ಪುಟ:ಪ್ರಬಂಧಮಂಜರಿ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ಪ್ರಬಂಧಮಂಜರಿ-ಎರಡನೆಯ ಭಂಗ, ವ್ಯವಸಾಯಕ್ಕಾವಶ್ಯಕವಾದ ನೇಗಲು, ಪಿಕಾಸಿ, ಗುದ್ದಲಿಮೊದಲಾದುವೂ; ಯುದ್ಧಗಳಲ್ಲಿ ಬೇಕಾದ ಫಿರಂಗಿ, ಗುಂಡುಗಳೂ; ಕೈಗಾರಿಕೆಗೆ ಬೇಕಾಗುವ ಸುತ್ತಿಗೆ, ಮೊಳೆ ಮುಂತಾದುವೂ ನಾಡುಕಬ್ಬಿಣದಿಂದ ತಯಾರಾಗುತ್ತವೆ. ಹಡಗು, ಹೊಗೆಗಾಡಿ, ವರ್ತಮಾನ ಕೊಡುವ ತಂತಿ, ಬೇಲಿಯ ತಂತಿ ಇವುಗಳನ್ನು ಮಾಡುವುದಕ್ಕೂ ನಾಡುಕಬ್ಬಿಣವನ್ನು ಹೇರಳವಾಗಿ ಬಳಸುವರು. ಉಕ್ಕಿನಿಂದ ಚೂರಿ, ಕತ್ತರಿ, ಕತ್ತಿ,ಗರಗಸ, ಅರ, ಉಳಿ ಮೊದಲಾದ ಹರಿತ. ವಾದ ಸಾಮಾನುಗಳಾಗುವುವಲ್ಲದೆ, ದೊಡ್ಡ ದೊಡ್ಡ ಸೇತುಗಳನ್ನೂ ಬರೀ ಉಕ್ಕಿನಿಂದಲೇ ಮಾಡುವರು. ಉಕ್ಕಿನ ತಂತಿಗಳಿಂದ ಪೂಜೆಗಳಾಗುವುವು. * ಕಬ್ಬಿಣದಷ್ಟು ಚಿನ್ನ, ಬೆಳ್ಳಿ, ಇವು ಪ್ರಯೋಜನಕ್ಕೆ ಬರುವುದಿಲ್ಲ; ಚಿನ್ನ ಬೆಳ್ಳಿಗಳಿಲ್ಲದೆ ನಾವು ಜೀವಿಸಬಲ್ಲೆವು, ಕಬ್ಬಿಣವಿಲ್ಲದೆ ಬದುಕುವುದು ಕಷ್ಟ. ಆದರೂ ಚಿನ್ನ ಬೆಳ್ಳಿಗಳಿಗೆ ಮಾತ್ರ ಬಹಳ ಬೆಲೆ, ಕಬ್ಬಿಣ ಬಲುಕಡಮೆ ಬೆಲೆಬಾಳುವುದು. ಈ ಭೇದಕ್ಕೆ ಕಾರಣವೇನು? ಚಿನ್ನ ಬೆಳ್ಳಿಗಳು ಲೋಕದಲ್ಲಿರುವ ವುದೇ ಕಡಮೆ, ಅವುಗಳನ್ನು ಪಡೆವುದೂ ಬಹಳ ತೊಂದರೆ; ಕಬ್ಬಿಣವು ಲೋಕದಲ್ಲಿ ಹೇರಳವಾಗಿ ದೊರೆವುದು, ಇದನ್ನು ಪಡೆವುದೂ ಅಷ್ಟು ತೊಂದರೆ ಕೊಡುವುದಿಲ್ಲ. 14, ತಾಮ್ರ, ತಾವು ಲೋಹರೂಪವಾಗಿ ಬೆಣಚುಕಲ್ಲಿನ ಬಂಡೆಗಳಲ್ಲಿ ದೊರೆವುದು. ಇದು ಅವುಗಳಲ್ಲಿಮರದ ರೆಂಬೆಯಂತೆ ಹರಡಿಕೊಂಡಿರುವುದು. ಇದುದೊಡ್ಡ ದೊಡ್ಡ ಗಟ್ಟಿಗಳ ರೂಪದಲ್ಲಿಯೂ ಸಿಕ್ಕುವುದುಂಟು. ಆದರೆ ಗಂಧಕ, ಕಬ್ಬಿಣ ಮೊದಲಾದುವುಗಳೊಡನೆ ಬೆರೆದ ಅದುರಾಗಿಯೇ ವಿಶೇಷ ದೊರೆವದು. ಉತ್ತರ ಅಮೆರಿಕಾ ಸೈಬೀರಿಯಾ ಕಾಶ್ಮೀರದೇಶಗಳಲ್ಲಿ ತಾವು ಲೋಹರೂಪದಲ್ಲಿ ಸಿಕ್ಕುವುದು. ಇಂಡಿಯಾದಲ್ಲಿ ತಾಮ್ರವು ಮುಖ್ಯವಾಗಿ ಗಂಧಕದೊಡಗೂಡಿದ ಅದುರಾಗಿಯೇ ಕಡಪ, ಕರ್ನೂಲು, ಬಳ್ಳಾರಿ, ಚೋಟಾನಾಗಪುರ ಮಧ್ಯ ಪ್ರಾಂತ್ಯದ ನರಸಿಂಗಪುರ, ರಾಜವಟಾನ ಈ ಸ್ಥಳಗಳಲ್ಲಿ ಸಿಕ್ಕುವುದು. ಇವುಗಳ ಹಲವೆಡೆಗಳಲ್ಲಿ ಪುರಾತನಕಾಲದ ತಾಮ್ರದ ಗಣಿಗಳೂ, ತಾಮ್ರವನ್ನು ಮಾಡುತ್ತಿದ್ದ ಗುರುತುಗಳೂ ಕಂಡು ಬಂದಿವೆ.