೫೮ ಪ್ರಬಂಧಮಂಜರಿ-ಎರಡನೆಯ ಭಾಗ ಈ ಮರವು ತೆಂಗಿನಮರದಂತೆಯೇ ದುಂಡಗೆ ಅರುವತ್ತಡಿಯಿಂದ ನೂರಡಿಯವರೆಗೂ ಎತ್ತರವಾಗಿ ಬೆಳೆವುದು. ಇದರ ತಾಳು ಬೂದಿಬಣ್ಣ, ಸುತ್ತಳತೆ ಒಂದೂವರೆ ಅಡಿ ವರೆಗೆ ಉಂಟು. ಈ ಮರಕ್ಕೂ ಕೊಂಬೆಗಳಿಲ್ಲ. ತುದಿ. ಯಲ್ಲಿ ಎಲೆಗಳು ಎಲ್ಲಾ ಕಡೆಗೂ ಹರಡಿಕೊಂಡುಕೊಡೆಯಂತೆ ಕಾಣುತ್ತವೆ. ಎಲೆಯನ್ನು ಗರಿಯನ್ನು ವರು, ನಾಲ್ಕರಿಂದ ಆರಡಿಗಳ ಉದ್ದವಿರುವ ಈಗರಿಗಳ ನಡುವೆ ವರ್ಷಕ್ಕೆ ಮೂರು ಹೊಂಬಾಳೆಗಳು ಹೊರಡುವುವು. ಹೊ೦ಬಾಳೆ ಬಿರಿದ ಮೇಲೆ ಹೂಗಳು ಕಾಯಿಗೊಂಚಲುಗಳಾಗುತ್ತವೆ. ಒಂದೊಂದು' ಗೊಂಚಲಿನಲ್ಲಿ ಇಪ್ಪತ್ತರಿಂದ ಐವತ್ತರ ವರೆಗೆ ಕಾಯಿಗಳಿರುವುವು. ಕಾಯಿ ಮೊದಲು ಹಸುರಾಗಿದ್ದು ಬಲಿಯುತ ಬಲಿಯುತ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ಸುಮಾರು ನಿಂಬೇಕಾಯಿ ಗಾತ್ರಕ್ಕಿರುವುದು, ದಪ್ಪವಾಗಿಯೂ ನಾರಾಗಿಯೂ ಇರುವ ಇದರ ಸಿಪ್ಪೆಯನ್ನು ಸುಲಿದರೆ ಒಳಗೆ ಅಡಕೆ ಕಾಣುವುದು. ಅಡಕೆ ಗುಂಡಾಗಿ ಸುಮಾರು ದಪ್ಪಗಜ್ಜುಗದಷ್ಟು ಇರುವುದು ವರ್ಷಕ್ಕೆ ಒಂದು ಗಿಡದಲ್ಲಿ ಸುಮಾರು ಮುನ್ನೂರು ಕಾಯಿಗಳಾಗುತ್ತವೆ' ಅಡಕೆಯ ಗಿಡದಲ್ಲಿ ಚಿಕ್ಕ ಕಾಯಿಗಿಡದೊಡ್ಡ ಕಾಯಿಗಿಡ ಎಂಬ ಎರಡು ಜಾತಿಗಳುಂಟು, ಒಂದಡಿ ಆಳಕ್ಕೆ ಉದ್ದವಾಗಿ ಬಚ್ಚಲುಗಳನ್ನು ಅಗೆದು, ಅರ್ಧದ ವರೆಗೆ ಮರಳನ್ನು ತುಂಬಿ, ಅದರಮೇಲೆ ಬಲಿತ ಅಡಕೆಯ ಕಾಯಿಗಳನ್ನು ಸಾಲು ಸಾಲಾಗಿ ಒಂದರ ಹತ್ತಿರ ಮತ್ತೊಂದನ್ನಿಟ್ಟು, ಮರಳು ಕೊಳೆತ ಗೊಬ್ಬರ ಇವುಗಳಿಂದ ಮುಚ್ಚಬೇಕು. ಇದಕ್ಕೆ ಒಟ್ಟು ಎನ್ನುವರು. ನಾಲ್ಕು ತಿಂಗಳ ವರೆಗೆ ಮೂರು ದಿನಕ್ಕೊಂದಾವೃತ್ತಿ ನೀರು ಕಟ್ಟಬೇಕು. ತೋಟವನ್ನು ಚೆನ್ನಾಗಿ ಅಗೆದು ನಾಲ್ಕು ನಾಲ್ಕಡಿದೂರಕ್ಕೆ ಬಾಳೆಯ ಗಿಡಗಳನ್ನು ನೆರಳು ಕೊಡುವಂತೆ ಸಾಲಾಗಿ ಹಾಕತಕ್ಕದ್ದು. ಒಟ್ಟಲಿನ ಸಸಿಗಳು ನಾಟಿಹಾಕಲು ಸಿದ್ದವಾದೊಡನೆ ಎರಡೆರಡು ಬಾಳೆ ಗಿಡಗಳ ನಡುವೆ ಗುಣಿಗಳನ್ನು ಮಾಡಿ, ಗುಣಿಗೆ ಎರಡರಂತೆ ಸಸಿಗಳನ್ನು ನಡಬೇಕು. ವರ್ಷಕ್ಕೆರಡು ಸಾರಿ ತೋಟವನ್ನು ಅಗೆದು ಆಗಾಗ್ಗೆ ಕಳೆ ಕೀಳಬೇಕು. ಐದು ವರ್ಷಗಳಲ್ಲಿ ಗಿಡ . ಗಳು ಐದಡಿ ಎತ್ತರವಾಗಿ ಫಲ ಬಿಡಲಾರಂಭಿಸಿ, ಮೂವತ್ತು ನಾಲ್ವತ್ತು
ಪುಟ:ಪ್ರಬಂಧಮಂಜರಿ.djvu/೭೬
ಗೋಚರ