ಪುಟ:ಪ್ರಬಂಧಮಂಜರಿ.djvu/೮೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೬೪ ಪ್ರಬಂಧಮಂಜರಿ-ಎರಡನೆಯ ಭಾಗ ತಿರುಳು ಒಳಗೆ ಕಾಣುವುದು. ಈ ತಿರುಳಿನ ಉದ್ದಕ್ಕೂ ನಾರು ಇರುವುದಲ್ಲದೆ ನಡುವೆ ಸ್ವಲ್ಪ ಸ್ವಲ್ಪ ದೂರಕ್ಕೆ ಒಂದೊಂದು ತಟ್ಟೆಯಾದ ಬೀಜವಿರುತ್ತದೆ. ಬೀಜವನ್ನು ಸುಲಿದರೆ ಬೆಳ್ಳಗಿರುವ ಎರಡು ಬೇಳೆಗಳು ಅಂಟಿಕೊಂಡಿರುತ್ತವೆ. * ಹುಣಸೆಮರವು ವ್ಯವಸಾಯವಿಲ್ಲದೆ ತಾನಾಗಿಯೇ ಬೆಳೆವುದುಂಟು. ಆದುದರಿಂದ ಇದರ ಬೆಳೆಗೆ ವಿಶೇಷ ಕಷ್ಟ ಪಡಬೇಕಾದುದಿಲ್ಲ ತೋಪುಗಳ ಲ್ಲಿಯೂ ರಸ್ತೆಯ ಪಕ್ಕಗಳಲ್ಲಿಯೂ ಇದನ್ನು ನಟ್ಟು ಬೆಳೆಸುವರು, ದೂರ ದೂರವಾಗಿ ಗುಂಡಿಗಳನ್ನು ಹೊಡೆದು ಸಸಿಗಳನ್ನು ನಟ್ಟು ಕೆಲವು ದಿನಗಳ ವರೆಗೆ ನೀರುಹಾಕಿ ನೋಡಿಕೊಂಡರೆ ಸಾಕು. ವರ್ಷಕ್ಕೊಂದುಸಾರಿ ಕಾಯಿಗಳು ಬಲಿತು ಹಣ್ಣಾಗುವುವು, ಹಣ್ಣುಗಳನ್ನು ಕೋಲುಗಳಿಂದ ಬಡಿದು ಉದಿರಿಸಿ, ಬಿಸಿಲಲ್ಲಿ ಒಣಗಿಸಿ, ತಿರುಳನ್ನು ಸಿಪ್ಪೆಯಿಂದ ವಿಂಗಡಿಸುವರು. ಬಳಿಕ ತಿರುಳನ್ನು ಜಜ್ಜಿ ಬೀಜವನ್ನೂ ನಾರನ್ನೂ ತೆಗೆದುಹಾಕಿ ಹಣ್ಣನ್ನು ಉಪಯೋಗಿಸುವರು. ಕಾಯನ್ನು ಇಡಿದು ಅದಕ್ಕೆ ಉಪ್ಪು ಹಸಿಮೆಣಸಿನ ಕಾಯಿಗಳನ್ನು ಸೇರಿಸಿ ತೊನ್ನು ಮಾಡುವರು. ಹಣ್ಣನ್ನು ಸಾರು, ಹುಳಿ ಮೊದಲಾದ ಪದಾರ್ಥಗಳಿಗೆ ಪ್ರತಿದಿನವೂ ಹಾಕುತ್ತಾರೆ ಚಿಗುರು ಹೂಗಳು ತಂಪು ಕೊಡುತ್ತವೆಯಾದುದರಿಂದ ಇವುಗಳನ್ನು ಒಣಗಿಸಿ ಪುಡಿಮಾಡಿ ಉಪ್ಪು ಕಾರಗಳನ್ನು ಸೇರಿಸಿ, ಅನ್ನಕ್ಕೆ ಕಲೆಸಿಕೊಳ್ಳುವರು. ಎಲೆ ಹೂಗಳು ಪಿತ್ತಹರ; ಇವುಗಳಿಂದ ಪಲ್ಯ ಮುಂತಾದುವನ್ನು ಮಾಡುವುದುಂಟು. ಎಲೆ ಬೀಜಗಳ ಕಷಾಯವು ಆಮಶಂಕೆಗೂ ವ್ರಣಗಳಿಗೂ ಮದ್ದು .ಎಲೆಗಳು ಕಷಾಯದ ಆವಿಗೆ ಕಣ್ಣು ಹಿಡಿದರೆ ಕಣ್ಣು ನೋವು ವಾಸಿಯಾಗುವುದು. ಎಲೆಗಳಿಂದ ಒಂದು ಬಗೆಯ ಬಣ್ಣವನ್ನು ತೆಗೆವುದುಂಟು ಬೀಜದಿಂದ ಒಂದು ಅಂಟನ್ನು ಮಾಡುವರು ಕೆಲವುಕಡೆ ಬೀಜವನ್ನು ಹುರಿದು ತಿನ್ನುವುದುಂಟು. ಹುಣಸಮರವು ಗಟ್ಟಿಯಾದುದರಿಂದ, ಕೊಡತಿ ಒನಕೆ ಮುಂತಾದುದನ್ನು ಇದರಿಂದ ಮಾಡುವರು. ಈ ಮರದ ಸೌದೆ ಬಹಳ ಒಳ್ಳೆಯದು ಹೆಚ್ಚಾಗಿ ಕಾವು ಕೊಡುತ್ತದೆ. ಹುಣಸೆ ತೊಗಟೆ ಔಷಧಕ್ಕೆ ಬರುತ್ತದೆ. ಇದರ ರಸವು ತಾಮ್ರ, ಹಿತ್ತಾಳೆಗಳಲ್ಲಿರುವ ಕೊಳೆಯನ್ನು ಹೋಗಲಾಡಿಸುವುದು.