ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಾಂಪ್ರದಾಯಿಕ ಕಲೆ: ಪ್ರಸ್ತುತತೆಯ ಪ್ರಶ್ನೆ

ಗಳನ್ನು, ಪುರಾಣಗಳನ್ನೂ ಈ ದೃಷ್ಟಿಯಿಂದಲೇ ನಾವು ಪರಿಶೀಲಿಸಬೇಕಾಗಿದೆ. ಕುಚೇಲ ಕತೆ ನಮಗಿಂದು ನೀಡುವ ರಂಜನೆ, ಅದರಲ್ಲಿನ ಕುಚೇಲನ ಭಕ್ತಿಯ ಪುಳ ಕದಿಂದ ಅಲ್ಲ. ಬಡವನಾದರೂ ಮೈತ್ರಿಯಲ್ಲಿ ಗಾಂಭೀರವನ್ನುಳಿಸಿದ ಕುಚೇಲ, ಅವನ ಸಂಸಾರದ ಒತ್ತಡ, ಕೃಷ್ಣನ ಮಿತ್ರಪ್ರೇಮದ ರೀತಿಗಳ ಸಾಮಾನ್ಯ ಸರ್ವ ಮಾನವ ಸಾಮಾನ್ಯವಾದ ಚಿತ್ರದಿಂದಾಗಿ, ಹಾಗಾಗಿ ಇಂದಿನ ಕಲಾವಿದನ | ನಿರ್ದೇಶ ಕನ ಕೆಲಸ, ಕೃತಿಯ ಆಶಯವನ್ನು ಯಥಾವತ್ತಾಗಿ ಪ್ರಕಾಶಿಸುವುದಲ್ಲ, ಅದಕ್ಕೆ ತಾನು ಮಾಡುವ ಅರ್ಥವನ್ನು ಅಭಿವ್ಯಕ್ತಿಸುವುದು. ಕೃತಿಯು ನಮಗೆ ಅರ್ಥವಾಗು ವುದು ನಮ್ಮ ವಿದ್ಯೆ, ಬುದ್ಧಿ, ದೃಷ್ಟಿ ಧೋರಣೆಗಳ ಸಂಸ್ಕಾರ ಹೇತುಗಳಿಂದಲೇ ಹೊರತು, ಮೂಲ ಕರ್ತೃವಿನ ಭಾವದ ಯಥಾವತ್‌ ಸಂಸ್ಕಾರದಿಂದ ಅಲ್ಲ.

ಎಲ್ಲ ಕೃತಿಗಳಿಗೂ ಅದರ ನಿನ್ನೆ, ಇಂದು, ನಾಳೆಗಳಿವೆ. ಇಂದು ರಚನೆ ಯಾದ ಕೃತಿಗೂ ಒಂದರ್ಥದಲ್ಲಿ ಹಾಗೆ ಇವೆ. ಅದರ ಪ್ರೇರಣೆ, ಹಿನ್ನೆಲೆಗಳೇ ಅದರ 'ಹಿಂದು', ಅದರ ಪರಿಣಾಮ, ಇಂದಿನ ಅರ್ಥ ಅದರ 'ಇಂದು, ಅದರ ಮೇಲಿನ ವಿಮರ್ಶೆ, ಮುಂದಿನ ಜನಾಂಗಕ್ಕೆ ಅದರ ಅರ್ಥ, ಅದರ 'ಮುಂದು. ಹಳೆಯ ಕೃತಿ ಗಾದರೆ, ಅದು ಮೂರು ಕಾಲಗಳಲ್ಲಿ ನೀಡಿದ ಅರ್ಥವೇ ಅದರ ಹಿಂದು, ಇಂದು, ಮುಂದುಗಳು ಆಗಿರುತ್ತವೆ. ಒಂದು ಅರ್ಥದಲ್ಲಿ ಹೇಳಬೇಕೆಂದರೆ, ವಾಲ್ಮೀಕಿ ರಾಮಾಯಣ ವಾಲ್ಮೀಕಿಯ ಕಾಲದ್ದು ಭಿನ್ನ, ಇಂದಿನದು ಭಿನ್ನವಾಗಿದೆ. ಕೃತಿ ಅದೇ. ಆದರೆ ಅದನ್ನು ಓದುವ ಸಾಮಾಜಿಕ ಸನ್ನಿವೇಶಗಳು ಭಿನ್ನ ಭಿನ್ನ, ಸತ್ವಯುತವ ಲ್ಲದ ಕೃತಿ ನಿನ್ನೆಯನ್ನು ದಾಟಲಾರದೆ ಹೋಗುತ್ತದೆ. ಇಂದು ಮುಂದುಗಳಿಗೆ ಅದು ನಿಜವಾಗದೆ ಹೋಗುತ್ತದೆ. ಕ್ರಿ. ಪೂ. ಮುನ್ನೂರರ ಸೊಘೋಕ್ಲಿಸನ ಅಂತಿಗೊನೆ, ಕ್ರಿ. ಪೂ. ಇನ್ನೂರರ ಶೂದ್ರಕನ ಮೃಚ್ಛಕಟಿಕ, ಅದಕ್ಕೂ ಹಿಂದಿನ ಮಹಾಭಾರತದ ಯುಧಿಷ್ಠಿರ, ಕೃಷ್ಣರು ನಮಗೆ ಇಂದು ರೆಲವೆಂಟ್ ಆಗುವುದು ಅವರು ತೋರ್ಪಡಿಸುವ ಸಾರ್ವಕಾಲಿಕ, ವಾಸ್ತವ ಭಾವದ ಕಲಾತ್ಮಕ ಅಭಿವ್ಯಕ್ತಿ ಗಳಿಂದ, ಜೀವಂತ ಸಂಘರ್ಷಗಳಿಂದ. ನಾವಿಂದು ಮಾನಸಿಕವಾಗಿ ಸ್ಪಂದಿಸದ ಅಂಶ ಗಳಿದ್ದರೆ, ಅವು ವಿವರಕ್ಕಾಗಿ ಮಾತ್ರ ಇವೆ. ಐತಿಹಾಸಿಕ ಕಾರಣಕ್ಕಾಗಿ ಮತ್ತು ನೆಗೆ ಟಿವ್ ಪ್ರಯೋಜನಕ್ಕಾಗಿ ಹೊರತು ಉಪಾದೇಯವಾಗಿ ಅಲ್ಲ. ನಳಚರಿತ್ರೆ ನಮ ಗಿಂದು ನಳನ ಬದುಕಿನ ಏಳು ಬೀಳುಗಳ ಕತೆಯೇ ನಿಜ ಹೊರತು, 'ಶನಿಮಹಾತ್ಮೆ' ಯಾಗಿ ಅಂಗೀಕಾರಾರ್ಹವಲ್ಲ. ನಳನ ಕತೆಯಲ್ಲಿ ಶನಿಯ ಪಾತ್ರವು ನಮಗಿಂದು ಕತೆಗೆ ತಿರುವು ನೀಡುವ ಒಂದು ಕೀಲಿ, ಒಂದು ರಮ್ಯ ಕಲ್ಪನೆ ಮತ್ತು ಒಂದು ತಾಂತ್ರಿಕ ಆವಶ್ಯಕತೆ (technical need ಮಾತ್ರ) ಹೊರತು ಬೇರೆಯಲ್ಲ.

ಇಂತಹ ಪ್ರಸ್ತುತತೆಯನ್ನು ಸಾಧಿಸಲು, ಉಪಲಬ್ಧ ಕೃತಿಗಳನ್ನು ಬಳಸುವುದು