ವಿಷಯಕ್ಕೆ ಹೋಗು

ಪುಟ:ಪ್ರಸ್ತುತ.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೨ / ಪ್ರಸ್ತುತ

ಕುಣಿತ ಮತ್ತು ವಿವರವಾದ ಅಭಿನಯಗಳು ಪ್ರಧಾನ ವಿಶೇಷತೆ. ಹಾಡಿನ ಒಟ್ಟು ಭಾವವನ್ನು ಮತ್ತು ಬಿಡಿಬಿಡಿಯಾಗಿ ಶಬ್ದಗಳ ಮತ್ತು ಸೊಲ್ಲುಗಳ ಅರ್ಥವನ್ನು ಆಂಗಿಕ ಚಲನೆ, ಹಸ್ತಾಭಿನಯ, ಮುಖಭಾವ, ದೇಹ ಭಂಗಿಗಳ ಮೂಲಕ ತೋರಿ ಸುವ ಸಾಧ್ಯತೆಯ ಸೂಕ್ಷ್ಮಗಳನ್ನು ಇಲ್ಲಿನ ಕಲಾವಿದರು ಕರಗತಮಾಡಿಕೊಂಡಿದ್ದಾರೆ. ಈ ಕ್ರಮಕ್ಕೆ ಇಲ್ಲಿ ಶತಮಾನಗಳ ಪರಂಪರೆ ಇರುವುದರಿಂದಲೇ, ಇಲ್ಲಿನ ಸಾಮಾನ್ಯ ಮಟ್ಟದ ಕಲಾವಿದನಲ್ಲೂ ಅದು ಸಾಕಷ್ಟು ಪ್ರೌಢವಾಗಿ ವ್ಯಕ್ತವಾಗುವುದನ್ನು ಈಗಲೂ ಕಾಣಬಹುದು. ಹಿಂದೆ ಕಲಾವಿದರು ಹಸ್ತಾಭಿನಯವನ್ನು ಕ್ರಮವಾಗಿ ಗುರುಮುಖದಿಂದ ಕಲಿಯುವ ಪದ್ಧತಿ ಇತ್ತೆಂದೂ, ನಾಟ್ಯಶಾಸ್ತ್ರದಂತಹ ಗ್ರಂಥಗಳ ವಿವರಗಳ ನೆರವಿನಿಂದ ಕಲಿಸುತ್ತಿದ್ದರೆಂದೂ ಕೆರೆಮನೆ ಮಹಾಬಲ ಹೆಗ್ಡೆ ಅವರು ತಿಳಿಸಿದ್ದಾರೆ. ತಾಳಮದ್ದಲೆಯಲ್ಲೂ, ಕುಳಿತುಕೊಂಡಲ್ಲಿ ವಿವರವಾದ ಅಭಿನಯ ಮುದ್ರೆಗಳನ್ನು ತೋರಿಸುವ ಕ್ರಮವು ಇತ್ತೀಚಿನವರೆಗೆ ಪ್ರಚಲಿತವಿದ್ದು, ಇದೀಗ ಅದು ಮರೆಯಾಗಿದೆ. ಮುಖ್ಯವಾಗಿ ಭಾವಪ್ರಧಾನವಾಗಿದ್ದ ತಾಳಮದ್ದಲೆ ರಂಗ ಭೂಮಿ, ದಕ್ಷಿಣ ಕನ್ನಡದ ವಿಚಾರ ಪ್ರಧಾನವಾದ ಮಾತುಗಾರಿಕೆಯ ಪ್ರಭಾವಕ್ಕೆ ಒಳಗಾದುದೂ, ಆಟ ಬೇರೆ, ತಾಳಮದ್ದಲೆ ಬೇರೆ ಎಂಬ ರೀತಿಯಿಂದ ಜನರು ನೋಡಲಾರಂಭಿಸಿ, ಹಸ್ತಾಭಿನಯ ಇಲ್ಲಿ ಅನಾವಶ್ಯಕ ಎನಿಸಿದ್ದೂ ಇದಕ್ಕೆ ಕಾರಣವಿರ ಬಹುದು.

