೧೦೧ ೭ನೇ ಪ್ರಕರಣ.] ಹೇಮಚಂದ್ರರಾಜ ಪಿಲಾಸ. ಇಂದು ಹಾಗಾದರೆ ಹಾಗೆಯೇ ಆಗಲಿ ಸ್ವಾಮಿ. (ವೈದ್ಯನನ್ನು ಕುರಿತು ಮಹಾ ಸ್ವಾಮಿಗೆ ಹ್ಯಾಗಿದೆ ? ವೈದ್ಯ-ತಾಯಿ ಇನ್ನೂ ನಿದ್ರೆಮಾಡುತಿದಾರೆ. ಇಂದು. ಪ್ರಕೃತಿ ಎಲ್ಲಾ ವ್ಯತ್ಯಾಸ ಹೊಂದಿರುವುದನ್ನು ದೇವರೆ, ಕೃಪೆಯಿಂದ ಗುಣ ಮಾಡು, ಮಕ್ಕಳದೆಸೆಯಿಂದ ಬುದ್ದಿ ಕಟ್ಟಿರುವ ತಂದೆಗೆ ಇಂದ್ರಿಯ ಶಾಟವವೇ ಒಂದಕ್ಕೊಂದಕ್ಕೆ ಸಮ್ಮೇಳನವಿಲ್ಲದೆ ಭ್ರಮೆ ಹುಟ್ಟಿದೆ; ಇದನ್ನು ಸರಿಮಾಡು ಸ್ವಾಮೀ ! ವೈದ್ಯ-ತಾಯಿ, ಚಿತ್ರ ಒಪ್ಪಿದರೆ, ಧೋರೆಯವರನ್ನು ಎಬ್ಬಿಸೋಣ ; ಅವರು ಮಲಗಿಕೊಂಡು ಬಹಳ ಹೊತ್ತಾಯಿತು, ಇಂದು ತಮ್ಮ ಶಾಸ್ತ್ರಜ್ಞನಕ್ಕೆ ವಿರೋಧವಿಲ್ಲದಂತೆ ತಮ್ಮ ಮನಸ್ಸಿಗೆ ಬಂದಹಾಗೆ ಮಾಡಿಸಿ, ಅವರಿಗೆ ಬೇರೇ ಉಡುಪು ಹಾಕಿದೆಯೇ ? ದೊಡ್ಡ-ಅವರು ಗಾಢನಿದ್ರೆಯಲ್ಲಿರುವಾಗ ಅವರಿಗೆ ಹೊಸ ಉಡುಪನ್ನು ಹಾಕಿದೆವು. ವೈದ್ಯ-ತಾಯಿ ನಾವು ಎಬ್ಬಿಸುವಾಗ ತಾವು ಸಮೀಪದಲ್ಲಿಯೇ ಇರಬೇಕು, ಅವರ ಬುದ್ಧಿಯು ಸ್ಥಿಮಿತಕ್ಕೆ ಬಂದಿರುವುದರಲ್ಲಿ ಸಂದೇಹವಿಲ್ಲ. ಇಂದು. ಹಾಗೆಯೇ ಆಗಲಿ. ವೈದ್ಯ.ಇನ್ನೂ ಸಮೀಪಕ್ಕೆ ದಯಮಾಡಿಸಿ, ಗಾನ ಗಟ್ಟಿಯಾಗಿ ಆಗಲಿ! ಇಂದು, ಜೀಯಾ, ಅಪ್ಪಾಜಿ, ಈ ಪಾದದಲ್ಲಿಟ್ಟ ನನ್ನ ನೊಸಲೇ ತಮ್ಮ ರೋಗ ವನ್ನು ಹೋಗಲಾಡಿಸುವ ಔಷಧವಾಗಲಿ. ನಮಸ್ಕಾರಕ್ಕೆ ಅರ್ಹವಾದ ತಮ್ಮ ವಾರ್ಧಕ್ಯದಲ್ಲಿ ನಮ್ಮ ಅಕ್ಕಂದಿರು ಮಾಡಿದ ಘಾತುಕತನದ ಯಾತನೆಯನ್ನು ಈ ನನ್ನ ಸಾಷ್ಟಾಂಗಪ್ರಣಾಮವು ಹೋಗಲಾಡಿನಲಿ ! ನಿಮ್ಮಂ.ಹ, ಹ, ಪುತ್ರಿಕಾರತ್ನವೆ, ದಯಾಸಾಗರವೆ ! ಇಂದು ತಾವು ಅವರ ತಂದೆಯಲ್ಲದೇ ಇದ್ದಾಗ್ಯೂ ಈ ನರೆಗೂದಲು ಅವರ ದಯಕ್ಕೆ ಭಾಗಿಯಾಗಬೇಕಾಗಿತ್ತು. ವಿಪರೀತವಾಗಿ ಹೊಡೆಯುತ್ತಿರುವ ಪ್ರಚಂಡಮಾರು ತನಿಗೆ ಬಿಡತಕ್ಕ ಮುಖವೇ ಇದು ? ಆ ಪ್ರಳಯಕಾಲದ ಮೇಘಡಂಬರಕ್ಕೆ ಸಮಾನವಾದ ಗುಡುಗಿನ ಆರ್ಭಟಕ್ಕೂ, ಆ ಆತಿಭಯಂಕರವಾಗಿ ಛಡಾಳಿಸಿ ಹೊಡೆಯುವ ಸಿಡಿಲಿನವೇಗಕ್ಕೂ ಒಂದು ಚೂರುಬಟ್ಟೆಯೂ ಇಲ್ಲದೆ ನಿಲ್ಲತಕ್ಕೆ ತಲೆದೇ ಇದು? ನನ್ನ ಶತ್ರುವಿನ ನಾಯಿಯು ನನ್ನನ್ನು ಬಂದು ಕಚ್ಚಿ ದ್ದಾಗ್ಯೂ, ನಾನು ಕಾಸಿಕೊಳ್ಳುತಿದ್ದ ಬೆಂಕೀ ಸಮೀಪಕ್ಕೆ ಅದನ್ನು ಕರೆತಂದು ನಿಲ್ಲಿಸಿಕೊಳ್ಳಬೇಕಾದಂಥಾ ರಾತ್ರಿಯಾಗಿತ್ತಲ್ಲಾ, ಅದು ! ಹಂದಿನಾಯಿಗಳೂ, ಕಾಡ ಮೃಗಗಳ, ಹುಟ್ಟಗಳ್ಳರೂ, ಅವಿತುಕೊಂಡಿರುವ ಆ ಗುಹೆಯಲ್ಲಿರುವುದು ತಮಗೆ ಸಂತೋಷವಾಗಿತ್ತ, ಅಯ್ಯ ! ಶಿವ ಶಿವಾ! ತಮ್ಮ ಬುದ್ಧಿಸಂಗಡ ತಮ್ಮ
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೧೪
ಗೋಚರ