Nod ಹೇಮಚಂದ್ರರಾಜ ವಿಲಾಸ [೪ನೇ ಅಂಕ, . ದುಃಖ-ದೊರೆಗೆ ಹುಚ್ಚು. ನನಗೆ ಪ್ರಾಪ್ತವಾಗಿರುವ ಅತಿತೀಕ್ಷವಾದ ಕೋಕ ವನ್ನೂ ಲಕ್ಷ್ಯಮಾಡದೆ ಬದುಕಿದೇನಲ್ಲಾ, ನನ್ನ ಅಲ್ಪಬುದ್ದಿಯು ಮೂರ್ಖತನೆ ಇನ್ನೆಂಥಾದ್ದೋ ನಾನು ಕಾಣೆ! ನನಗೂ ಬುದ್ಧಿ ವಿಕಲ್ಪವಾಗಿದ್ದರೆ ಚೆನ್ನಾಗಿತ್ತು: ಹಾಗಾಗಿದ್ದರೆ ನನ್ನ ದುಃಖವೂ ನನ್ನ ಬುದ್ಧಿಯೂ ಪರಸ್ಪರ ಸಂಬಂಧವಿಲ್ಲದೆ ಪ್ರತ್ಯೇಕವಾಗಿ, ಚಿಂತೆಯು ಇಲ್ಲದ್ದನ್ನು ಊಹಿಸಿಕೊಳ್ಳುತ್ತಾ ತನ್ನನ್ನು ತಾನು ಮರೆಯುತಿತ್ತು. (ದೂರದಲ್ಲಿ ಬೇರೀಶಬ್ದ.) ಕುಜೀಯ, ನನ್ನ ನಮಸ್ತಾರವನ್ನು ಸ್ವೀಕರಿಸಿ, ದೂರದಲ್ಲಿ ರಣಭೇರೀನಿನಾದ ಕೇಳಿಬರುವ ಹಾಗೆ ತೋರುತ್ತಿದೆ. ತಮ್ಮನ್ನು ಒಬ್ಬ ಮಿತ್ರನಬಳಿಗೆ ಕರೆದು ಕಂಡುಹೋಗಿ ಬಿಡುತ್ತೇನೆ, ಬನ್ನಿ, (ಇಬ್ಬರೂ ಹೋಗುವರು.) Jತ್ತು ೭ನೇ ಪ್ರಕರಣ. ಮಾರದೇಶದ ಪಾಳಯದಲ್ಲಿ ಒಂದು ಗೂಡಾರ, ದೊರೆ ನಿದೆನಾ ಡುತಾ ಹಾಸುಗೇಮೇಲೆ ಮಲಗಿಕೊಂಡಿರುವನು. ಇಂಪಾದ ಗಣನವಾಗುತಿರುವುದು, ಇತರರು ಅಂಗರಕ್ಷಕರಾಗಿರುವರು. ಪ್ರವೇಶ-ಇಂದುಕಲೆ, ನಿಷ್ಕಂಟಕ, ವೈದ್ಯ. ಇಂದು.-ಅಯ್ಯೋ, ಪುಣ್ಯಾತ್ಮನಾದ ನಿಷ್ಮೆಂಟಕನೆ, ನಾನು ಎಷ್ಟು ದಿವಸತಾನೆ ಎದು ಕಿದೆ, ಏನುತಾನೆಮಾಡಿದೆ, ನಿನ್ನ ಒಳ್ಳೆತನಕ್ಕೆ ಸಮಾನವಾದ ಒಳ್ಳೆತನವನ್ನು ತೋರಿಸಿದ್ದೇನೆ ? ನಾನು ಎಷ್ಟು ಬದುಕಿದರೂ ಸ್ವಲ್ಪವೇ ಇದೆ, ಏನುಮಾಡಿದರೂ ಸ್ವಲ್ಪವೇ ಇದೆ. ನಿಮ್ಮಂ.-ಅಮ್ಮರಮಟ್ಟಿಗೆ ಅಂಗೀಕಾರಮಾಡುವುದೇ ಪ್ರತ್ಯುಪಕಾರ ಮಾಡಿದ್ದಕ್ಕಿಂ *ತಲೂ ಹೆಚ್ಚಾಯಿತು, ನನ್ನ ಸಮಾಚಾರವೆಲ್ಲಾ ಸಾಧಾರಣವಾಗಿ ನಿಶ್ಚಯ ವಾದ್ದು. ಇಷ್ಟೇ ಹೊರತು ಹೆಣ್ಣೂ ಇಲ್ಲ ಕಡಮೆಯೂ ಇಲ್ಲ. ಇಂದು-ಸ್ವಾಮಿ, ತಾವು ಬೇರೆ ಉತ್ತಮವಾದ ಉಡುಪನ್ನು ಹಾಕಿಕೊಳ್ಳಿ. ಈ ಬಟ್ಟೆಗಳು ಆ ಅತ್ಯಂತ ಕಪ್ಪಕಾಲದ ಗುರುತಾಗಿವೆ. ಅವುಗಳನ್ನು ತೆಗೆದುಬಿಡಿ. ನಿಮ್ಮ-ತಾಯಿ ಕ್ಷಮಿಸಬೇಕು, ಈಗಲೇ ನಾನು ಇಂಥವನೆಂದು ತಿಳಿಯತಕ್ಕದ್ದು ನಾನು ನೋಡಿರುವ ಸಂಕಲ್ಪಕ್ಕೆ ವಿರೋಧವಾಗುವುದು. ಸಕಾಲದಲ್ಲಿ ಮತ್ತು ದಂಗರ್ಭಸರಿಯಾಗಿದೆ ಎಂದು ನನಗೆ ತೋರುವತನಕ ತಾವು ನನ್ನನ್ನು ಕಾಣದ ವರ ಹಾಗೆಯೇ ಇರಬೇಕೆಂಬುವುದು ನನ್ನ ಪ್ರಾರ್ಥನೆ,
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೧೩
ಗೋಚರ