ಉತ್ತರ ಕನ್ನಡದಲ್ಲಿ ಕೆಲವೆಡೆ ಪ್ರಚಲಿತವಿತ್ತೆನ್ನಲಾದ ಮಜಾಯಿಶಿಕೆ ಅಥವಾ ಮಜಾಸ್ಕಿ (ಉಲ್ಲೇಖ: ಇದೇ ಗೋಷ್ಠಿಯ ಪ್ರಬಂಧ: ವಿಜಯ ನಳಿನಿ ರಮೇಶ್) ಅಭಿನಯ ಮಾತ್ರವಲ್ಲ ವೇಷಗಳಿಂದಲೂ ಕೂಡಿರುತ್ತಿತ್ತಂತೆ. ಇದೇ ರೀತಿಯಲ್ಲಿ, ಕಾಸರಗೋಡಿನ ಪಡ್ರೆ ಮೊದಲಾದೆಡೆಗಳಲ್ಲಿ ಆಟದ ಕೆಲವು ಅಂಶಗಳಾದ ಆರ್ಭಟ, ಅಟ್ಟಹಾಸ, ರಾಕ್ಷಸ ಪಾತ್ರದ ಬಾರಣೆ (ಊಟ) ಮೊದಲಾದುವನ್ನು ಹೊಂದಿದ್ದ ತಾಳಮದ್ದಲೆಗೆ ಅಲ್ಲೂ ಮಜಾಯಿಶಿಕೆ ಎಂಬ ಹೆಸರೇ ಇತ್ತು. ಈ ಪದವು ಮುಖ್ಯ ವಾಗಿ, ಕಾಸರಗೋಡು ತಾಲೂಕಿನ ಪಡ್ರೆ ಗ್ರಾಮದಲ್ಲಿರುವ ಮರಾಠಿ ಮೂಲದ ಕರಾಡ ಪದ್ಯೆ ಬ್ರಾಹ್ಮಣರಲ್ಲಿ ಬಳಕೆಯಲ್ಲಿತ್ತು. ಆದರೆ, ಅಲ್ಲಿ ಮಜಾಯಿಶಿಕೆಯು ವೇಷ ಸಹಿತವಿರಲಿಲ್ಲ.

ಆರ್ವಾಚೀನ ಕಾಲದ ತಾಳಮದ್ದಲೆ ರಂಗಭೂಮಿಯ ಮುಖ್ಯ ಕ್ಷೇತ್ರ ದಕ್ಷಿಣ ಕನ್ನಡ, ಅದರಲ್ಲೂ ಉಡುಪಿಯಿಂದ ದಕ್ಷಿಣಕ್ಕೆ ಕಾಸರಗೋಡು ವರೆಗಿನ ಪ್ರದೇಶ, ತಾಳಮದ್ದಲೆಯಲ್ಲಿ ಅತ್ಯಂತ ಪ್ರತಿಭಾಪೂರ್ಣವಾದ ವಿದ್ಯಮಾನಗಳು ನಡೆದುದು ಅಲ್ಲೆ. ಆದರೆ, ಉ. ಕನ್ನಡದ ತಾಳಮದ್ದಲೆಗಳಿಗೆ ತನ್ನದಾದ ಸೊಗ ಸಿದೆ, ಹಲವು ಉತ್ತಮ ಅರ್ಥದಾರಿಗಳನ್ನು ಈ ಜಿಲ್ಲೆ ನೀಡಿದೆ. ಸದ್ಯ ಈ ಪ್ರದೇಶ ದಲ್ಲಿ ಗಮನಿಸಬೇಕಾದ ಒಂದು ಬೆಳವಣಿಗೆಯೆಂದರೆ, ಒಳ್ಳೆಯ ಗುಣಮಟ್ಟವುಳ್ಳ ಹತ್ತಾರು ತರುಣ ಅರ್ಥದಾರಿಗಳು ಕಾಣಿಸಿಕೊಂಡಿರುವುದು. ತಾಳಮದ್ದಲೆಯ