ಪುಟ:ಪ್ರಬಂಧಮಂಜರಿ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹುಣಸೆ ಮರ ಓ4 ಆಹಾರ, ಇದರಿಂದ ನಾರು ತೆಗೆದು, ಹೂ ಎಲೆ ಮುಂತಾದುವನ್ನು ಕಟ್ಟುತಾರೆ. ನಾರಿನಿಂದ ಹಗ್ಗವನ್ನೂ ಪಟ್ಟಿಯಿಂದ ಕಾಗದವನ್ನೂ ಮಾಡುವುದುಂಟು. ಹಿಂದೂಗಳು ಮದುವೆಯಲ್ಲಿಯೂ ಹಬ್ಬದಲ್ಲಿಯ ಬಾಳೆಯ ಕಂಬಗಳನ್ನು ಮನೆಯ ಬಾಗಲಿಗೂ ಚಪ್ಪರಕ್ಕೂ ಕಟ್ಟುತ್ತಾರೆ. ಬಾಳೆಕಾಯನ್ನು ಅಡಿಗೆಯಲ್ಲಿ ಅನೇಕ ಪದಾರ್ಥ ಮಾಡಲು ವಿಶೇಷವಾಗಿ ಉಪಯೋಗಿಸುವರು. ಹಣ್ಣು ತಿನ್ನಲು ಸಿಹಿಯಾಗಿಯೂ ಮೈಗೆ ಒಳ್ಳೆಯದಾಗಿಯೂ ಇರುವುದು. ಹಣ್ಣಿನ ಸಿಪ್ಪೆಯು ದನಗಳಿಗೆ ತಿಂಡಿ, ಗೆಡ್ಡೆಯ ರಸವು ಮೂತ್ರ ಕಟ್ಟಿದ್ದರೆ ಹೊರಡಿಸುತ್ತದೆ ದಿಂಡಿನ ರಸವು ರಕ್ತಭೇದಿಗೂ ವಾಂತಿಗೂ ಒಳ್ಳೆಯ ಔಷಧ, ಹೂವಿನ ರಸ ಮಕ್ಕಳ ಬಾಯಿಹುಣ್ಣಿಗೆ ಒಳ್ಳೆಯದು. ಬಂಗಾಳದಲ್ಲಿ ಎಲೆ ಮತ್ತು ಸಿಪ್ಪೆಗಳ ಬದಿಯಿಂದ ಎಣ್ಣ ವನ್ನು ತೆಗೆದು, ಮಲಯಾ ಪ್ರಾಂತದಲ್ಲಿ ಬಾಳೆಯ ಬೂದಿಯನ್ನು ಚೌಳಿಗೆ ಬದಲಾಗಿ ಉಪಯೋಗಿಸುವರು. 10. ಹುಣಸೆ ಮರ, ಹುಣಸೆಮರವು ದಕ್ಷಿಣ ಇಂಡಿಯಾದೇಶದಲ್ಲಿ ಹೇರಳವಾಗಿ ಬೆಳೆಯುವ ತದೆ. ಇದು ಸುಮಾರು ಐವತ್ತು ಅರುವತ್ತು ಅಡಿ ಎತ್ತರ ಆಗುತ್ತದೆ. ಇದರ ತಾಳಿನ ಸುತ್ತಳತೆ ಇಪ್ಪತ್ತಡಿವರೆಗೂ ಉಂಟು. ಹುಣಸೆಮರವು ಬಹಳ ಗಟ್ಟಿ. ಇದರ ಅನೇಕವಾದ ಕೊಂಬೆಗಳು ಒಳ್ಳೆಯ ನೆಳಲನ್ನು ಕೊಡುತ್ತವೆ. ಇದರ ಬೇರು ಬಹಳ ದೂರ ಎಲ್ಲಾ ಕಡೆಗೂ ವ್ಯಾಪಿಸುವುದು. ಎಲೆಗಳು ಬಲು ಸಣ್ಣ; ಚಿಗುರಾಗಿರುವಾಗ ಬೆಳ್ಳಗೂ, ಬಳಿಕ ಹಸುರಾಗಿಯೂ,ಬಲಿತ ಮೇಲೆ ಹಳದಿಯಾಗಿಯೂ ಪರಿಣಮಿಸುತ್ತವೆ. ಇದರ ಹೂಗಳೂ ಸಣ್ಣ, ಮತ್ತು ಮಾಸ:- ಬಿಳುಪು, ಹೂಗಳೂ ಕಾಯಿಗಳೂ ಗೊಂಚಲಾಗಿ ಬಿಡುತ್ತವೆ. ಹಸುರು ಮಿಶ್ರವಾದ ಬೂದುಬಣ್ಣವುಳ್ಳ ಕಾಯಿಗಳು ಹೆಚ್ಚಿನ ಗಾತ್ರಕ್ಕೆ ಸುಮಾರು ಚೋಟುದ್ದದವರೆಗೆ ಇರುತ್ತವೆ ಚರ್ಮದಂತೆ ಒಂದು ಪರೆಯು ಕಾಯನ್ನು ಸುತ್ತಿಕೊಂಡು ತಿರುಳೊಂದಿಗೆ ಅಂಟಿಕೊಂಡಿದೆ. ತಿರುಳು ಬಹಳ ಹುಳಿ, ಹಣ್ಣಾದಾಗ ಮೇಲಿನ ಪರೆ ತಿರುಳನ್ನು ಅಂಟದೆ ಸ್ವಲ್ಪ ಬಿಟ್ಟಿರುತ್ತದೆ. ಇದನ್ನು ತೆಗೆದರೆ ಕಪ್ಪು ಮಿಶ್ರವಾದ ಕೆಂಪು ಬಣ್ಣವುಳ್ಳ