ಪುಟ:ಪ್ರಬಂಧಮಂಜರಿ.djvu/೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಕಬ್ಬಿಣ ಬೇಕು, ಯಂತ್ರಗಳ ಸೆಲೆಯೇ ನಮ್ಮವರಿಗೆ ತಿಳಿಯದಷ್ಟೆ! ಇದಲ್ಲದೆ, ಹಿಂದೂದೇಶದಲ್ಲಿ ಕಬ್ಬಿಣದ ಅದುರು ದೊರೆತ ಸ್ಥಳದಲ್ಲಿ ಒಳ್ಳೆಯ ಕಲ್ಲಿದ್ದಲು ದೊರೆವುದಿಲ್ಲ. ಒಳ್ಳೆಯ ಕಲ್ಲಿದ್ದಲಿರುವ ಕಡೆ ಕಬ್ಬಿಣದ ಅದುರು ಇರುವುದಿಲ್ಲ. ಕಲ್ಲಿದ್ದಲನ್ನು ಬಿಟ್ಟು ಸೌದೆಯ ಇದ್ದಲನ್ನು ಬಳಸಿದರೆ ವಿಶೇಷ ನಷ್ಟವಾಗುವ ವುದು, ಮತ್ತು ದೊಡ್ಡ ಕಬ್ಬಿಣದ ಕಾರ್ಖಾನೆಗಳಿಗೆ ಸಾಕಾಗುವಷ್ಟು ಕಲ್ಲಿದಲನ್ನು ಹೊಂದಿಸುವುದಸಾಧ್ಯ. - ಎರಕದ ಕಬ್ಬಿಣವು ಬಲು ಪೆಡಸು, ಸುಲಭವಾಗಿ ಕರಗುವುದು. ನಾಡುಕಬ್ಬಿಣವನ್ನು ಕರಗಿಸುವುದು, ಪ್ರಯಾಸವು: ಆದರೆ ಎರಕದ ಕಬ್ಬಿಣದ ಹಾಗೆ ಪೆಡಸಲ್ಲ. ಆದುದರಿಂದ ನಾಡುಕಬ್ಬಿಣವನ್ನು ಸುತ್ತಿಗೆಯಿಂದ ಸಾಗಬಡಿಯ ಬಹುದು. ಕಬ್ಬಿಣವು ಭಾರವುಳ್ಳದಾಗಿಯೂ, ನೀಲಚ್ಛಾಯೆಯಿಂದಕೂಡಿ ಎಳೆಯಬೂದು ಮಿಶ್ರವಾದ ಬಿಳಿಯ ಬಣ್ಣವಳುದಾಗಿಯೂ ಇರುವ ಲೋಹವು ಪಾರದರ್ಶಕವಲ್ಲ. ಮೃದುವಾಗಿ ತಂತಿಯೆಳೆಯಲನುಕೂಲವಾಗಿದೆ. ಬಹಳ ಜಿಗವಾದುದು. ಕರಗುವುದಕ್ಕೆ ಬಲುಹೊತ್ತು ಬೇಕು. ಇದಕ್ಕೆ ತೇವ ತಗುಲಿದರೆ ತುಕ್ಕು ಹಿಡಿಯುತ್ತದೆ. ಕಬ್ಬಿಣದಿಂದಾದ ಉಕ್ಕು ಬಹಳ ಗಟ್ಟಿ, ಇದನ್ನು ವಜ್ರದಷ್ಟು ಗಟ್ಟಿಯಾಗಿ ಬೇಕಾದರೂ ಮಾಡಬಹುದು. ಬೇಕಾದಷ್ಟು ಬಗ್ಗು ವಂತೆ ಮೆದುವಾಗಿಯಾದರೂ ಮಾಡಬಹುದು, ಇದನ್ನು ಕೂದಲಷ್ಟು ಸಣ್ಣದಾದ ತಂತಿಯಾಗಿ ಎಳೆಯಬಹುದು. ಲೋಕಕ್ಕೆ ಕಬ್ಬಿಣದಿಂದಾಗುವಷ್ಟು ಪ್ರಯೋಜನವು ಮತ್ಯಾವಲೋಹದಿಂದಲೂ ಆಗುವುದಿಲ್ಲ. ಉಕ್ಕೂ ಕಬ್ಬಿಣದಿಂದಲೇ ಆಗುವುದರಿಂದ ಇವೆರಡರಿಂದಾಗತಕ್ಕ ಪದಾರ್ಥಗಳಿಗೆ ಕೊನೆ ಮೊದಲಿಲ್ಲ. ಕಬ್ಬಿಣಕ್ಕೆ ಕರೀದಿ ಕ. ಡಮೆ; ಆದರೆ ಅದರಿಂದಾಗುವ ಪ್ರಯೋಜನಗಳಿಗೆ ಪಾರವಿಲ್ಲ.ಎರಕದ ಕಬ್ಬಿಣದಿಂದ ಹಲವು ಬಗೆಯ ಯಂತ್ರಗಳನ್ನೂ , ಯಂತ್ರಗಳ ಚಕ್ರಗಳನ್ನೂ, ದೊಡ್ಡ ದೊಡ್ಡ ಕೊಳವೆಗಳನ್ನೂ , ಮನೆ ಮತ್ತು ಸೇತುಗಳಿಗೆ ಉಪಯೋಗಿಸತಕ್ಕ ಗರ್ಡರ್ ಎಂಬ ತೊಲೆಗಳನ್ನೂ ಕಂಬಗಳನ್ನೂ ಮಾಡುತ್ತಾರೆ. ಎಲ್ಲರ ಮನೆಗಳಲ್ಲಿಯೂ ಬಳಸಿಕೊಳ್ಳುವ ಕಬ್ಬಿಣದ ಒಲೆ, ಬೀಗ, ಬೀಗದ ಕೈ, ಸಾಟು, ಕಾವಲಿ, ಬಾಣಲಿ, ಅಗುಳಿ, ಕೊಡಲಿ, ಮುಂತಾದುವೂ;