ವಿಷಯಕ್ಕೆ ಹೋಗು

ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F ೬ನೇ ಪ್ರಕರಣ] ಹೇಮಚಂದ್ರರಾಜ ವಿಲಾಸ ನೀನು ಮುಂದೆ ಪ್ರಯೋವಂತನಾಗಿರಬೇಕಾದರೆ ನನ್ನ ಹೆಣವನ್ನು ಒಪ್ಪಾಮಾಡು. ನನ್ನಲ್ಲಿರುವ ಕಾಗದವನ್ನು ಕೊಂಡುಹೋಗಿ ಕುಮಂತ್ರರಿಗೆ ಕೊಡು, ನೀಲಪ್ರರೀ ಸೇನೆಯವರಲ್ಲಿ ಅವರನ್ನು ಹುಡುಕು, ಹಾ, ಅಕಾಲಮರಣವೇ ! ಸತ್ತೆನಲ್ಲಾ ! (ಪ್ರಾಣಬಿಡುವನು.) ಕುಕ್ಕ-ನಿನ್ನನ್ನು ನಾನು ಬಲ್ಲೆ ಕಣೆಲಾ ; ನೀನು ದುಪ್ಪಾರಕ್ಕೆಲ್ಲಾ ದರ್ಶಿಯಾಗಿದ್ದ ಖೂಳ ; ಕೆಟ್ಟತನಕ್ಕೆ ಎಷ್ಟು ಬೇಕೋ ಅಷ್ಮರಮಟ್ಟಿಗೂ ನಿನ್ನೊಡತಿಯ ದುರಾ ಚಾರಕ್ಕೆ ಸಹಕಾರಿಯಾಗಿದ್ದವ. ದುಃಖ.ಏನು ಆವ ಸತ್ತುಹೋದನೆ ? ಕುಜೀಯಾ, ಇಲ್ಲಿ ಕೂತುಕೊಳ್ಳಿ, ಸುದಾರಿಸಿಕೊಳ್ಳಿ. ಈ ಲಕ್ರೋಟನ್ನು ಒಡೆದು ನೋಡೋಣ, ಅವ ಹೇಳುವ ಕಾಗದ ನನ್ನ ಸ್ನೇಹಿತನದಾಗಿರಬಹುದು. ಇವ ಸತ್ತು ಹೋದ. ಇವನ ವಧಕನಾಗುವುದಕ್ಕೆ ಇನ್ನು ಯಾರೂ ಇರಲಿಲ್ಲವಲ್ಲಾ ಎಂದು ವ್ಯಸನವಾಗಿದೆ. ಆ ಕಾಗದ ನೋಡೋಣ ; ಆರಗೆ, ಬಿಡು. ನೀತಿಯ, ದೋಷಾರೋಪಣೆಮಾಡಬೇಡ. ನಮ್ಮ ಶತ್ರುಗಳ ಮನಸ್ಸನ್ನು ತಿಳಿಯುವುದಕ್ಕೆ ಅವರ ಹೃದಯವನ್ನೆ ಒಡೆದು ತೆಗೆಯುತ್ತೇವೆ ; ಹೀಗಿರುವಲ್ಲಿ, ಅವರ ಕಾಗದ ವನ್ನು ಒಡೆದು ತೆಗೆಯುವುದು ನಾದುವಾಗಿಯೇ ಇದೆ. (ಓದುತಾನೆ) “ನಾವು ಪರಸ್ಪರಮಾಡಿದ ಶಪಥ ಜ್ಞಾಪಕವಿರಲಿ, ಅವನನ್ನು ಕಡಿದುಹಾಕುವುದಕ್ಕೆ ಸಮಯ ಅನೇಕವಾಗಿ ದೊರೆಯುವುದು. ನಿಮ್ಮ ಮನಸ್ಸು ಒಂದು ನಿಶ್ಚಯವಾ ಗಿದ್ದರೆ ಕಾಲವೂ ಸ್ಥಳವೂ ಅನುಕೂಲವಾಗಿ ದೊರಕಿಸಲಾದೀತು. ಅವ ಜೈತೇಲ ನಾಗಿ ಬಂದರೆ ಯಾವುದೂ ನಡೆಯುವುದಿಲ್ಲ. ಹಾಗಾದರೆ ನಾನು ಅವನ ಕೈಸೆರೆಗೆ ಸಿಕ್ಕಿದೆ ; ಅವನ ಹಾಸುಗೆಯೇ ನನ್ನ ಕಾರಾಗೃಹ ; ಅದರ ಸಹ್ಯವಲ್ಲದ ಶಾಖದಿಂದ ನನ್ನನ್ನು ಬಿಡುಗಡೆಮಾಡಿ, ತಾವುಪಟ್ಟ ಶ್ರಮ ಸಾರ್ಥಕವಾಗುವಂತೆ ಅವನ ಸ್ಥಾನಕ್ಕೆ ತಾವು ನಿಲ್ಲಬೇಕು. ತಮ್ಮ ಭಾರೈ ಎಂದು ಹೇಳಲು ಮನಸ್ಸುಳ್ಳ ತಮ್ಮ ಪ್ರೇಮಾಸ್ಪದಳಾದ ಸೇವಕಳು. ನಾಗವೇಣಿ ? ಹಾ! ಮಿತಿಮರೆ ಇಲ್ಲದ ಸಿ ಮನಸ್ಸೆ ! ಸಜ್ಜನನಾದ ಆಕೆ ಗಂಡನ ಪ್ರಾಣ ವನ್ನು ತೆಗೆದು ನನ್ನ ತಮ್ಮನನ್ನು ಅವನ ಸ್ಥಾನಕ್ಕೆ ಇಟ್ಟುಕೊಳ್ಳಬೇಕೆಂದು ಫಿತೂರಿಯೇ ! ಎಲ ಮಹಾಘಾತುಕ, ನಿನ್ನನ್ನು ಈ ಮರಳ ಕೆದಕಿ ಹೂಳುವೆನು, ಮರಣಕ್ಕೆ ಗುರಿಯಾಗುತ್ತಿದ್ದ ಭದ್ರನಾಥನ ದೃಷ್ಟಿಗೆ ಈ ಲೇಖನದೊಡನೆ ಹ್ಯಾಗಾ ದರೂ ಬೀಳುತೇನೆ ; ಆತನಿಗೆ ನಿನ್ನ ಕಾರೈವನ್ನೂ ನಿನ್ನ ಮರಣವನ್ನೂ ತಿಳಿಸ ತಕ್ಕದ್ದು ಸರಿಯಾಗಿದೆ.