ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಲಾಸ್ವರೂಪ ಮತ್ತು ಅಭಿವ್ಯಕ್ತಿವಿಧಾನ

ಯಾವುದೇ ಒಂದು ಕಲಾಮಾಧ್ಯಮದಲ್ಲಿ ಅಭಿವ್ಯಕ್ತವಾದ ವಸ್ತು, ಅದನ್ನು ಪ್ರದರ್ಶಿಸಿರುವ ಕ್ರಮ, ಅನುಸರಿಸಿರುವ ತಂತ್ರ, ಪ್ರದರ್ಶನ ಎಷ್ಟು ಸಫಲವಾಯಿತು ಎಂಬ ವಿಷಯ, ಹೇಗೆ ಇರಬೇಕು ಎಂಬ ಪ್ರಶ್ನೆ- ಇವುಗಳನ್ನು ಚರ್ಚಿಸುವಾಗ, ಎರಡು ನೆಲೆಗಳಲ್ಲಿ ನೋಡಬೇಕಾಗುತ್ತದೆ. ಒಂದು, ಸಾಮಾನ್ಯವಾಗಿ ಎಲ್ಲ ಕಲೆಗಳಿಗೆ, ಸಾಹಿತ್ಯಕ್ಕೆ ಅನ್ವಯವಾಗುವ ನೆಲೆಯಲ್ಲಿ ಔಚಿತ್ಯ, ಭಾವ, ಅಭಿವ್ಯಕ್ತಿ ಮೊದಲಾದ ವಿಚಾರಗಳು, ಎರಡನೆಯದಾಗಿ, ಆರಿಸಿಕೊಂಡ ವಿಶಿಷ್ಟ ಮಾಧ್ಯಮದ ನೆಲೆಯಲ್ಲಿನ ವಿವೇಚನೆ. ಅಂದರೆ, ಓರ್ವ ಕಲಾವಿದ ಅಥವಾ ಒಂದು ಕಲಾತಂಡ, ಈ ಕಲೆಯ ನೆಲೆ ಯಲ್ಲಿ, ಹೇಗೆ ಪ್ರದರ್ಶಿಸಿದ್ದಾರೆ, ಏನು ಆಗಿದೆ, ಏನು ಆಗಿಲ್ಲ, ಏನು ಆಗಬಹುದಿತ್ತು ಇತ್ಯಾದಿ. ಯಕ್ಷಗಾನದಂತಹ ಚೌಕಟ್ಟಿಗೆ ಒಳಪಟ್ಟ, ಖಚಿತವಾದ ಪ್ರತ್ಯೇಕತೆ ಮಾಧ್ಯಮದಲ್ಲಿ ಇವೆರಡೂ ನೆಲೆಗಳು ಸಮಾನ ಮಹತ್ತ್ವ ಪಡೆಯುತ್ತವೆ. ಅಥವಾ, ಒಂದಷ್ಟು ಮುಂದೆ ಹೋಗಿ ಹೇಳುವುದಾದರೆ, ಯಕ್ಷಗಾನದ ಸಂದರ್ಭದಲ್ಲಿ ರಂಗಸ್ವರೂಪದ ನೆಲೆ ಪ್ರಥಮ ಪ್ರಾಶಸ್ತ್ರಗಳಿಸುತ್ತದೆ. ಅಂದರೆ, ಒಬ್ಬ ಕಲಾವಿದನ ಅಭಿವ್ಯಕ್ತಿಯು 'ಚೆನ್ನಾಗಿತ್ತು,' ಅಥವಾ 'ಚೆನ್ನಾಗಿರಲಿಲ್ಲ' ಎಂದು ನಾವು ಹೇಳುವಾಗ, ಅವನ ಗ್ರಹಿಕೆಯನ್ನು, ಪ್ರತಿಭೆಯನ್ನೂ, ಚುರುಕುತನ ವನ್ನೂ ಮಾತ್ರ ಎಣಿಸದೆ, ಈ ಕಲಾ ಮಾಧ್ಯಮದ ಆವಶ್ಯಕ ಮೂಲ ನಿಯಮಗಳನ್ನು ಆತನು ಪೂರೈಸಿದ್ದಾನೆಯೆ ಎಂಬ ಪ್ರಶ್ನೆಯೊಂದಿಗೇ ವಿವೇಚಿಸಬೇಕಾಗುತ್ತದೆ. ಅಭಿನಯವಾಗಲಿ, ವಸ್ತುವಿನ ಹೊಸತನವಾಗಲಿ, ಈ ದೃಷ್ಟಿಯಿಂದ ವಿಮರ್ಶೆಗೆ ಒಳಗಾಗಬೇಕು.

ಅಭಿನಯದ ವ್ಯಾಪ್ತಿ

ಅಭಿನಯವೆಂಬುದಕ್ಕೆ ಸದ್ಯ ನಾವು ಹಾವಭಾವ, ಏಕ್ಕನ್, ಏಕ್ಸಿಂಗ್ ಮತ್ತು ಮುದ್ರೆಗಳು ಎಂಬ ಸೀಮಿತ ಅರ್ಥಗಳನ್ನು ಕಲ್ಪಿಸುತ್ತೇವೆ. ಆದರೆ, ಅಭಿನಯ ವೆಂದರೆ ಅದಷ್ಟೆ ಅಲ್ಲ. ಭಾರತೀಯ ನಾಟ್ಯ ಪರಂಪರೆಯಂತೆ ಅಭಿನಯವೆಂದರೆ