ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೬ / ಪ್ರಸ್ತುತ

ಸುವುದು ಇನ್ನೊಂದು ನೆಲೆ. ಹಿಂದಿನ ಪ್ರಸಂಗ ಕರ್ತೃಗಳು ಬರೆದಿರುವ ಪ್ರಸಂಗಗಳಲ್ಲೆ, ಆಧುನಿಕ ಪ್ರೇಕ್ಷಕನನ್ನು ಶುದ್ಧ ಲೌಕಿಕ ಮಟ್ಟದಲ್ಲಿ ಕೆಣಕುವ, ತಟ್ಟುವ ವಸ್ತುಗಳಿವೆ. ಇವುಗಳನ್ನು ರಂಗಕೃತಿಗಳಾಗಿ ಯಕ್ಷಗಾನದಲ್ಲಿ ಪ್ರಸ್ತುತಗೊಳಿಸಿ ತರುವುದು ಮೊದಲ ಹಂತದ ಕೆಲಸ. ಭೀಷ್ಮವಿಜಯ'ವೆಂಬ ಪ್ರಸಿದ್ಧವಾಗಿರುವ ಅಂಬೆಯಕತೆಯನ್ನು, ಒಂದು ಹೆಣ್ಣಿನ ದುರಂತವಾಗಿಯೇ ಮಂಡಿಸಬಹುದು. ಸಾಲ್ವ - ಅಂಬೆಯವರ ಪ್ರಣಯ, ಪ್ರಣಯಭಂಗದ ವಸ್ತುವಿಗೇ ಒತ್ತು ಕೊಟ್ಟರೆ ಈ ಕತೆ ಪ್ರಸಂಗದ ಅರ್ಧಾಂಶವೇ ಒಂದು ಸ್ವತಂತ್ರ ರಂಗಕೃತಿಯಾಗುತ್ತದೆ. 'ಪ್ರಹ್ಲಾದ ಚರಿತ್ರೆ' ಶೈವ-ವೈಷ್ಣವರ ಜಗಳದ ಕತೆ ಆಗಬೇಕಿಲ್ಲ. ಅದು, ತಂದೆಯ ದುರಾಡಳಿತದ ವಿರುದ್ಧ ಮಗನ ಪ್ರತಿಭಟನೆಯ ಕತೆ ಆಗಬಹುದು. ಆ ರೀತಿ ಅದನ್ನು ಮಂಡಿಸಬಹುದು.
ಇತಿಹಾಸವಾಗಲಿ, ಐತಿಹ್ಯ ಪುರಾಣಾದಿ ಕಥಾನಕಗಳಾಗಲಿ, ಕಾವ್ಯ ಮೊದಲಾದ ಹಿಂದಣ ರಚನೆಗಳನ್ನಾಗಲಿ - ನೋಡುವ ನೋಟಗಳು ಎರಡು. ಒಂದು, ಅಂದಿನ ಆ ಕೃತಿ, ಯಾವ ಸಾಮಾಜಿಕ ಚಾರಿತ್ರಿಕ ಧಾರ್ಮಿಕ ಸನ್ನಿವೇಶದಲ್ಲಿ ಹುಟ್ಟಿತು, ಏನು ಕೊಟ್ಟಿತು, ಅದು ಹೇಗೆ ಅಂದಿನ ಪರಿಸ್ಥಿತಿಯ ನಿಷ್ಪನ್ನವಾಗಿದೆ, ಅದು ಅಂದಿನ ಜನರಿಗೆ ಹೇಗೆ ಅರ್ಥವಾಗಿರಬಹುದು ಅಥವಾ ಆಗಬೇಕೆಂದು ಕೃತಿಕಾರ ಬಯಸಿರಬಹುದು, ಅದರ ಸಾಂಸ್ಕೃತಿಕ ಒಳಹೊರಗುಗಳೇನು ಮುಂತಾಗಿ ನೋಡುವುದು. ಕೃತಿಯನ್ನು ಅರ್ಥಮಾಡಿಕೊಳ್ಳಲು ಈ ದೃಷ್ಟಿ ಆವಶ್ಯಕವೇ ನಿಜ. ಇನ್ನೊಂದು ದೃಷ್ಟಿ, ಆ ಕೃತಿ ನನಗೆ ಈಗ ಹೇಗೆ ಅರ್ಥವಾಗುತ್ತದೆ ಅಥವಾ ಜನ ಇಂದು ಅದನ್ನು ಹೇಗೆ ಸ್ವೀಕರಿಸಬೇಕೆಂದು ನಾನು ಭಾವಿಸುತ್ತೇನೆ, ಅದು ಇಂದಿನ ಸಾಂಸ್ಕೃತಿಕ ಸಾಮಾಜಿಕ ಸನ್ನಿವೇಶದಲ್ಲಿ ಏನು ಅರ್ಥ, ಧ್ವನಿ, ನೀಡಬಲ್ಲುದು ಮತ್ತು ಹೇಗೆ ಮತ್ತು ಎಷ್ಟು ಪ್ರಸ್ತುತವಾದದ್ದು ಎಂಬ ದೃಷ್ಟಿ, ಸೃಷ್ಟಿಶೀಲ ಪುನಾರಚನೆಕಾರನಿಗಾಗಲಿ, ವಿಮರ್ಶಕನಿಗಾಗಲಿ ಈ ದೃಷ್ಟಿಯ ಅಷ್ಟೆ ಮುಖ್ಯ. ಒಂದು ಕೃತಿಯನ್ನು ರಂಗಮಾಧ್ಯಮದ ಮೂಲಕ ಅಭಿವ್ಯಕ್ತಿಸುವುದಾದರೆ, ಅಥವಾ ಹಿಂದಣ ವಸ್ತುವೊಂದನ್ನು ಕಾವ್ಯ, ಕಾದಂಬರಿ, ನಾಟಕಾದಿ ಮಾಧ್ಯಮದಿಂದ ನಾವು ಇಂದು ರಚಿಸು ವುದಾರೆ, ಎರಡನೆಯ ದೃಷ್ಟಿಯೇ ಮುಖ್ಯವಾದದ್ದೆನ್ನಬೇಕಾಗುತ್ತದೆ.

ಷೆಕ್ಸ್ ಪಿಯರನ ಕೃತಿಗಳು, ತಾನು ಆರಿಸಿದ ವಸ್ತುವಿನ ಸತ್ವದೊಂದಿಗೆ, ಅಂದಿನ ಇಂಗ್ಲೆಂಡ್, ಅಂದಿನ ಎಲಿಜಬೆತನ್ ಸಮಾಜದ ನಿಷ್ಪನ್ನವಾಗಿ ಇರುವುದು ಸ್ಪಷ್ಟ, ಕಾಳಿದಾಸನ ಕೃತಿಗಳು ಸಮೃದ್ಧವಾದ ಸಮಾಜವೊಂದರಲ್ಲಿ ಬದುಕಿದ ಪ್ರತಿಭಾನ್ವಿತ ಕವಿಯ ಕುಶಲತೆಗಾರಿಕೆಯ ಸೃಷ್ಟಿಗಳು. ಆದರೆ, ಇವು ಅಷ್ಟೆ ಆಗಿ ನಮಗಿಂದು ಪ್ರಸ್ತುತವಾಗುವುದಲ್ಲ. ಅದೇ ಕೃತಿ ನಮಗೆ ಇಂದು ಏನನ್ನು ನೀಡೀತು ಎಂಬುದಗ ನೋಟದಿಂದ ಪರಿಭಾವಿಸುವುದು, ನ್ಯಾಯಸಂಗತ. ನಿಮ್ಮ ಯಕ್ಷಗಾನ ಪ್ರಸಂಗ