ಪುಟ:ಪ್ರಬಂಧಮಂಜರಿ.djvu/೮೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ತಾಮ್ರ. ೭೧ ತಾಮ್ರದ ಅದುರನ್ನು ಅಗೆದು ತಂದು ಸಣ್ಣ ಸಣ್ಣಗೆ ಒಡೆದು ನೀರಿನಲ್ಲಿ ಅನೇಕಾವೃತ್ತಿ ಜಾಲಿಸಿ ದೊಡ್ಡ ಕುಲಿಮೆಯಲ್ಲಿ ಹಾಕಿ ಸುಡುತ್ತಾರೆ. ಬಳಿಕ ಈ ಸುಟ್ಟ ಅದುರನ್ನು ಬೇರೆ ಕುಲಿಮೆಯಲ್ಲಿ ಕರಗಿಸುವರು. ಹೀಗೆ ಬಹಳ ಸಾರಿ ಮಾಡುವುದರಿಂದ ಕಲ್ಮಷಗಳೆಲ್ಲಾ ಬೇರ್ಪಟ್ಟು ಮೇಲೆ ತೇಲುತ್ತವೆ. ತಾಮ್ರವು ಕುಲಿಮೆಯ ತಳದಿಂದ ಹರಿದು ನೆಲದಲ್ಲಿ ಮಾಡಿರುವ ಪಾತೆಗಳಿಗೆ ಬಂದು ಸೇರಿ ಗಟ್ಟಿಯಾಗುತ್ತದೆ, ಇದನ್ನು ಮತ್ತೆ ಕರಗಿಸಿ ಶುದ್ಧ ಮಾಡುವರು. ಲೋಹಗಳಲ್ಲೆಲ್ಲಾ ಕೆಂಬಣ್ಣವುಳ್ಳದ್ದು ತಾಮ್ರವೊಂದೆ. ಇದು ಕಬ್ಬಿಣಕ್ಕಿಂತ ಭಾರದಲ್ಲಿಯೂ ಮೆದುವಿನಲ್ಲಿಯೂ ಹೆಚ್ಚು, ತಾಮ್ರವನ್ನು ಕರಗಿಸಲು ಕಬ್ಬಿಣದಷ್ಟು ಕಾವು ಬೇಡ, ಇದನ್ನು ಬಹಳ ಸುಲಭವಾಗಿ ತಗಡು ಬಡಿಯಬಹುದು ; ಸಣ್ಣ ತಂತಿಯಾಗಿಯೂ ಎಳೆಯಬಹುದು. ತೇವವಾದ ಸ್ಥಳದಲ್ಲಿಟ್ಟರೆ ಇದು ಮಾಸಿ ಕಿಲುಬು ಹಿಡಿಯುತ್ತದೆ. ಈ ಕಿಲುಬು ಹಸುರಾದ ಒಂದು ವಿಷವಾಗಿದೆ. ತಾಮ್ರವು ಜಿಗಟಾಗಿರುವುದಲ್ಲದೆ ಬಡಿದರೆ ಧ್ವನಿ ಕೊಡುತ್ತದೆ. ಇದನ್ನು ಬಿಸಿ ಮಾಡಿದರೂ ಉಜ್ಜಿದರೂ ಒಂದು ತರದ ವಾಸನೆ ತೋರುವುದು, ಬಾಯಿಗೆ ಹಾಕಿಕೊಂಡರೆ ಓಕರಿಕೆಬರುವ ಹಾಗಾ. ಗುವುದು, ತಾಮ್ರವು ಕಾಯಿಸಿದರೆ ಕರಗುವುದಾದರೂ ಎರಕದ ಕೆಲಸಕ್ಕೆ ಬರುವುದಿಲ್ಲ; ಏಕೆಂದರೆ ಕರಗಿದ ತಾಮ್ರವು ಆರಿ ಗಟ್ಟಿಯಾಗುವಾಗ ಕಿರಿದಾಗುವುದು. ತಾಮ್ರದ ಕೆಲಸವೆಲ್ಲಾ ಸುತ್ತಿಗೆಯಿಂದಲೇ ನಡೆಯುವುದು, ಮನುಷ್ಯನಿಗೆ ವಿಶೇಷ ಪ್ರಯೋಜನಕರವಾದ ಲೋಹಗಳಲ್ಲಿ ತಾಮ್ರವು ಕಬ್ಬಿಣಕ್ಕೆ ಎರಡನೆಯದು. ಇದರಿಂದ ತಪ್ಪಲೆ, ಹಂಡೆ, ಕೊಡ, ಚೆಂಬುಮೊದಲಾದ ಪಾತ್ರೆಗಳನ್ನೂ, ನಾಣ್ಯ ಗಳನ್ನೂ, ಟಪ್ಪಾಲಿಗೂ ವಿದ್ಯುಚ್ಛಕ್ತಿಗೂ ಬೇಕಾದ ತಂತಿಗಳನ್ನೂ ಮಾಡುತ್ತಾರೆ ಅಚ್ಚು ಹಾಕಬೇಕಾದಚಿತ್ರಗಳನ್ನೂ ಅಕ್ಷರಗಳನ್ನೂ ಕೆತ್ತುವುದಕ್ಕೆ ತಗಡನ್ನು ಉಪಯೋಗಿಸುವರು. ನಮ್ಮ ದೇಶದಲ್ಲಿ ತಾಮ್ರದ ತಗಡಿನ ಮೇಲೆ ಯಂತ್ರಗಳನ್ನು ಬರೆವ ವಾಡಿಕೆಯಿದೆ. ಹಡಗಿನ ತಳಕ್ಕೂ ಪಕ್ಕಗಳಿಗೂ ತಾಮ್ರದ ತಗಡುಗಳನ್ನು ಬಡಿವರು. ಚಿನ್ನ ಬೆಳ್ಳಿಗಳ ನಾಣ್ಯಗಳು ಗಟ್ಟಿಯಾಗಿರುವುದಕ್ಕಾಗಿ ಅವನ್ನು ಮಾಡುವಾಗ ಸ್ವಲ್ಪ ತಾಮ್ರ ಬೆರೆಸುತ್ತಾರೆ. ಬಣ್ಣ ಹಾಕುವುದರಲ್ಲಿ ಈ ಲೋಹವು ಉತ್ತ