ ಕಮಾನಿಗೂ ಉಪಯೋಗಿಸುವರು, ಮೂಳೆಯಿಂದ ಕತ್ತಿಯಹಿಡಿಗಳನ್ನೂ,