ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ






ಉತ್ತರ ಕನ್ನಡ ಯಕ್ಷಗಾನ ಪರಂಪರೆ:
ಕೆಲವು ನೋಟಗಳು

ಕರ್ನಾಟಕ ಕರಾವಳಿಯ ಯಕ್ಷಗಾನ ರಂಗಭೂಮಿಯಲ್ಲಿ ಮೂರು ಮುಖ್ಯ ಪ್ರಭೇದಗಳಿವೆ. ತೆಂಕುತಿಟ್ಟು, ಬಡಗುತಿಟ್ಟು, ಮತ್ತು ಉತ್ತರ ಕನ್ನಡತಿಟ್ಟು. ಉತ್ತರ ಕನ್ನಡ ತಿಟ್ಟನ್ನು ಬಡಗುತಿಟ್ಟಿನ ಒಂದು ಪ್ರಭೇದವಾಗಿ ಗ್ರಹಿಸಿ ಬಡಗ ಬಡಗುತಿಟ್ಟು ಎಂದೂ ಹೇಳುವುದುಂಟು. ಈ ತಿಟ್ಟು ಅಥವಾ ಪದ್ಧತಿಗಳನ್ನು, ಅವುಗಳ ಕೇಂದ್ರಸ್ಥಾನಗಳಾದ ಊರುಗಳ ಮೂಲಕ ಗುರುತಿಸಿ ಹೇಳುವುದಾದರೆ, ಕುಂಬಳೆತಿಟ್ಟು (ತೆಂಕು), ಕುಂದಾಪುರತಿಟ್ಟು (ಬಡಗು) ಮತ್ತು ಹೊನ್ನಾವರತಿಟ್ಟು (ಉ. ಕ.) ಎಂದೂ ಹೇಳಬಹುದು. ಕಳೆದ ಎರಡು ದಶಕಗಳಲ್ಲಿ ಉತ್ತರ ಕನ್ನಡ ತಿಟ್ಟು, ಉಳಿದೆರಡು ತಿಟ್ಟುಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿರುವುದು ಪ್ರತ್ಯಕ್ಷವಾಗಿದೆ, ಈ ಪ್ರಕ್ರಿಯೆ ಈಗಲೂ ಮುಂದುವರಿಯುತ್ತಿದ್ದು, ಇದರೊಂದಿಗೆ ಈ ತಿಟ್ಟು ಉಳಿದ ತಿಟ್ಟುಗಳಿಂದಲೂ ಪ್ರಭಾವಿತವಾಗಿದೆ, ಸ್ವಲ್ಪ ಪ್ರಮಾಣದಲ್ಲಿ.

ಉತ್ತರ ಕನ್ನಡ ಯಕ್ಷಗಾನ ರಂಗದ ವೈಶಿಷ್ಟ್ಯ ಮತ್ತು ಕೊಡುಗೆಗಳನ್ನು ಕುರಿತಾಗಿ, ಅಧ್ಯಯನದ ಪ್ರಯತ್ನಗಳು ನಡೆದಿದ್ದು, ಈ ನಿಟ್ಟಿನಲ್ಲಿ ಇಲ್ಲಿ ಮಂಡಿತ ವಾದ ಪ್ರಬಂಧಗಳೂ ಮಹತ್ತ್ವದ್ದಾಗಿವೆ. ಡಾ| ರಾಮಕೃಷ್ಣ ಜೋಶಿ ಅವರು ಇಡಗುಂಜಿ ಮೇಳದ ಬಗೆಗೆ ಬರೆದಿರುವ ಮಹಾಪ್ರಬಂಧ, ಜಿ. ಎಸ್. ಭಟ್ ಸಾಗರ ಇವರು ಕೆರೆಮನೆ ಶಂಭು ಹೆಗಡೆ ಅವರ ಕುರಿತು ಬರೆಯುತ್ತಿರುವ ಗ್ರಂಥ_ಇವು ಈ ನಿಟ್ಟಿನಲ್ಲಿ ಮಾತ್ರವಲ್ಲ, ಒಟ್ಟು ಯಕ್ಷಗಾನದ ಅಧ್ಯಯನದಲ್ಲಿ ತುಂಬ ಮುಖ್ಯವಾಗಿವೆ. ಹೀಗೆ, ಒಂದು ತಿಟ್ಟನ್ನು ಮಾತ್ರವಲ್ಲ, ಅಲ್ಲಿನ ಒಂದೊಂದು ಒಳ ಪ್ರಭೇದವನ್ನೂ ಕುರಿತು ಅಭ್ಯಾಸ ಜರಗಬೇಕಾಗಿದೆ, ಈ ದೃಷ್ಟಿಯಿಂದ ಕರ್ಕಿ ಹಾಸ್ಯಗಾರ ಮನೆತನದ ಸಂಪ್ರದಾಯವನ್ನೂ, ಅಂಕೋಲಾ ಪ್ರದೇಶದ ಯಕ್ಷಗಾನ ರೂಪವನ್ನೂ, ಗಟ್ಟದ ಮೇಲಣ ಯಲ್ಲಾಪುರ, ಶಿರಸಿ, ಸಿದ್ದಾಪುರ ಕಡೆಗಿನದನ್ನೂ