ಪುಟ:ಪ್ರಬಂಧಮಂಜರಿ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬ ಪ್ರಬಂಧಮಂಜರಿ-ಎರಡನೆಯ ಭಾಗ ದಿಂದ ಸ್ಥಳಕ್ಕೆ ಭೂಮಿಯಮೇಲೆ ಕಲ್ಲಿದ್ದಲನ್ನು ಸಾಗಿಸುವ ವೆಚ್ಚವು ಸಮುದ್ರದ ಮೇಲೆ ಸಾಗಿಸುವ ವೆಚ್ಚಕ್ಕಿಂತ ಹೆಚ್ಚಾಗುವುದರಿಂದಲೂ ಈ ದೇಶಕ್ಕೆ ಅನ್ಯದೇಶಗಳಿಂದಲೇ ಕಲ್ಲಿದ್ದಲು ವಿಶೇಷವಾಗಿ ಬರುತ್ತಿದೆ, * ಕಲ್ಲಿದ್ದಲನ್ನು ಗಣಿಗಳಿಂದ ಎತ್ತುತ್ತಾರೆ. ಮೊಟ್ಟಮೊದಲು ಕಬ್ಬಿಣದ ಕೊಳವೆಗಳಿಂದ ಭೂಮಿಯನ್ನು ಕೊರೆದು ಎಷ್ಟು ಆಳದಲ್ಲಿ ಕಲ್ಲಿದ್ದಲು ಸಿಕ್ಕುವುದೆಂದು ನಿಶ್ಚಯಿಸುವರು. ಬಳಿಕ ಐದಡಿಯಿಂದ ಹತ್ತಡಿ ಅಳತೆಯುಳ್ಳ ಗುಂಡಾದ ಒಂದು ಹಳ್ಳವನ್ನು ಆಳವಾಗಿ ತೊಡುವರು. ಆ ಹಳ್ಳದಲ್ಲಿ ಕಲ್ಲಿದ್ದಲು ಸಿಕ್ಕುತ್ತಲೆ ಆ ಕಲ್ಲಿದ್ದಲಲ್ಲಿ ಉದ್ದವಾದ ಓಣಿಗಳನ್ನು ಆ ಹಳ್ಳದ ಎಡಕ್ಕೂ ಬಲಕ್ಕೂ ಮಾಡುವರು. ಈ ಓಣಿಗಳಿಗೆ ಅಡ್ಡಲಾಗಿ ಅನೇಕ ಸಣ್ಣ ಓಣಿಗಳನ್ನೂ ಅವಕ್ಕೆ ಅಡ್ಡಲಾಗಿ ಮತ್ತೆ ಬೇರೆ ಓಣಿಗಳನ್ನೂ ಕಲ್ಲಿದ್ದಲಿನಲ್ಲಿಯೇ ತೋಡುವರು, ಒಂದೇ ಸಲ ಒಟ್ಟಿಗೆ ದೊಡ್ಡ ಗಟ್ಟಿಗಳನ್ನು ಸುರಂಗಹಾಕಿ ಎಬ್ಬಿಸುವುದೂ ಉಂಟು. ಗಣಿಯೊಳಗೆ ಕೆಲಸಮಾಡುವ ಜನರ ಶ್ವಾಸೋಟ್ಯಾಸಗಳಿಗಾಗಿ ಇನ್ನೆರಡು ಹಳ್ಳಗಳನ್ನು ಭೂಮಿಯಮೇಲಿಂದ ಕೊರೆಯು ವರು. ಸಿಕ್ಕಿದ ಕಲ್ಲಿದ್ದ ಹಿನ್ನೆಲ್ಲಾ ಕಬ್ಬಿಣದ ಭಾಟೆಗಳ ಮೇಲೆ ಗಾಡಿಗಳಲ್ಲಿ ಗಣಿಯ ಬಾಯಿಗೆ ಸಾಗಿಸಿ ಬಲವಾದ ಯಂತ್ರಗಳ ಸಹಾಯದಿಂದ ಅದನ್ನು ಭೂಮಿಯ ಮೇಲಕ್ಕೆ ತಳ್ಳುವರು. * ಕಲ್ಲಿದ್ದಲು ಕರಿದಾಗಿಯೂ ಗಟ್ಟಿಯಾಗಿಯೂ ಮಿಂಚುತ್ತಲೂ ಇರುವುದು, ಇದು ಪಾರದರ್ಶಕವಲ್ಲ. ಕೆಳಗಡೆ ಎತ್ತಿ ಹಾಕಿದರೆ ನೂರುಚೂರಾಗಿ ಮುರಿದುಹೋಗುವುದು, ಬೆಂಕಿಗೆ ಹಿಡಿದರೆ ಹತ್ತಿಕೊಂಡು ಉರಿವುದು. ಕಲ್ಲಿದ್ದಲು ಬಳಕೆಯ ಸೌದೆಗಿಂತ ಹೆಚ್ಚು ಕಾವನ್ನು ಕೊಡುತ್ತದೆ. * ಕಲ್ಲಿದ್ದಲಿಂದ ಬಹಳ ಪ್ರಯೋಜನಗಳುಂಟು. ಚಳಿ ಸೀಮೆಗಳಲ್ಲಿ ಸೌದೆಗೆ ಬದಲು ಕಲ್ಲಿದ್ದಲನ್ನೆ ಉರಿಸುವರು. ಕಲ್ಲಿದ್ದಲಿಂದಾಗುವ ಒಂದು ಬಗೆಯ ವಾಯು ಉರಿವುದರಿಂದ, ಇದನ್ನು ಇಂಗ್ಲೆಂಡ್ ಮೊದಲಾದ ದೇಶಗಳಲ್ಲಿ. ಯೂ ಮುಖ್ಯಮುಖ್ಯ ಪಟ್ಟಣಗಳಲ್ಲಿಯೂದೀಪವಾಗಿ ಉರಿಸುವರು. ಹೊಗೆಬಂಡಿ, ಹೊಗೆಹಡಗುಗಳು ಸಂಚರಿಸುವುದಕ್ಕೆ ಕಲ್ಲಿದ್ದಲು ಅತ್ಯಾವಶ್ಯಕವು. ಕೈಗಾರಿಕೆಯ ಕಾರ್ಖಾನೆಗಳಲ್ಲಿಯೂ ಬಗೆಬಗೆಯ ಹೊಗೆಯಂತ್ರಗಳು